ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಸ್ತಿನಿಂದ ಆಡಿದರೆ ಒಲ-ಪಿಂ-ಕ್‌ ಚಿನ್ನ ನಮ್ಮ-ದೇ : ಪಿಳ್ಳೈ

By Staff
|
Google Oneindia Kannada News

ಇನ್ಫೋ ವಿಶೇಷ ವರದಿ

ಬೆಂಗಳೂರು : ಮುಂದಿನ ತಿಂಗಳು ಸಿಡ್ನಿಯಲ್ಲಿ ನಾವು ಉತ್ತಮ ರೀತಿಯಲ್ಲಿ ಶಿಸ್ತಿನಿಂದ ಆಡಿದಲ್ಲಿ 20 ವರ್ಷಗಳ ಭಾರತದ ಒಲಂಪಿಕ್ಸ್‌ ಹಾಕಿ ಚಿನ್ನದ ಕನಸು ನನಸಾದೀತು ಎನ್ನುತ್ತಾರೆ ಭಾರತ ಹಾಕಿ ತಂಡದ ಫಾರ್ವರ್ಡ್‌ ಆಟಗಾರ ಧನರಾಜ್‌ ಪಿಳ್ಳೈ.

ಪ್ರತಿ ಪಂದ್ಯಕ್ಕೂ ಹೊಸ ಕಾರ್ಯತಂತ್ರ : ನಾವು ಪ್ರತಿಯಾಂದು ಪಂದ್ಯಕ್ಕೂ ಹೊಸ ಕಾರ್ಯತಂತ್ರ ರೂಪಿಸಬೇಕು. ಒಂದು ಆಟದಲ್ಲಿ ಮಾಡೋ ತಪ್ಪುಗಳು ಮುಂದಿನ ಆಟದಲ್ಲಿ ಕಾಣಕೂಡದು. ಆಟದ ಎಲ್ಲಾ ಹಂತಗಳಲ್ಲೂ ಶಿಸ್ತನ್ನು ಕಾಪಾಡಿಕೊಂಡು ಬರಬೇಕು. ಹೀಗಾದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಿಡ್ನಿ ಹಾಕಿಯಲ್ಲಿ ಚಿನ್ನ ನಮಗೆ ದಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ . ಅಲ್ಲಿನ ಹವೆಯ ಬಗೆಗೆ ಇನ್ನೂ ನಮಗೆ ತಿಳಿದಿಲ್ಲ. ಬ್ರಿಸ್ಬೇನ್‌ನ ಬಳಿಯ ಮರ್ವಿಲ್ಲಂಬಾದಲ್ಲಿ ತಂಡ ಈಗಾಗಲೇ ಅಭ್ಯಾಸ ನಡೆಸಿದೆ ಎಂದು ಇಂಡಿಯಾಇನ್ಫೋ ಡಾಟ್‌ ಕಾಂಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪಿಳ್ಳೈ ತಿಳಿಸಿದ್ದಾರೆ.

ಕ್ಯಾಸೆಟ್‌ ನೋಡಿ ಲೆಕ್ಕ ಹಾಕ್ತೀವಿ : ಅರ್ಜೆಂಟೈನಾ, ಆಸ್ಟ್ರೇಲಿಯಾ, ಕೊರಿಯಾ, ಸ್ಪೇನ್‌ ಮತ್ತು ಪೋಲೆಂಡ್‌ ನಡುವಣ ಎಲ್ಲಾ ಪಂದ್ಯಗಳನ್ನೂ ನಾವು ಗಮನಿಸಿ, ಕಾರ್ಯತಂತ್ರ ರೂಪಿಸಬೇಕು. ನಮ್ಮ ಬಳಿ ಕೆಲವು ವಿಡಿಯೋ ಕ್ಯಾಸೆಟ್‌ಗಳಿದ್ದು, ಪಂದ್ಯಗಳಿಂದ ಬಿಡುವು ಸಿಕ್ಕಾಗ ಅವುಗಳನ್ನು ವೀಕ್ಷಿಸುತ್ತೇವೆ. ಆಯಾ ತಂಡದ ಪ್ರಮುಖ ಆಟಗಾರರ ವಿಶೇಷತೆ, ತಂಡದ ಗೋಲ್‌ ಕೀಪರ್‌ ಸಾಮರ್ಥ್ಯ, ಪೆನಾಲ್ಟಿ ಕಾರ್ನರ್‌ನಲ್ಲಿ ಆಡುವ ರೀತಿಗಳನ್ನು ಗಮನಿಸಿ, ನಾವು ಹೇಗೆ ಆಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎನ್ನುತ್ತಾರೆ.

ಆಸ್ಟ್ರೇಲಿಯಾದ ಜಯ ತಂದ ಆತ್ಮವಿಶ್ವಾಸ : ಆಸ್ಟ್ರೇಲಿಯಾದಲ್ಲಿ ನಡೆದ 4 ರಾಷ್ಟ್ರಗಳ ಟೂರ್ನಿಯಲ್ಲಿ ಗಳಿಸಿರುವ ಜಯ ಭಾರತದ ಆಟಗಾರರಲ್ಲಿ ವಿಶ್ವಾಸ ತುಂಬಿದೆ. ಆಸ್ಟ್ರೇಲಿಯಾವನ್ನು ತನ್ನ ನೆಲದಲ್ಲೇ ಸೋಲಿಸಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಫೈನಲ್ಸ್‌ನಲ್ಲಿ ಬಲಿಷ್ಠ ಜರ್ಮನಿ ತಂಡವನ್ನೂ ನಾವು ಸೋಲಿಸಿದ್ದೇವೆ. ಅದೃಷ್ಟ ನಮಗೆ ಸಾಥ್‌ ನೀಡಬೇಕಷ್ಟೆ, ಜಯ ನಮ್ಮದೆ ಎನ್ನುತ್ತಾರೆ ಪಿಳ್ಳೆ.

ನಾನು ನನ್ನ ಕೈಲಾದಲ್ಲಿ ಖಂಡಿತ ಚೆಂಡನ್ನು ಗೋಲಿನ ಪರದೆಗೆ ತಲುಪಿಸುತ್ತೇನೆ. ಕೈಮೀರಿದ್ದು ಎನಿಸಿದಲ್ಲಿ ಸೂಕ್ತ ಆಟಗಾರನಿಗೆ ಚೆಂಡನ್ನು ಪಾಸ್‌ ಮಾಡುತ್ತೇನೆ. ಇಂಥ ಕೆಲಸವನ್ನು ಬಹಳ ಸಮಯಪ್ರಜ್ಞೆಯಿಂದ ಮಾಡಬೇಕು ಎಂದು ತಮ್ಮ ವೈಯಕ್ತಿಕ ಆಟದ ಬಗೆಗಿನ ಪ್ರಶ್ನೆಗೆ ಧನರಾಜ್‌ ಉತ್ತರ ಕೊಟ್ಟರು. ಕಳೆದೆಂಟು ವರ್ಷಗಳಿಂದ ಯೂರೋಪಿಯನ್‌ ಲೀಗ್‌ಗಳಲ್ಲಿ ಆಡುತ್ತಿರುವ ಪಿಳ್ಳೈ, ಭಾರತದ ಇತರೆ ಆಟಗಾರರೂ ವಿದೇಶಗಳಲ್ಲಿ , ಅದರಲ್ಲೂ ಯೂರೋಪ್‌ನಲ್ಲಿ ಆಡಬೇಕು. ಅಲ್ಲಿ ಕಲಿಕೆಗೆ ಹೆಚ್ಚು ಅವಕಾಶವಿದೆ ಎನ್ನುತ್ತಾರೆ.

ಪಿಳ್ಳೈ ಆಡುವ ಕೊನೆ ಒಲಂಪಿಕ್ಸ್‌ : ನಿವೃತ್ತಿಯಾದ ತಕ್ಷಣ ಕೋಚ್‌ ಆಗಿ ಕೆಲಸ ಮಾಡಲು ನನಗೆ ಇಷ್ಟವಿಲ್ಲ. 2- 3 ವರ್ಷಗಳ ನಂತರ ನನಗೆ ತಿಳಿದಿರುವುದನ್ನು ಭಾರತದ ಹಾಕಿ ಆಟಗಾರರೊಂದಿಗೆ ಖಂಡಿತ ಹಂಚಿಕೊಳ್ಳುತ್ತೇನೆ. ಆಗ ಕೋಚ್‌ ಆಗಿ ಕೆಲಸ ಮಾಡೋ ಅವಕಾಶ ಬಂದರೆ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ ಕೊನೆಯ ಒಲಂಪಿಕ್ಸ್‌ ಆಡ-ಲಿ-ರು-ವ ಪಿಳ್ಳೈ.

ಭಾರತ ಒಳ್ಳೆ ತಂಡ. ಆದರೂ ಇನ್ನೂ ಕಲಿಯಬೇಕು. ಸಿಡ್ನಿಯಲ್ಲಿ ನಾವು ಗೆದ್ದು ಬರ್ತೀವಿ ಅನ್ನುವಾಗ ಪಿಳ್ಳೈ ಅವರಲ್ಲಿ ಆತ್ಮವಿಶ್ವಾಸ ಬಿಂಬಿಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X