ಅಪ್ಪಾಜಿ ಬಿಡುಗಡೆ 100% ಖಚಿತ : ರಾಘವೇಂದ್ರರಾಜ್‌ಕುಮಾರ್
ಬೆಂಗಳೂರು : ವೀರಪ್ಪನ್ ವಶದಲ್ಲಿರುವ ತಮ್ಮ ಅಪ್ಪಾಜಿ ಯಾವುದೇ ಅಪಾಯ ಇಲ್ಲದೆ ಸುರಕ್ಷಿತವಾಗಿ ಹಿಂತಿರುಗುವುದು ನೂರಕ್ಕೆ ನೂರು ಖಚಿತ ಎಂದು ಸಂಧಾನಕಾರ ನಕ್ಕೀರನ್ ಗೋಪಾಲ್ ಕಾಡಿಗೆ ತೆರಳುವ ಮುನ್ನ ತಮಗೆ ತಿಳಿಸಿದ್ದಾರೆಂದು ರಾಘವೇಂದ್ರ ರಾಜ್‌ಕುಮಾರ್ ಗುರುವಾರ ಇಲ್ಲಿ ತಿಳಿಸಿದರು.
ಚೆನ್ನೈನಲ್ಲಿ ಕರುಣಾನಿಧಿ ಹಾಗೂ ಗೋಪಾಲ್ ಅವರೊಂದಿಗೆ ಮಾತುಕತೆ ನಡೆಸಿ, ಬೆಂಗಳೂರಿಗೆ ಹಿಂತಿರುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ರಾಘವೇಂದ್ರ ರಾಜ್‌ಕುಮಾರ್ ಗೋಪಾಲ್ ಅವರು ತಮ್ಮ ತಂದೆಯ ಬಿಡುಗಡೆ ಬಗ್ಗೆ ಭರವಸೆ ನೀಡಿದ್ದಾರೆ, ಕರುಣಾನಿಧಿ ಅವರು ಕೂಡ ಬಹಳಷ್ಟು ಕಾಳಜಿ ವಹಿಸಿದ್ದಾರೆ ಎಂದರು.
ಗೋಪಾಲ್ ಪ್ರತಿಜ್ಞೆ: ಎರನಡೇ ಸುತ್ತಿನ ಸಂಧಾನಕ್ಕಾಗಿ ಬುಧವಾರ ರಾತ್ರಿ ಕಾಡಿನತ್ತ ಅಡಿಯಿಟ್ಟ, ಗೋಪಾಲ್ ಈ ಬಾರಿ ರಾಜ್‌ಕುಮಾರ್ ಹಾಗೂ ಮತ್ತಿತರರನ್ನು ಬಿಡಿಸಿಕೊಂಡೇ ಕಾಡಿನಿಂದ ಕಾಲ್ತೆಗೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎರಡೂ ಸರಕಾರಗಳು ವೀರಪ್ಪನ್‌ನ ಪ್ರಮುಖ ಬೇಡಿಕೆಗಳನ್ನು ಈಡೇರಿಸಿರುವ ಹಿನ್ನೆಲೆಯಲ್ಲಿ ವೀರಪ್ಪನ್ ಎಲ್ಲ ಒತ್ತೆಯಾಳುಗಳನ್ನೂ ಸುರಕ್ಷಿತವಾಗಿ ಬಿಡುಗಡೆಗೊಳಿಸುತ್ತಾರೆ ಎಂಬುದು ಗೋಪಾಲ್ ವಿಶ್ವಾಸವಾಗಿದೆ.
ಹುಸಿ ಬಾಂಬ್ ಬೆದರಿಕೆ - ವಿಚಾರಣೆ: ನಗರದ ಶಾಲೆಯಾಂದರಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆಯ ಹಿನ್ನೆಲೆಯಲ್ಲಿ ಭಾರತಿ ನಗರದ ಎಸ್‌ಟಿಡಿ ಬೂತ್ ಮಾಲಿಕರೊಬ್ಬರನ್ನು ಗುರುವಾರ ತಮ್ಮ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂಗೆ ಬಂದ ಕರೆಯಾಂದರ ಹಿನ್ನೆಲೆಯಲ್ಲಿ , ಫೋನ್ ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚಿದ ಪೊಲೀಸರು ಈ ವಿಚಾರಣೆಗೆ ಮುಂದಾಗಿದ್ದಾರೆ.
ರಾಜಣ್ಣ ಮನೆಗೆ ಬಾರಣ್ಣ : ರಾಜ್‌ಕುಮಾರ್ ಅವರು ಅಪಹರಣವಾದ ದಿನದಿಂದಲೂ ಆಬಾಲವೃದ್ಧರಾಗಿ ಎಲ್ಲರೂ ರಾಜ್ ಸುರಕ್ಷಿತವಾಗಿ ಎಂದು ಮನೆಗೆ ಬರುತ್ತಾರೋ ಎಂದೇ ಚಿಂತಿಸುತ್ತಿದ್ದಾರೆ. ಎಲ್ಲರ ಹಾರೈಕೆಯೂ ರಾಜ್ ಸುರಕ್ಷಿತವಾಗಿ ಮನೆಗೆ ಮರಳಲಿ ಎಂಬುದೇ ಆಗಿದೆ. ಇದಕ್ಕೆ ಶಾಲಾ ಮಕ್ಕಳೂ ಹೊರತಾಗಿಲ್ಲ.
ರಾಜಾಜಿನಗರದ ಪೇರೆಂಟ್ಸ್ ಅಸೋಸಿಯೇಷನ್‌ನ ಬಾಲಕ ಬಾಲಕಿಯರು, ರಾಜಣ್ಣ ಬೇಗ ಮನೆಗೆ ಬಾರಣ್ಣ .. ನಾವು ರಾಜ್‌ಕುಮಾರ್ ಬಿಡುಗಡೆಯ ವರವ ಬೇಡುವೆವು ಎಂಬ ಸಾಲುಗಳಿದ್ದ ಫಲಕಗಳನ್ನು ಹಿಡಿದು, ರಾಜ್‌ಕುಮಾರ್ ಅವರ ನಿವಾಸದಲ್ಲಿ ದೇವರನ್ನು ಪ್ರಾರ್ಥಿಸಿದರು.
ನಾಯಿಗಳ ಮೆರವಣಿಗೆ: ರಾಜ್‌ಕುಮಾರ್ ಅವರು ಸುರಕ್ಷಿತವಾಗಿ ಹಿಂತಿರುಗಿ ಬರಲಿ ಎಂದು ನಾನಾ ಸಂಘ - ಸಂಸ್ಥೆಗಳು ಹಾಗೂ ಕಲಾವಿದರು ದೇವಾಲಯಗಳಲ್ಲಿ ವಿಶೇಷ ಪೂಜೆ - ಹೋಮ - ಹವನ ನಡೆಸುತ್ತಿದ್ದರೆ. ಮಾಲೂರು ತಾಲೂಕಿನ ನಿದರಮಂಗಲದ ನಾಗರಿಕರು, ವೀರಪ್ಪನ್‌ನ ಈ ದುಷ್ಕೃತ್ಯವನ್ನು ಖಂಡಿಸಿ, ನಾಯಿಗಳ ಮೆರವಣಗೆ ನಡೆಸಿದ್ದಾರೆ. ವೀರಪ್ಪನ್‌ನ ಪ್ರತಿಕೃತಿಯನ್ನೂ ದಹಿಸಿದ್ದಾರೆ. ರಾಜ್ ಅವರನ್ನು ಬಿಡಿಸುವಂತೆ ಊರು ಮುಂದಲ ಆಂಜನೇಯನಿಗೆ ಮೊರೆ ಇಟ್ಟಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications