ರಾಜ್‌ಕುಮಾರ್ ಬಿಡುಗಡೆಗೆ ಕೇಂದ್ರದ ನೆರವು ಕೋರಿಲ್ಲ : ಖರ್ಗೆ
ಬೆಂಗಳೂರು:ರಾಜ್‌ಕುಮಾರ್ ಹಾಗೂ ಇತರರ ಬಿಡುಗಡೆಗೆ ರಾಜ್ಯ ಸರಕಾರವು ಕೇಂದ್ರದ ನೆರವನ್ನು ಕೋರಿಲ್ಲ ಎಂದು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರಕಾರವು ಈ ಪ್ರಕರಣದಲ್ಲಿ ರಾಜ್ಯಕ್ಕೆ ನೆರವಾಗಲು ಸ್ವತಃ ಮುಂದಾಗಿಲ್ಲ. ರಾಜ್ಯದ ಗೃಹ ಕಾರ್ಯದರ್ಶಿ ಎಂ.ಬಿ. ಪ್ರಕಾಶ್ ಅವರು ಕೇಂದ್ರ ಸರಕಾರಕ್ಕೆ ರಾಜ್ ಅಪಹರಣದ ಎಲ್ಲ ವಿದ್ಯಾಮಾನಗಳನ್ನೂ ವಿವರಿಸಿದ್ದಾರೆ ಎಂದು ಖರ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಸಂಧಾನಕಾರ ಗೋಪಾಲ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಿ, ಒಂದೆರಡು ದಿನಗಳಲ್ಲಿ ಮತ್ತೆ ವೀರಪ್ಪನ್ ಅಡಗುತಾಣದತ್ತ ತೆರಳುತ್ತಾರೆ ಎಂದು ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಾ ಖರ್ಗೆ ತಿಳಿಸಿದರು. ವೀರಪ್ಪನ್‌ನ ಕೆಲವು ಬೇಡಿಕೆಗಳನ್ನು ಒಪ್ಪಿಕೊಳ್ಳಬಹುದಾಗಿದ್ದು, ಅವುಗಳಿಗೆ ಸರಕಾರ ಸಮ್ಮತಿಸಿದೆ. ಇನ್ನು ಕೆಲವು ಬೇಡಿಕೆಗಳನ್ನು ಸಮ್ಮತಿಸಲು ಸಾಧ್ಯವೇ ಇಲ್ಲ ಹೀಗಾಗಿ ಆ ಬಗ್ಗೆ ವೀರಪ್ಪನ್‌ಗೆ ವಿವರಣೆಯನ್ನೂ ನೀಡಲಾಗಿದೆ ಎಂದು ಖರ್ಗೆ ತಿಳಿಸಿದರು. ಹದಿನೈದು ದಿನಗಳ ನಂತರ ರಾಜ್ಯದ ಜನಜೀವನ ಮಾಮೂಲು ಸ್ಥಿತಿಗೆ ಮರಳಿದೆ ಎಂದೂ ಅವರು ಹೇಳಿದರು.
ರಾಜ್‌ಕುಮಾರ್ ಪುತ್ರರ ಮನವಿ: ತಮ್ಮ ತಂದೆ ಹಾಗೂ ಕನ್ನಡ ಚಿತ್ರ ರಸಿಕರ ಕಣ್ಮಣಿಯಾದ ರಾಜ್‌ಕುಮಾರ್ ಅವರನ್ನು ಬಿಡಿಸಿಕೊಂಡು ಬರಲು ಕೆಲವು ಅಭಿಮಾನಿಗಳು ಕಾಡಿನತ್ತ ತೆರಳುತ್ತಿದ್ದಾರೆ. ಅವರನ್ನು ಕೂಡಲೇ ತಡೆಯಬೇಕು ಎಂದು ರಾಜ್‌ಕುಮಾರ್ ಅವರ ಪುತ್ರರಾದ ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸೋಮವಾರ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ತಮ್ಮ ತಂದೆಯ ಮೇಲಿನ ಅಭಿಮಾನದಿಂದ ಕೆಲವು ಅಭಿಮಾನಿಗಳು ಕಾಡಿಗೆ ಹೋಗುತ್ತಿದ್ದಾರೆ, ಕೆಲವರು ಸುತ್ತಾಡಿ ಹಿಂತಿರುಗಿದ್ದಾರೆ, ಈ ರೀತಿಯ ಕ್ರಮಗಳು ಅಪ್ಪಾಜಿಯವರಿಗೆ ಆಪಾಯ ತಂದೊಡ್ಡುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳು ಇಂತಹ ಸಾಹಸಗಳಿಗೆ ಕೈಹಾಕಬಾರದು ಎಂದು ಮನವಿ ಮಾಡಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications