ನಕಲಿ ಸ್ಟಾಂಪ್ ಪೇಪರ್ ಜಾಲ ಪತ್ತೆ , 10 ಜನರ ಬಂಧನ
ಬೆಂಗಳೂರು : ಸುಮಾರು 10 ಕೋಟಿ ರುಪಾಯಿ ಬೆಲೆಯ ನಕಲಿ ಸ್ಟಾಂಪ್ ಪೇಪರ್ ಜಾಲವನ್ನು ನಗರ ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ 10 ಜನರನ್ನು ಬಂಧಿಸಿದ್ದಾರೆ.
ಕರ್ನಾಟಕದಲ್ಲಿ ಹಿಂದೆಂದೂ ಪತ್ತೆಯಾಗಿರದಂಥ ಜಾಲ : ನಗರ ಪೊಲೀಸ್ ಆಯುಕ್ತ ಟಿ. ಮಡಿಯಾಳ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಶನಿವಾರ ನಗರದ ವಿವಿಧೆಡೆ ದಾಳಿ ನಡೆಸಲಾಯಿತು. ಸುಬೇದಾರ್ ಛತ್ರಂ ರಸ್ತೆಯಲ್ಲಿರುವ ಸಾಯಿ ಸ್ಟಾಂಪ್ ಪೇಪರ್ ಮಾರಾಟ ಮಳಿಗೆಯ ಮೇಲೆ ನಡೆಸಿದ ದಾಳಿಯಿಂದ ನಕಲಿ ವಹಿವಾಟು ಪತ್ತೆಯಾಯಿತು. ನಂತರ ಅಂಗಡಿಯ ವಿವಿಧ ಶಾಖೆಗಳ ಮೇಲೂ ದಾಳಿ ನಡೆಸಲಾಗಿ ಇದೊಂದು ಬೃಹತ್ ನಕಲಿ ಜಾಲ ಎಂಬುದು ಪತ್ತೆಯಾಗಿದೆ. ಬಂಧಿತರು ಕೊಟ್ಟಿರುವ ಹೇಳಿಕೆಯ ಪ್ರಕಾರ, ಸ್ಟಾಂಪ್ ಪೇಪರ್‌ಗಳನ್ನು ಮುಂಬೈಗೂ ಸರಬರಾಜು ಮಾಡಲಾಗಿದೆ. ಇದರಿಂದ ಇದೊಂದು ಅಂತರರಾಜ್ಯ ನಕಲಿ ಜಾಲ ಎಂಬುದು ತಿಳಿದು ಬಂದಿದೆ. ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕುಗಳು ಹಾಗೂ ಸಾರ್ವಜನಿಕ ವಲಯದ ಕಂಪನಿಗಳಿಗೆ ಶ್ರೀ ಸಾಯಿ ಸ್ಟಾಂಪ್ ವೆಂಡರ್ಸ್ ಸ್ಟಾಂಪ್ ಪೇಪರ್‌ಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಮಡಿಯಾಳ್ ಹೇಳಿದರು.
25 ಸಾವಿರ ರುಪಾಯಿ ಬಹುಮಾನ : ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹಾಗೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಪೊಲೀಸರ ಈ ಸಾಧನೆಯನ್ನು ಶ್ಲಾಘಿಸಿದರು. ರಾಜ್ಯದ ಚರ್ಚ್‌ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಸಿಬಿಐ ಬಂಧಿಸಿದ ನಂತರ ಪೊಲೀಸರು ಪತ್ತೆ ಹಚ್ಚಿರುವ ಬೃಹತ್ ನಕಲಿ ಜಾಲ ಇದಾಗಿದೆ ಎಂದು ಪ್ರಶಂಸಿಸಿದರು. ಈ ಅಂತರರಾಜ್ಯ ನಕಲಿ ಸ್ಟಾಂಪ್ ಪೇಪರ್ ಜಾಲ ಪತ್ತೆ ಹಚ್ಚಿರುವ ಪೊಲೀಸರ ತಂಡಕ್ಕೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ 25 ಸಾವಿರ ರುಪಾಯಿ ಬಹುಮಾನ ಘೋಷಿಸಿದ್ದಾರೆ.
ಗ್ರಾಹಕರಿಗೆ ಅಸಲಿ ಪೇಪರ್‌ಗಳನ್ನು ತೋರಿಸಿ, ನಂತರ ನಕಲಿ ಪೇಪರ್‌ಗಳನ್ನು ಸರಬರಾಜು ಮಾಡುತ್ತಿದ್ದ ಈ ಜಾಲದ ಪ್ರಮುಖ ಆರೋಪಿ ಬೆಳಗಾವಿಯ ಬಾರುದ್ದೀನ್ ಅಲಿಯಾಸ್ ಬದ್ರು (24). ಬಂಧಿಸಲಾಗಿರುವ ಆಪಾದಿತರ ಪೈಕಿ ಐವರು ಬೆಳಗಾವಿಯವರು ಎಂದು ಮಡಿಯಾಳ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಸಹ ಹಾಜರಿದ್ದರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications