ಆಗಸ್ಟ್‌ 17, 2000

ಬೆಂಗಳೂರು : ಕರಾವಳಿಯ ಬಹುತೇಕ ಪ್ರದೇಶಗಳು ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಅನೇಕ ಸ್ಥಳಗಳಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಾಗಿದೆ.

ಸುಬ್ರಹ್ಮಣ್ಯದಲ್ಲಿ ಅತಿ ಹೆಚ್ಚು, ಅಂದರೆ 11 ಸೆಂಟಿಮೀಟರ್‌, ತೀರ್ಥಹಳ್ಳಿ 10, ಕೊಲ್ಲೂರು, ಮಡಿಕೇರಿಗಳಲ್ಲಿ 9 ಸೆಂಟಿಮೀಟರ್‌ ಮಳೆ ದಾಖಲಾಗಿದ್ದರೆ ಪುತ್ತೂರು, ಶೃಂಗೇರಿಗಳಲ್ಲಿ ತಲಾ 6, ಭಟ್ಕಳ, ಮಂಗಳೂರು, ಲೋಂಡಾ, ಸೋಮವಾರಪೇಟೆ, ಮಾದಾಪುರಗಳಲ್ಲಿ 5 ಸೆಂ.ಮೀ ಹಾಗೂ ಮಾನ್ವಿ, ಉಪ್ಪಿನಂಗಡಿ, ಉಡುಪಿ, ಮೂಡಬಿದರೆ, ತಾಳಗುಪ್ಪಗಳಲ್ಲಿ ತಲಾ 3 ಸೆಂ.ಮೀಟರ್‌ ಮಳೆ ಬಿದ್ದಿದೆ. ಮುಂದಿನ 48ಗಂಟೆಗಳ ಹವಾ ಮನ್ಸೂಚನೆಯಂತೆ ಕರಾವಳಿ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಅನೇಕ ಪ್ರದೇಶಗಳಲ್ಲಿ ಸಾಧಾರಣ ಇಲ್ಲವೇ ಭಾರೀ ಮಳೆ ಬೀಳುವ ನಿರೀಕ್ಷೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಬೀಳುವ ಸಂಭವ ಇದೆ.

ಮುಂದಿನ 48ಗಂಟೆಗಳಲ್ಲಿ ರಾಜ್ಯಾದ್ಯಂತ ಮಳೆ ಚುರುಕಾಗಲಿದೆ. ಬೆಂಗಳೂರಿನ ಸುತ್ತಮುತ್ತಾ ಮೋಡ ಮುಸುಕಿದ ವಾತಾವರಣವಿರಲಿದ್ದು, ಒಂದೆರಡು ಬಾರಿ ತುಂತುರು ಹನಿ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+