Get Updates
Get notified of breaking news, exclusive insights, and must-see stories!

ಕರ್ನಾಟಕ - ತಮಿಳುನಾಡು ಸರ್ಕಾರದ ಮುಖಕ್ಕೆ ಸುಪ್ರೀಂ ಕೋರ್ಟ್‌ ಮಂಗಳಾರತಿ

ನವದೆಹಲಿ : ‘ಕಳೆದ ಎಂಟು ವರ್ಷಗಳಿಂದ ಏನು ಮಾಡದೆ ಕೈಕಟ್ಟಿ ಕುಳಿತಿದ್ದಿರಿ. ಈಗ ಜನಪ್ರಿಯ ವ್ಯಕ್ತಿಯಾಬ್ಬರ ಅಪಹರಣ ಆಗಿದೆ ಎಂದು ಕಾರ್ಯೋನ್ಮುಖರಾಗುತ್ತಿದ್ದೀರಾ? ಇದು ನಿಸ್ಸೀಮ ನಿರ್ಲಕ್ಷ್ಯವಲ್ಲದೆ ಮತ್ತೇನೂ ಅಲ್ಲ ’ ಎಂದು ಸುರ್ಪೀಂ ಕೋರ್ಟ್‌ ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳೆರಡನ್ನೂ ಶುಕ್ರವಾರ ತರಾಟೆಗೆ ತೆಗೆದುಕೊಂಡಿತು.

ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಸ್ಥಾನಗಳನ್ನು ತೆರವು ಮಾಡಿ, ಇನ್ನೊಂದು ಉತ್ತಮ ಸರಕಾರ ಅಸ್ತಿತ್ವಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸೀತು. ಅಪಹರಣ ಪ್ರಕರಣವನ್ನು ನಿಭಾಯಿಸುವಲ್ಲಿ ನೀವಿಬ್ಬರೂ ಸಂಪೂರ್ಣ ವಿಫಲವಾಗಿದ್ದೀರಿ. ಇಂತಹ ನಿಸ್ಸೀಮ ನಿರ್ಲಕ್ಷ್ಯವನ್ನು ರಾಷ್ಟ್ರದ ಸರ್ವೋನ್ನತ ನ್ಯಾಯಾಲಯ ಸಹಿಸುವುದಿಲ್ಲ ’ ಎಂದು ನ್ಯಾಯಮೂರ್ತಿಗಳಾದ ಎಸ್‌.ಪಿ. ಬರೂಚ, ಡಿ.ಪಿ. ಮಹಾಪಾತ್ರ ಮತ್ತು ವೈ.ಕೆ. ಸಬರ್‌ವಾಲ್‌ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ಕಟು ಶಬ್ದಗಳಲ್ಲಿ ತಿಳಿಸಿದೆ.

ವೀರಪ್ಪನ್‌ ಸಹಚರರರಿಂದ ಹತ್ಯೆಗೀಡಾದ ಪೊಲೀಸ್‌ ಅಧಿಕಾರಿ ಶಕೀಲ್‌ ಅಹ್ಮದ್‌ ಅವರ ತಂದೆ ಅಬ್ದುಲ್‌ ಕರೀಂ ಅವರು ರಾಜ್ಯ ಸರಕಾರ ಟಾಡಾ ಆರೋಪಿಗಳ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ನಿರ್ಧಾರ ತಳೆದುದರ ವಿರುದ್ಧ ಸರ್ವೋನ್ನತ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡ ಪೀಠವು ತಾನು ಮಂಗಳವಾರ ನೀಡಿದ್ದ ತಡೆಯಾಜ್ಞೆಯನ್ನು ಸ್ಥಿರೀಕರಿಸಿ ತೀರ್ಪು ನೀಡಿತು.

  • ಮುಖಪುಟ / ರಾಜ್‌ ಅಪಹರಣ / ಡಾ. ರಾಜಕುಮಾರ್‌ ಚಿತ್ರಾವಳಿ / ರಾಜಮಾರ್ಗ
  • More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+