Get Updates
Get notified of breaking news, exclusive insights, and must-see stories!

ಇದು ಸೈಕ್ಲೋನ್‌ ಇಫೆಕ್ಟೇ ಇರಬೇಕು

ಬೆಂಗಳೂರು : ಬೆಂಗಳೂರಿನ ಕಾಡುಗೊಂಡನ ಹಳ್ಳಿಯಲ್ಲಿ ಜಿರ್ರೋ ಎಂದು ಸುರಿಯುತ್ತಿದ್ದ ಮಳೆಗೆ ತೊಯಿಸಿಕೊಳ್ಳುತ್ತಾ , ಯಾರದೋ ಕೈಸನ್ನೆಗಾಗಿ ಕಾಯುತ್ತಾ ಸಾಲಾಗಿ ನಿಂತಿದ್ದ 12 ಆಟೋ ರಿಕ್ಷಾಗಳ ಮೇಲೆ, ಸಂಟ್ಸ್‌ಗಟ್ಟಲೆ ಹರಡಿ ನಿಂತಿದ್ದ ಮರ ಲಟ ಲಟಾರನೆ ಮುರಿದು ಬಿದ್ದು ಅಪ್ಪಚ್ಚಿ ಮಾಡಿ ಬಿಟ್ಟಿದೆ.

ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಟಿಪಿಕಲ್‌ ಮಳೆಗಾಲ. ಶ್ರಾವಣದ ಮೋಡ. ಇದು ಸೈಕ್ಲೋನ್‌ ಮಳೆಯೇ ಸರಿ ಎಂದುಕೊಂಡು ತಿಂಗಳುಗಟ್ಟಲೆ ಮುದುರಿ ಮಲಗಿದ ಕೊಡೆಯ ಕಡ್ಡಿಗಳನ್ನು ಸರಿಪಡಿಸಿಕೊಂಡು ಮಂದಿ ನಿನ್ನೆ ಮನೆಯಿಂದ ಹೊರಗೆ ಅಡಿಯಿಟ್ಟರು. ಬೆಂಗಳೂರಿಗೆ ನ್ಯಾಚುರಲ್‌ ಮಳೆ ಯಾವ ಕಾಲದಲ್ಲಿ ಬರುವುದೋ ಗೊತ್ತಿಲ್ಲಾ... ನಿನ್ನೆಯಂತೂ ರಸ್ತೆ ಬದಿಯಲ್ಲಿ ಹರಿಯುವ ನೀರು, ಕೊಚ್ಚೆ ಕೆಸರು, ಜೊತೆಗೆ ಬೀಸುವ ಗಾಳಿಗೆ ಸ್ವೆಟರನ್ನೂ ಬೇಧಿಸಿಕೊಂಡು ಬಂದು ಕಾಡುವ ಚಳಿ ಬೆಂಗಳೂರಿಗರಿಗೆಲ್ಲಾ ಸಕ್ಕತ್ತಾಗಿ ಕಿರಿಕಿರಿ ಮಾಡಿತು.

ಮೂಡಿಗೆರೆ ಮಂದಿಯಾಂದಿಗೆ ಮಳೆ ಸಹಕರಿಸುತ್ತಿದೆ. ನಾಟಿ, ಉಳುಮೆ ಅಂತ ಅವರು ಹೊಲಗದ್ದೆಗಳಲ್ಲಿ ಓಡಾಡುವ ಅನುಕೂಲ ಅಲ್ಲಿದೆ. ಚಿತ್ರದುರ್ಗದ ಮಂದಿ ಕೆರೆ ಕಟ್ಟೆಯಾಡೆದು ತಮ್ಮ ಸೂರು, ಜಂಕ್ತಿ , ನೆಲವೆಲ್ಲಾ ನೀರು ಪಾಲಾದ ನೋವು ಮರೆಯಲೆತ್ನಿಸುತ್ತಿದ್ದಾರೆ. ಕಾಡಿಸಿ, ಬೇಡಿಸಿ ಬಂದ ಮಳೆ ಧಸಕ್ಕೆಂದು ಬದುಕಿಗೇ ಏಟು ಕೊಡಬಂದಿರುವುದರಿಂದ ಅವರು ಕಷ್ಟ ಪಟ್ಟು ಚೇತರಿಸಿಕೊಳ್ಳುತ್ತಿದ್ದಾರೆ.

ಸೋಮವಾರ ನಾಗಮಂಗಲ, ಕೆಜಿಎಫ್‌ಗಳಲ್ಲಿ ತಲಾ ಎರಡು ಸೆಂಟಿ ಮೀಟರ್‌ ಮಳೆ ಸುರಿದಿದೆ. ಮುನ್ಸೂಚನೆ ವಿಶೇಷ ಭವಿಷ್ಯವನ್ನೇನೂ ನುಡಿದಿಲ್ಲ. ಮಳೆಗಾಲವಾದ್ದರಿಂದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗಬಹುದಂತೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+