ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂ-ಡಿರಾ ಸಾಗ-ರ-ದಾ-ಚೆ ಕನ್ನ-ಡ ಕಾಮ-ನ-ಬಿ-ಲ್ಲು !

By Staff
|
Google Oneindia Kannada News

ವಿದೇಶಗ-ಳ ಎಲ್ಲ ಕನ್ನಡ ಕೂಟಗಳೂ ತಮ್ಮ ವಿಶೇಷ ಸಮಾರಂಭಗಳ ಅಂಗವಾಗಿ, ಜೊತೆಗೆ ವರ್ಷಕ್ಕೊಮ್ಮೆಯಾದರೂ ಬೇರೆ ಬೇರೆ ಪ್ರಮಾಣದಲ್ಲಿ ಸಾಹಿತ್ಯ ಸಂಚಿಕೆಗಳನ್ನು ಹೊರ ತರುತ್ತಿವೆ. ಈಗ ನಾವು ಮಾಡುತ್ತಿರುವಂತೆಯೇ ಅವೂ ಕೂಡ ಸಾಹಸದ ಕೆಲಸಗಳೇ. ಇಲ್ಲಿನ ಬರಹಗಾರರನ್ನು ತಮ್ಮ ತಮ್ಮ ಸಾಹಿತ್ಯ ಸಂಪುಟಗಳ ಮೂಲಕ ಅಮೆರಿಕನ್ನಡ ದಂತಹ ನಿಯತ/ಅನಿಯತ ಕಾಲಿಕ ಸಾಹಿತ್ಯ ಪತ್ರಿಕೆಗಳ ಮೂಲಕ ಪೋಷಿಸಿದ ಆ ಎಲ್ಲರೂ ಪರೋಕ್ಷವಾಗಿ ಈ ಸ್ಮರಣ ಸಂಚಿಕೆಯ ಯಶಸ್ಸಿಗೆ ಕಾರಣರು. ಈ ಕೃಷಿಯಲ್ಲಿ ತೊಡಗಿದ ಅವುಗಳ ಸಂಪಾದಕರೂ, ಅವರ ಬೆಂಬಲಿಗರೂ ಅಭಿನಂದನಾರ್ಹರು.

ಡಾ. ಎಂ.ಎಸ್‌. ನಟರಾಜ್‌, ಡಾ. ಅಶ್ವತ್ಥ ಎನ್‌. ರಾವ್‌ ಮತ್ತು ವಿಮಲಾ ಚನ್ನಬಸಪ್ಪ ಅವರುಗಳೊಂದಿಗೆ ಹೆಗಲೆಣೆಯಾಗಿ ದುಡಿದೂ ಹೆಸರನ್ನು ನಿರಾಕರಿಸಿದವರು ನಾಗಲಕ್ಷ್ಮಿ. ಅವರ ಬೆಂಬಲವಿಲ್ಲದಿದ್ದರೆ ಇವಳ ಸಹಾಯವಿಲ್ಲದಿದ್ದರೆ ಈ ಸ್ಮರಣ ಸಂಚಿಕೆಯ (ಮತ್ತು ಇನ್ನು ಉಳಿದ ಎರಡು ಪೂರಕ ಸಂಪುಟಗಳ ) ಕೆಲಸಕ್ಕೆ ಎಂದೋ ಧಕ್ಕೆ ಬರುತ್ತಿತ್ತು. ‘ಗುಲ್ವಾಡೀಕರಣ ’ದ ವಿಚಾರ ತಿಳಿದವರು ಅವರು, ‘ಅಮೆರಿಕನ್ನಡ’ ನಡೆಸಿ, ಸಾರಿನಲ್ಲಿನ ಕರಿಸೊಪ್ಪಿನ ಕರಿಬೇವಿನ ಸೊಪ್ಪಿನ ವಿಚಾರ ಬಲ್ಲವಳು ಇವಳು. ಇವರೆಲ್ಲರ ಸಮಯೋಚಿತ ಸಲಹೆಗಳು ದೋಣಿ ಹೊಯ್ದಾಡುತ್ತಿದ್ದಾಗಲೆಲ್ಲ ಅದರ ಸ್ಥಿರತೆಗೆ ಸಹಾಯಕವಾದವು.

ಜಾಹಿರಾತುಗಳನ್ನು ಸಂಗ್ರಹಿಸುವುದು, ವಿನ್ಯಾಸ ಮಾಡುವುದು, ಎಲ್ಲ ಸರಿಯಾಗಿದೆಯೇ ಎಂದು ಅವುಗಳನ್ನು ಪರಿಶೀಲಿಸುವುದು, ಇದೂ ಅಗಾಧವಾದ ಕೆಲಸವೇ. ಇದರ ಜವಾಬ್ದಾರಿಯನ್ನ ಶ್ರೀ ವತ್ಸಕುಮಾರ ಅವರು ಹೊತ್ತರು. ಅವರೊಂದಿಗೆ ಸಂಚಿಕೆಯ ಆಡ-ಳಿ-ತ ಸಲ-ಹಾ-ಸ-ಮಿ-ತಿ-ಯ-ಲ್ಲಿ-ರು-ವ ಎಲ್ಲ ಕಾರ್ಯ-ಕ-ರ್ತ-ರ ಸಾಮ-ರ್ಥ್ಯ ಸಫಲ-ವಾ-ಗಿ-ದೆ.

ಭಾರ-ತ-ದ-ಲ್ಲಿ ಈ ಗ್ರಂಥ-ಗ-ಳ ಮತ್ತು ಗಣ-ಕ ಸಂಪು-ಟ (ಸಿ.ಡಿ.) ದ ನಿರ್ಮಾ-ಣ-ದ ಬಹು-ಮು-ಖ್ಯ ಹೊಣೆ-ಯ-ನ್ನು ನಿ-ರ್ವ-ಹಿ-ಸಿ-ದ-ವ-ರು ಮಹೇ-ಶ ಭಟ್ಟ-ರು ಮತ್ತು ಅವ-ರ ಸಿ-ಬ್ಬಂ--ದಿ ವರ್ಗ-ದ-ವ-ರು. ರಕ್ಷಾ-ಪು-ಟ-ವ-ನ್ನು ಮುದ್ದಾ-ಗಿ ವಿನ್ಯಾ-ಸಿ-ಸಿ-ದ್ದಾ-ರೆ, ಕಲಾ-ವಿ-ದ-ರು ಸ್ಮರ-ಣ ಸಂಚಿ-ಕೆ-ಯ-ನ್ನು ಅತ್ಯ-ಲ್ಪ ಕಾ-ಲ-ದ-ಲ್ಲಿ-ಯೇ ಬಹು ಅಚ್ಚು-ಕ-ಟ್ಟಿ-ನಿಂ-ದ ಸುಂದ-ರ-ವಾ-ಗಿ ಮುದ್ರಿ-ಸಿ-ಕೊ-ಟ್ಟಿ-ದ್ದಾ-ರೆ, ಬೆಂಗ-ಳೂ-ರಿ-ನ ಮುದ್ರ-ಣಾ-ಲ-ಯ-ದ-ವ-ರು.

ಇಂಥ-ದೊಂ-ದು ಭಾರೀ ಪ್ರಮಾ-ಣ-ದ ಪುಸ್ತ-ಕ ಬೆಳ-ಕು ಕಂಡು, ಬಹು-ಕಾ-ಲ ಉಳಿ--ದು, ಇದು ಭಿನ್ನ-ರು-ಚಿ-ಯ ಕನ್ನ-ಡ ಲೋಕ-ದ ಬಹು-ಜ-ನ-ರ ಮನ-ದ-ಣಿ-ಸು-ವು--ದೆಂ-ಬು-ದು ನಮ್ಮ ಆಶ-ಯ.

ಕನ್ನ-ಡ-ದ ಕಂಪ್ಯೂ-ಟ-ರೀ-ಕ-ರ-ಣ-ಕ್ಕೆ ಶೇಷಾ-ದ್ರಿ ವಾಸು ಅವ-ರ ಬರ-ಹ-ದ -ಕೊ-ಡು-ಗೆ ಅತಿ ಅಮೂ-ಲ್ಯ-ವಾ-ದು-ದು. ಈ ಸ್ಮರ-ಣ ಸಂಚಿ-ಕೆಯ ನಿರ್ಮಾ-ಣಕ್ಕೆ ಬರ-ಹ- 2000 ನ್ನು ಬಳ-ಸಿ-ಕೊಂ-ಡಿ-ದ್ದೇ-ವೆ. ಸಂಪಾ-ದ-ಕ ಸಲ-ಹಾ-ಸ-ಮಿ-ತಿ-ಯ-ಲ್ಲಿ-ದ್ದು ಅವ-ರು ಮಾಡಿ-ದ ಉಪ-ಕಾ-ರ ದೊಡ್ಡ-ದು. ಬೆಂಗ-ಳೂ-ರಿ-ನ-ಲ್ಲಿ ಶೇಷಾ-ದ್ರಿ ವಾಸು ಅವ-ರ ತಂದೆ ಕೆ.ಟಿ. ಚಂದ್ರ-ಶೇ-ಖ-ರ್‌, ಅತೀ-ತ್‌ ಭಾರ-ದ್ವಾ-ಜ್‌, ಉದಾ-ತ್ತ ಭಾರ-ದ್ವಾ-ಜ್‌, ಹೊ.ರಾ. ಸತ್ಯ-ನಾ-ರಾ-ಯ-ಣ ಮತ್ತು ಶಿವ-ಮೊ-ಗ್ಗ-ದ ಕೇಶ-ವ ಗಣ-ಕ ಕೇಂದ್ರ-ದ ಬಾಲಾ-ಜಿ ಪಾಂಡು-ರಂ-ಗ ಮತ್ತು ಶ್ರೀನಿ-ವಾ-ಸ ಪಾಂಡು-ರಂ-ಗ ಇವ-ರು-ಗ-ಳು ಲೇಖ-ನ-ಗ-ಳ ಕನ್ನ-ಡ ಕಂಪ್ಯೂ-ಟ-ರೀ-ಕ-ರ-ಣ ಮತ್ತು ಪರಿ-ಶೀ-ಲ-ನ-ದ ಕೆಲ-ಸ-ಗ-ಳ-ಲ್ಲಿ ತುಂಬಾ ಸಹಾ-ಯ- ಮಾಡಿ-ದ್ದಾ-ರೆ. ಗಣ-ಕ ಸಂಪು-ಟ-ದ ಸಾಹಿ-ತ್ಯ-ದ ವಿ-ಚಾ-ರ-ವಾ-ಗಿ ಮತ್ತು ಇದ-ರೊಂ-ದಿ-ಗಿ-ನ ದರ್ಶನ-ಕ್ಕೆ ಸಂಬಂ-ಧಿ-ಸಿ-ದಂ-ತೆ ಸಮಾ-ಲೋ-ಚಿ-ಸು-ವಾ-ಗ ಬೆಂಬ-ಲಿ-ಸಿ-ದ ಗೆ-ಳೆ-ಯ ರವೀಂ-ದ್ರ-ನಾ-ಥ್‌ ಅವ-ರ, ಭಾರ-ತ-ದ ಲೇಖ-ಕ-ರ-ನ್ನು ಸಂಪ-ರ್ಕಿಸು-ವಾ-ಗ ಸಂವಾ-ಹ-ಕ-ರಾ-ಗಿ-ದ್ದ ವೆಂಕ-ಟೇ-ಶ ಕು-ಮಾ-ರ-ರ, ಅಲ್ಲಿ-ನ ವಿದ್ವಾಂ-ಸ-ರ ಲೇಖ-ನ-ಗ-ಳ-ನ್ನು ಸಂಗ್ರ-ಹಿ-ಸು-ವಾ-ಗ ಹಲ-ವು ವಿಧ-ಗ-ಳ-ಲ್ಲಿ ನೆರ-ವಿ-ತ್ತ ಪ್ರೊ. ಎನ್‌.ಎಸ್‌. ಲಕ್ಷ್ಮೀ-ನಾ-ರಾ-ಯ-ಣ-ಭ-ಟ್ಟ-ರ ಸಹಾ-ಯ ಸ್ತುತ್ಯರ್ಹ.

ಕನ್ನ-ಡ ವಿದೇ-ಶ-ಗ-ಳ-ಲ್ಲಿ ಜೀವಂ-ತ-ವಾ-ಗಿ-ದೆ - ಎಂದು ತಿಳಿಸ-ಲು, ಮಾತುಗಾರರಂತೆ ಬರಹಗಾರರೂ ಇಲ್ಲಿ ಮಿಂಚುತ್ತಿದ್ದಾರೆ - ಎಂದು ಸಮರ್ಥಿಸಲು ಈ ನಮ್ಮ ಸ್ಮರಣ ಸಂಚಿಕೆ ಒಂದು ಕೈಗನ್ನಡಿ. ಕರ್ನಾಟಕದಲ್ಲಿ ಕನ್ನಡವೆಂದರೆ ಏನರ್ಥ ಹೊಳೆಯುತ್ತದೆಯೋ ಅದಕ್ಕೆ ಸೀಮಿತವಾಗಿರದೆ, ವಿದೇಶಗಳಲ್ಲಿ ಕನ್ನಡ ಎಂದಾಗ, ಕನ್ನಡ ನುಡಿ, ನಡೆ, ಹಾಡು, ಹಸೆ, ನಾಟಕ, ಕುಣಿತ, ಆಟ ನೋಟ, ಪಾಠ, ವೇಷ, ಭೂಷಣ- ಇವೆಲ್ಲವೂ ಕನ್ನಡದ ಕಾಮನಬಿಲ್ಲಿನ ಬಗೆ ಬಗೆಯ ಬಣ್ಣಗಳಾಗಿ ಗೋಚರಿಸುತ್ತಿವೆ. ಆ ಎಲ್ಲ ಬಣ್ಣಗಳ ಬೆಳಕು, ಈ ಸ್ಮರಣ ಸಂಚಿಕೆಯಲ್ಲಿ ಪ್ರತಿಫಲಿಸಿದೆ ಎಂದು ನಂಬಿದ್ದೇವೆ.

ಕನ್ನಡ ಕುಲ ಕೋಟಿಗೆ ವಿಶ್ವ ಕನ್ನಡ ಸಮ್ಮೇಳನ-2000 ಪರವಾಗಿ, ಸಂಪಾದಕವರ್ಗದವರೆಲ್ಲರ ಪರವಾಗಿ ಈ ಸಂಪುಟಗಳು ಅರ್ಪಿತವಾಗಿವೆ, ಓದುಗರು ತಮ್ಮ ಅನಿಸಿಕೆಗಳನ್ನು ಕರೆದು, ಬರೆದು ತಿಳಿಸಿ ಉಪಕರಿಸಬೇಕು - ಎಂದು ಕೇಳಿಕೊಳ್ಳುತ್ತೇವೆ.

backಮುಖಪುಟ / ಸಹಸ್ರಮಾನದ ವಿಶ್ವ ಕನ್ನಡ ಸಮ್ಮೇಳನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X