Get Updates
Get notified of breaking news, exclusive insights, and must-see stories!

ಕ್ರಿಕೆ-ಟ್‌ ಅಂಗ-ಳ-ದ-ಲ್ಲಿ ಕತ್ತ-ಲೆ : ಬೆಳ-ಕ ತೋರ-ಲು ವೃತ್ತಿ-ಪ-ರ-ರಿ-ಗೆ ಬಿಸಿ-ಸಿ-ಐ ಮೊರೆ

ಬೆಂಗಳೂರು : ಮ್ಯಾಚ್‌ಫಿಕ್ಸಿಂಗ್‌ನ ಹಿನ್ನೆಲೆಯಲ್ಲಿ ಕತ್ತಲು ತುಂಬಿರುವ ಕ್ರಿಕೆಟ್‌ಗೆ ಬೆಳಕು ಚೆಲ್ಲಲು ಕೆಲವು ವೃತ್ತಿಪರರ ನೆರವನ್ನು ಪಡೆಯಲು ಬಿಸಿಸಿಐ ನಿರ್ಧರಿಸಿದೆ.

ಮುಂಬೈನಲ್ಲಿರುವ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಈ ವೃತ್ತಿಪರರು ಕಾರ್ಯ ನಿರ್ವಹಿಸಲಿದ್ದಾರೆ. ಚೆನ್ನೈ ಮೂಲದ ಮಾನವ ಸಂಪನ್ಮೂಲ ಸಲಹಾ ನಿಗಮಕ್ಕೆ ವೃತ್ತಿಪರರನ್ನು ಗೊತ್ತುಪಡಿಸುವಂತೆ ಮಂಡಳಿ ಕೇಳಿದೆ. ಕೇವಲ ಅಂತರರಾಷ್ಟ್ರೀಯ ಕ್ರಿಕೆಟ್‌ ಅಷ್ಟೇ ಅಲ್ಲದೆ ಸ್ಥಳೀಯ ಟೂರ್ನಿಗಳ ಬಗೆಗೂ ನಿಗಾ ವಹಿಸುವುದು, ಅಂಪೈರ್‌ಗಳ ಕಾರ್ಯ ನಿರ್ವಹಣೆಯ ಮೇಲೆ ಒಂದು ಕಣ್ಣು ಇಡುವುದು ಈ ವೃತ್ತಿಪರರ ಕಾರ್ಯ.

ಮಂಡಳಿಯು ಕ್ರಿಕೆಟ್‌ ಪಂದ್ಯಗಳ ಚಿತ್ರಣ, ಗುಣಮಟ್ಟ, ಸುಧಾರಣೆ, ನ್ಯೂನತೆಗಳನ್ನು ಕಟ್ಟಿಕೊಡಬಲ್ಲ ವಿಮರ್ಶಕರಿಗೂ ಹುಡುಕಾಡುತ್ತಿದೆ. ಇವರು ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿ, ನಂತರ ಒಂದು ಸಮಗ್ರ ವರದಿ ಸಿದ್ಧಪಡಿಸಬೇಕು. ಈ ಕಾರ್ಯಗಳ ನಿರ್ವಹಣೆಗೆ ಸಾಫ್ಟ್‌ವೇರ್‌ ಸಹ ಅಭಿವೃದ್ಧಿ ಪಡಿಸಬೇಕು. ವಿವಿಧ ಇಲಾಖೆಗಳು, ಒಕ್ಕೂಟಗಳು ಮತ್ತು ಮಂಡಳಿಯ ಹೊಂದಾಣಿಕೆಗಾಗಿ ಸಂಪರ್ಕಾಧಿಕಾರಿಯಾಗಿಯೂ ಕೆಲಸ ಮಾಡಬೇಕು.

ಮಂಡಳಿ ಹಾಗೂ ಪಂದ್ಯಗಳ ಆಡಳಿತ ನಿರ್ವಹಣೆ ಮತ್ತು ವಾಣಿಜ್ಯ ಚಟುವಟಿಕೆಗಳ ಉಸ್ತುವಾರಿಗಾಗಿಯೂ ವೃತ್ತಿಪರರನ್ನು ನಿಯೋಜಿಸಲಾಗುತ್ತದೆ. ಸಮೂಹ ಮಾಧ್ಯಮಗಳ ವೃತ್ತಿಪರರು ಆಟದ ಮೌಲ್ಯವನ್ನು ವರ್ಧಿಸಲು ಸಹಕರಿಸುವುದರ ಜೊತೆಗೆ ಮಾಧ್ಯಮಗಳಿಗೆ ಸಮರ್ಪಕ ವಿವರಣೆಗಳನ್ನೂ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+