Get Updates
Get notified of breaking news, exclusive insights, and must-see stories!

ಸಮಾ-ನ ಮನ-ಸ್ಕ ಮುಖ್ಯಮಂತ್ರಿಗಳ ಸಭೆಯಲ್ಲಿ ಕೃಷ್ಣ ಪಾಲ್ಗೊಳ್ಳುತ್ತಿ-ಲ್ಲ

ಬೆಂಗಳೂರು : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ಆಗಸ್ಟ್‌ 21ರಂದು ದೆಹಲಿಯಲ್ಲಿ ಕರೆದಿರುವ ಸಮಾನ ಮನಸ್ಕ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದಾರೆ.

ಜಪಾನ್‌ ಪ್ರಧಾನಿ ಯಾಶಿರೋ ಮೋರಿಸ್‌ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಸಭೆಯಲ್ಲಿ ಭಾಗವಹಿಸಲು ತಮಗೆ ಸಾಧ್ಯವಾಗುವುದಿಲ್ಲ ಎಂದು ಶನಿವಾರ ಕೃಷ್ಣ ತಿಳಿಸಿದ್ದಾರೆ. ರಾಜ್‌ ಅಪಹರಣ ಪ್ರಕರಣ ಅಂತಿಮಘಟ್ಟ ಮುಟ್ಟಿರುವುದೂ ಕೂಡಾ ಇನ್ನೊಂದು ಕಾರಣ ವಾಗಿದೆ ಎಂದ ಅವರು ಸಭೆಯಲ್ಲಿ ಭಾಗವಹಿಸಲಾಗದಿರುವುದಕ್ಕೆ ತಮ್ಮ ಅಸಹಾಯಕತೆ ತೋಡಿಕೊಂಡರು. ರಾಜ್ಯಗಳಿಗೆ ನೀಡಲು ಉದ್ದೇಶಿಸಿರುವ ತೆರಿಗೆ ಪ್ರಮಾಣ ಸೇರಿದಂತೆ ಹನ್ನೊಂದನೇ ಹಣಕಾಸು ಆಯೋಗದ ಶಿಫಾರಸುಗಳ ಕುರಿತು ಚರ್ಚೆ ನಡೆಸಲು ಕರೆದಿರುವ ಈ ಸಭೆಯಲ್ಲಿ ಭಾಗವಹಿಸಬೇಕೆಂದು ಕೃಷ್ಣ ಅವರನ್ನು ಚಂದ್ರಬಾಬುನಾಯ್ಡು ಆಹ್ವಾನಿಸಿದ್ದಾರೆ.

ತಮ್ಮ ಬದಲಾಗಿ ಯಾರನ್ನಾದರೂ ಕಳಿಸುವ ಸಂಬಂಧ ಕೃಷ್ಣ ಅವರು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. 11ನೇ ಹಣಕಾಸು ಆಯೋಗದ ಶಿಫಾರಸುಗಳೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯನ್ನು ಕರೆಯಬೇಕೆಂದು ಕೃಷ್ಣ ಪ್ರಧಾನಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+