ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂ-ಗಿ-ನ ಜಿಲ್ಲೆ-ಯ ರೈತ-ರ ಭರ-ವ-ಸೆ ಹುಸಿ- ಮತ್ತೆ ಬಂತು ನುಸಿ

By Staff
|
Google Oneindia Kannada News

*ಚ. ಹ. ರಘುನಾಥ್‌

Coconutತು-ಮ-ಕೂ-ರು : ಶ್ರಾವ-ಣ ಮುಗಿ-ಯು-ತ್ತಾ ಬಂದ-ರೂ, ತೆಂಗಿ-ನ-ಕಾ-ಯಿ ಬೆಲೆ ನೆಲ-ದ-ಲ್ಲೇ ಇರು-ವು-ದು ಜಿಲ್ಲೆ-ಯ ತೆಂಗು ರೈತ-ರ-ನ್ನು ನಿದ್ದೆ-ಗೆ-ಡಿ-ಸಿ-ದೆ.

ಪ್ರತಿ-ವ-ರ್ಷ -ಶ್ರಾ-ವ-ಣ ಶುರು-ವಾ-ಯಿ-ತೆಂ-ದ-ರೆ ತೆಂಗು ಬೆಳೆಗಾ-ರರಿ-ಗೆ ಬಂಪ-ರ್‌ ಹೊಡೆ-ಯಿ-ತೆಂ-ದೇ ಅರ್ಥ. ಹಬ್ಬ-ದ ದಿನ-ಗ-ಳ-ಲ್ಲಿ ಕಾಯಿ-ಗೆ ವಿ-ಪ-ರೀ-ತ ಬೇಡಿ-ಕೆ. ಆದ-ರೆ, ಈ ವರ್ಷ ಪರಿಸ್ಥಿ-ತಿ ತಿರು-ಗು ಮುರು-ಗು. ಐದಾ-ರು ರುಪಾ-ಯಿ ಮುಟ್ಟ ಬೇಕಿದ್ದ ಕಾಯಿ-ಯ ಬೆಲೆ- ಮೂರ-ನ್ನೂ ಮುಟ್ಟಿ-ಲ್ಲ . ಕಾ-ರ-ಣ, ನುಸಿ-ರೋ-ಗ.

ಕಳೆ-ದ ವರ್ಷ-ವೂ ಕಾಣಿ-ಸಿ-ಕೊಂ-ಡಿ-ದ್ದ ನುಸಿ-ರೋ-ಗ, ಇನ್ನೇ-ನು ನಿಯಂ-ತ್ರ-ಣ-ಕ್ಕೆ ಬಂದಿ-ತು ಎ-ನ್ನು-ವಾ-ಗ-ಲೇ ಮತ್ತಷ್ಟು ಶಕ್ತಿ-ಯುತ-ವಾ-ಗಿ ಮರು-ಕ-ಳಿ-ಸಿ-ದೆ. ಜಿಲ್ಲೆ-ಯ ತಿಪ-ಟೂ-ರು, ಚಿಕ್ಕ-ನಾ-ಯ-ಕ-ನ-ಹ-ಳ್ಳಿ, ಶಿ-ರಾ, ತುರು-ವೇ-ಕೆ-ರೆ, ಕುಣಿ-ಗ-ಲ್‌ ತಾಲ್ಲೂ-ಕು-ಗ-ಳು ತೆಂ-ಗು ಕೃಷಿ-ಗೆ ಹೆಸ-ರಾ-ಗಿ-ದ್ದು , ಇಲ್ಲೆ-ಲ್ಲಾ ನುಸಿ ರೋಗ ವ್ಯಾಪ-ಕ-ವಾಗಿದೆ.

ಸಾಮಾ-ನ್ಯ-ವಾ-ಗಿ ದಕ್ಕಿ-ದ ತೆಂಗಿ-ನ ಫಸ-ಲ-ನ್ನೆ-ಲ್ಲಾ ಮಾರು-ಕ-ಟ್ಟೆ-ಗೆ ಬಿಡು-ವ ರೈತ-ರು ಕ-ಮ್ಮಿ . ಕಾಯಿ-ಗಿಂತ ಕೊಬ್ಬ-ರಿ-ಯೇ ಹೆಚ್ಚು ಲಾಭ ತರು-ವು-ದರಿಂ-ದ, ತೆಂಗ-ನ್ನು ಕಾಯ್ದಿ-ಟ್ಟು ಕೊಬ್ಬ-ರಿ-ಯಾಗಿ-ಸಿ ಮಾರಾ-ಟ ಮಾಡು-ವ ರೈತ-ರ ಸಂಖ್ಯೆ ಹೆಚ್ಚು . ಕೊಬ್ಬ--ರಿ-ಗಾ-ಗಿ ತೆಂಗ-ನ್ನು ಕಾಯ್ದಿ-ರಿ-ಸು-ವು-ದ-ರಿಂ-ದ ಮಾರು-ಕ-ಟ್ಯೆ-ಯ-ಲ್ಲಿ ತೆಂಗಿ-ನ -ಅ-ಭಾ-ವ ಉಂಟಾ-ಗಿ, ಬೆಲೆ ಹೆಚ್ಚಾ-ಗು-ವು-ದು ಪ್ರತಿ ವರ್ಷ-ದ ರೂಢಿ-. ಆದ-ರೆ, ಈ ವರ್ಷ ಬೆಳೆ-ದ ತೆಂಗೆ-ಲ್ಲಾ ಮಾರು-ಕ-ಟ್ಟೆ-ಯಲ್ಲಿ-ದೆ. ನುಸಿ ರೋಗ ಪೀಡಿ-ತ ಮರ-ದ ಫಸ-ಲು -ಕಾ-ಯ್ದಿ-ಡ-ಲು ಬರು-ವು-ದಿ-ಲ್ಲ-ವಾ-ದ್ದ--ರಿಂ-ದ ಬೆಳೆ-ದ ಫಸ-ಲ-ನ್ನೆ-ಲ್ಲಾ ಮಾರ-ಲೇ ಬೇ-ಕಾ-ದ ಅನಿ-ವಾ-ರ್ಯ-ತೆ-ಯ-ಲ್ಲಿ ರೈತ-ರಿ-ದ್ದಾ-ರೆ. ಕೆ-ಲ-ದಿ-ನ ತಡ-ವಾ-ದರೆ, ಫಸ-ಲ-ನ್ನೆಲ್ಲಾ ತಿಪ್ಪೆ-ಗೆ ಸು-ರಿ-ಯ ಬೇಕಾ-ದ ಆತಂ-ಕ ರೈತ-ರ-ದು. ಅದ-ರಿಂ-ದಾ-ಗಿ-ಯೇ -ಮಾ-ರು-ಕ-ಟ್ಟೆ-ಯ-ಲ್ಲಿ ನಿಂ-ಬೆ-ಹ-ಣ್ಣು ಹಾಗೂ ತೆಂಗಿ-ನ ಬೆಳೆ-ಯ-ಲ್ಲಿ ಅಂಥಾ ವ್ಯತ್ಯಾ-ಸ -ಕಾ-ಣು-ತ್ತಿ-ಲ್ಲ .

ಕಳೆ--ದ ವರ್ಷ- ಹಾಗೂ ಈ ವರ್ಷ-ದ ಮಾರು-ಕ-ಟ್ಟೆ-ಯ ಬೆಲೆ-ಗ-ಳಿ-ಗೆ ಹೋಲಿ-ಸಿ-ದ-ರೆ, ಬೆಲೆ-ಯ-ಲ್ಲಿ -ಭಾ-ರೀ ವ್ಯತ್ಯಾ-ಸ ಕಂ-ಡು-ಬರುತ್ತಿದೆ. 1999ರಲ್ಲಿ ಸಾವಿ-ರ ತೆಂಗಿ-ನ-ಕಾ-ಯಿ-ಗೆ 2500 ರಿಂದ 5500 ರುಪಾ-ಯಿ-ವ-ರೆ-ಗೆ ಇದ್ದ ಬೆಲೆ, ಈ ವರ್ಷ 1350 ರಿಂ-ದ 3 ಸಾವಿ-ರ ರುಪಾ-ಯಿ-ಗೆ ಕುಸಿ-ದಿ-ದೆ. ಕೊ-ಬ್ಬ-ರಿ ದರ-ದ-ಲ್ಲೂ ಇಂಥ-ದ್ದೇ ಬದ-ಲಾ-ವ-ಣೆ ಕಂಡು ಬಂದಿ-ದೆ. 1999 ರಲ್ಲಿ ಕ್ವಿಂಟಾ-ಲ್‌-ಗೆ 4500 ರುಪಾ-ಯಿ ಇದ್ದ ಬೆಲೆ ಈ ವರ್ಷ 3300 ರುಪಾ-ಯಿ-ಗ-ಳಿ-ಗೆ ಕುಸಿ-ದಿ-ದೆ. ನೀವು ಚೌಕಾ-ಸಿ-ಯ-ಲ್ಲಿ ನಿಪು-ಣ-ರಾ-ದ-ರೆ, ಬೆಲೆ-ಯ-ಲ್ಲಿ ಮತ್ತೂ ಇಳು-ವ-ರಿ ಸಾಧ್ಯ.

ಬೆ-ಲೆ ಕುಸಿ-ತ-ಕ್ಕೆ ಉದಾ-ರೀ-ಕ-ರ-ಣ-ದ್ದೂ ಒಂದು ಕಲ್ಲು : ಬೆಲೆ ಕುಸಿತ-ಕ್ಕೆ ನುಸಿ-ರೋ-ಗ ಮಾತ್ರ ಕಾರ-ಣ-ವ-ಲ್ಲ , ಸರ್ಕಾ-ರ-ದ ಉದಾ-ರೀ-ಕ-ರ-ಣ ನೀತಿ-ಯೂ ಕಾರ-ಣ ಎಂದು ರೈತ-ರು ದೂರು-ತ್ತಿ-ದ್ದಾ-ರೆ. ಫಿಲಿ-ಫೈ-ನ್ಸ್‌-ನಿಂ-ದ ಅತಿ ಕಡಿ-ಮೆ ದರ-ದ-ಲ್ಲಿ ತೆಂಗಿ-ನ ಪುಡಿ-ಯ-ನ್ನು ಆಮ-ದು ಮಾಡಿ-ಕೊ-ಳ್ಳಲಾ-ಗು-ತ್ತಿ-ದೆ. ಇದ-ರಿಂ-ದಾ-ಗಿ, ದೇಶ-ದ-ಲ್ಲಿ ತೆಂಗಿ-ನ ಪುಡಿ ಬೆಲೆ ಪ್ರತಿ-ಶ-ತ 40 ರಿಂದ 31 ಕ್ಕೆ ಕುಸಿ-ದಿ-ದೆ. ಕೇ-ಕ್‌ ತಯಾ-ರಿ-ಕೆ-ಗೆ ದೇಶೀ-ಯ ತೆಂಗಿ-ನ ಕಾಯಿ-ಗಿ-ದ್ದ ಬೇಡಿ-ಕೆ ಗಣ-ನೀ-ಯ ಪ್ರಮಾ-ಣ-ದ-ಲ್ಲಿ ಇಳಿಮು-ಖ-ವಾ-ಗಿ-ದೆ.

ನುಸಿಪೀಡೆಗೆ ಔಷ-ಧ-ವಿ-ದೆ.. ಆದ-ರೆ.. : ನುಸಿ ಪೀಡೆ ನಿಯಂ-ತ್ರ-ಣ-ಕ್ಕೆ ಜಿಲ್ಲೆ-ಯ-ಲ್ಲಿ ವ್ಯಾಪ-ಕ ಕ್ರಮ-ಗ-ಳ-ನ್ನು ಜಿಲ್ಲಾ ಪಂ-ಚಾ-ಯಿ-ತಿ ಮತ್ತು ತೋಟ-ಗಾ-ರಿ-ಕೆ ಇಲಾ-ಖೆ ಕೈಗೊಂ-ಡಿ-ದೆ. ನುಸಿ ನಿಯಂ-ತ್ರ-ಣ-ಕ್ಕೆ -ರೋ-ಗ ಪೀಡಿ-ತ ಮರ-ಕ್ಕೆ ಇಂಜ-ಕ್ಷ-ನ್‌ ನೀಡು-ವ ಪದ್ಧ-ತಿ ಇದೆ-ಯಾ-ದ-ರೂ, ಪರಿ-ಣಾ-ಮ-ಕಾ-ರಿ-ಯಾ-ಗಿ ರೋಗ ನಿಯಂ-ತ್ರಿಸ-ಲು ಕ್ರಿಮಿ ನಾಶ-ಕ (ಟ್ರೆೃಸೋ ಫಾಸ್‌) ಸಿಂಪ-ಡ-ಣೆ-ಯೇ ಸೂಕ್ತ-ವಾ-ದು-ದು. ಆದ-ರೆ, ಪ್ರತಿ ಮರ-ವ-ನ್ನು ಹತ್ತಿ ಔಷ-ಧಿ ಸಿಂಪ-ಡಿ-ಸು-ವು-ದು ಕಷ್ಟ ಸಾಧ್ಯ-ವಾ-ದ ಕೆಲ-ಸ.

ಮಳೆ ಬಂತು, ನುಸಿ ಹೋದೀ-ತೆ ? : ನುಸಿ ರೋಗ-ವ-ನ್ನು ನಿಯಂ-ತ್ರಿ-ಸು-ವ-ಲ್ಲಿ ಮಳೆ-ಯ ಪಾತ್ರ ಮುಖ್ಯ-ವಾ-ದು-ದು. ಜಿಲ್ಲೆ-ಯ ಬಹು-ತೇ-ಕ ಪ್ರದೇ-ಶ-ಗ-ಳ-ಲ್ಲಿ ಆಗ-ಸ್ಟ್‌ ತಿಂಗ-ಳ-ಲ್ಲಿ ಉತ್ತ-ಮ ಮಳೆ ಆಗು-ತ್ತಿ-ರು-ವು-ದ-ರಿಂ-ದ, ನುಸಿ ರೋಗ ನಿಯಂ-ತ್ರ-ಣ-ಕ್ಕೆ ಬರ-ಬ-ಹು-ದೆಂ--ದು ನಿರೀ-ಕ್ಷಿ-ಸ-ಲಾ-ಗಿ-ದೆ.

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X