Get Updates
Get notified of breaking news, exclusive insights, and must-see stories!

ಐಟಿ ಅಭಿವೃದ್ಧಿಗೆ 1500 ಕೋಟಿ ಡಾಲರ್‌ ಜಪಾನ್‌ ನೆರವು

ಬೆಂಗಳೂರು : ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ , ಅದರಲ್ಲೂ ವಿಶೇಷವಾಗಿ ಏಷ್ಯಾದಲ್ಲಿನ ರಾಷ್ಟ್ರಗಳ ಐಟಿ ಕ್ಷೇತ್ರದ ಅಭಿವೃದ್ಧಿಗೆ ಮುಂದಿ-ನ 5 ವರ್ಷಗಳಲ್ಲಿ 1500 ಕೋಟಿ ಡಾಲರ್‌ ಸಮಗ್ರ ನೆರವು ನೀಡುವುದಾಗಿ ಜಪಾನ್‌ ಪ್ರಧಾನಿ ಯಾಶಿರೊ ಮೋರಿ ಘೋಷಿಸಿದ್ದಾರೆ.

ಮಂಗಳವಾರ ನಗರದ ಇ-ನ್‌-ಫೋ-ಸಿಸ್‌ ಮತ್ತು ವಿಪ್ರೋ ಕಂಪನಿಗಳಿಗೆ ಭೇಟಿ ನೀಡಿದ ನಂತರ ಭಾರತೀಯ ಕೈಗಾರಿಕೆಗಳ ಸಂಘ ಆಯೋಜಿಸಿದ್ದ ಸಭೆಯಲ್ಲಿ ಮಾತಾಡುತ್ತಿದ್ದರು. ಭಾರತದ ಐಟಿ ವೃತ್ತಿಪರರು ಹಾಗೂ ಜಪಾನಿನ ತಂತ್ರಜ್ಞಾನ ಸೇರಿದಲ್ಲಿ ಮಾಹಿತಿ ತಂತ್ರಜ್ಞಾನದ ಅಂತರರಾಷ್ಟ್ರೀಯ ಸಮಸ್ಯೆಗಳ-ನ್ನು ಬಗೆಹರಿಸಲು ಸಾಧ್ಯ ಎಂದು ಮೋರಿ ಅಭಿ-ಪ್ರಾ-ಯ ಪಟ್ಟಿ-ದ್ದಾ-ರೆ. ಜಪಾ-ನ್‌ ಪ್ರಧಾ-ನಿ ಭಾರತದ ಐಟಿ ವೃತ್ತಿಪರರಿಗೆ ಇನ್ನಷ್ಟು ಸಿಹಿ ಸುದ್ದಿ ಕೊಟ್ಟಿದ್ದಾರೆ. ಅವೆಂದರೆ....

  • ಇನ್ನು 3 ವರ್ಷಗಳಲ್ಲಿ 1000 ಭಾರತೀಯರಿಗೆ ಜಪಾನ್‌ ಸರ್ಕಾರ ವಿಶೇಷ ತರಬೇತಿ ನೀಡಲಿದೆ. ಜಪಾನಿನ ವಾಣಿಜ್ಯ ಹಾಗೂ ಜಪಾನ್‌ ಭಾಷೆಯನ್ನು ಬೋಧಿಸಲಾಗುವುದು
  • ಭಾರತದ ವಾಣಿಜ್ಯೋದ್ಯಮಿಗಳಿಗೆ ಬಹುರಾಷ್ಟ್ರ ಸಂಚರಿಸಲು ಅನುವಾಗುವಂತೆ ಜಪಾನ್‌ ಸರ್ಕಾರ ವೀಸಾ ನೀಡಲಿದೆ
  • ಜಪಾನ್‌- ಭಾರತ ಐಟಿ ಸಂಬಂಧದ ಅಭಿವೃದ್ಧಿ ಕುರಿತು ಪ್ರಧಾನಿ ವಾಜಪೇಯಿಯವರಿಗೆ ವರದಿ ಸಲ್ಲಿಸಲಾಗುವುದು
  • ಅಕ್ಟೋಬರ್‌ನಲ್ಲಿ ಟೋಕಿಯೋ ನಗರದಲ್ಲಿ ಭಾರತದ ಐಟಿ ವಿಷಯದ ಬಗೆಗೆ ವಿಚಾರಗೋಷ್ಟಿ ಆಯೋಜಿಸಲಾಗುವುದು
  • ಅಕ್ಟೋಬರ್‌ನಲ್ಲಿ ದೇಶ- ದೇಶಗಳ ನಡುವಿನ ಇ- ಕಾಮ-ರ್ಸ್‌ ಮುಂತಾದ ಸಮಸ್ಯೆಗಳ ಬಗೆಗೆ ಚರ್ಚಿಸಲಾಗುವುದು
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+