Get Updates
Get notified of breaking news, exclusive insights, and must-see stories!

ಸೇನೆಗಾಗಿ ಎಚ್‌ಎಎಲ್‌ನಿಂದ ಲ್ಯಾನ್ಸರ್‌ ಹೆಲಿಕಾಪ್ಟರ್‌

ಬೆಂಗಳೂರು : ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಭಾರತೀಯ ಸೇನೆಗಾಗಿ ನಾಲ್ಕು ಹೆಲಿಕಾಪ್ಟರ್‌ (ಲ್ಯಾನ್ಸರ್‌)ಗಳನ್ನು ಸಿದ್ಧಪಡಿಸಲಿದೆ ಎಂದು ಎಚ್‌ಎಎಲ್‌ನ ಅಧ್ಯಕ್ಷ ಮತ್ತು ನಿರ್ವಾಹಕ ನಿರ್ದೇಶಕರಾಗಿರುವ ಸಿ.ಜಿ.ಕೆ. ಕೃಷ್ಣದಾಸ್‌ ಹೇಳಿದ್ದಾರೆ.

ಅವರು ಸೋಮವಾರ ಎಚ್‌ಎಎಲ್‌ನ ಕೈಗಾರಿಕಾ ಮತ್ತು ಮೆರೈನ್‌ ಗ್ಯಾಸ್‌ ಟರ್ಬೈನ್‌ ವಿಭಾಗದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಲ್ಯಾನ್ಸರ್‌ ಹೆಲಿಕಾಫ್ಟರ್‌ನಿಂದ ಸೇನೆಗೆ ಬಹುಮುಖ ಉಪಯೋಗವಿದ್ದು ರಾಕೆಟ್‌ ಉಡಾವಣಾ ಉಪಕರಣ ಮತ್ತು ಮೆಷಿನ್‌ಗನ್‌ಗಳನ್ನು ಅಳವಡಿಸಿಕೊಳ್ಳುವ ಸೌಲಭ್ಯ ಈ ಹೆಲಿಕಾಫ್ಟರ್‌ನಲ್ಲಿದೆ ಎಂದು ಕೃಷ್ಣ ದಾಸ್‌ ಹೇಳಿದ್ದಾರೆ. ಲ್ಯಾನ್ಸರ್‌ನ್ನು ಎಚ್‌ಎಎಲ್‌ ಗ್ರೂಪ್‌ ಸಿದ್ಧ ಪಡಿಸಿದ್ದು, ರಕ್ಷಣಾ ದಳ ಈಗಾಗಲೇ 20 ಕೋಟಿ ರೂಪಾಯಿ ವೆಚ್ಚದ ಲ್ಯಾನ್ಸರ್‌ ಹೆಲಿಕಾಪ್ಟರ್‌ಗಳಿಗೆ ಆರ್ಡರ್‌ ನೀಡಿದೆ.

ಎಚ್‌ಎಎಲ್‌ನ ಇತ್ತೀಚಿನ ಉತ್ಪಾದನೆಯಾದ ಏರ್‌ ಅಂಬ್ಯುಲೆನ್ಸ್‌ನ್ನು ಬರುವ ವರ್ಷ ನಗರದಲ್ಲಿ ನಡೆಯುವ ಏರ್‌ ಷೋದಲ್ಲಿ ಪ್ರದರ್ಶಿಸಲಾಗುವುದು. ಇದೂ ಸೇನೆಯಲ್ಲಿ ಗಾಯಗೊಂಡವರನ್ನು ಬೇಗನೆ ಆಸ್ಪತ್ರೆಗೆ ತಲುಪಿಸುವಲ್ಲಿ ಸಹಕರಿಸುತ್ತದೆ ಎಂದು ಅವರು ಹೇಳಿದರು. ಈ ಸಾಲಿನಲ್ಲಿ ಎಚ್‌ಎಎಲ್‌ನ ಆದಾಯ ಎರಡೂವರೆ ಸಾವಿರ ಕೋಟಿ ರೂಪಾಯಿಗಳನ್ನು ಮಿರಿದ್ದು, ಇನ್ನೈದು ವರ್ಷಗಳಲ್ಲಿ 10 ಸಾವಿರ ಕೋಟಿ ರೂಪಾಯಿ ಆದಾಯ ಗಳಿಸುವ ಗುರಿ ಕಂಪನಿಯ ಮುಂದಿದೆ ಎಂದು ಅವರು ಹೇಳಿದರು. ಕಂಪನಿಯು ನೌಕಾದಳಕ್ಕೂ ಇಂಜಿನ್‌ಗಳನ್ನು ಸರಬರಾಜು ಮಾಡಲು ಒಪ್ಪಿಕೊಂಡಿದ್ದು ಬರುವ ಮಾರ್ಚ್‌ ತಿಂಗಳೊಳಗೆ ಮೊದಲ ಇಂಜಿನ್‌ ಅನ್ನು ಭಾರತೀಯ ನೌಕಾದಳಕ್ಕೆ ಕಳುಹಿಸಿಕೊಡಲಾಗುವುದು ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+