For Daily Alerts
ಜಕಾರ್ತಾ ಎಟಿಎಫ್ ಕೂಟಕ್ಕೆ ಕರ್ನಾಟಕದ ಪ್ರಮೀಳಾ
ನವದೆಹಲಿ : ಕರ್ನಾಟಕದ ಜಿ.ಜಿ. ಪ್ರಮೀಳಾ, ಶಕ್ತಿಸಿಂಗ್, ನೀಲಂ ಜೆ. ಸಿಂಗ್, ರಚಿತಾ ಅವರ-ನ್ನೊಳಗೊಂಡ ಸುಮಾರು 46 ಅಥ್ಲೀಟ್‌ಗಳ ತಂಡ ಆಗಸ್ಟ್ 28ರಿಂದ 31ರವರೆಗೆ ಜಕಾರ್ತಾದಲ್ಲಿ ನಡೆಯಲಿರುವ 13ನೇ ಏಷ್ಯಾ ಟ್ರ್ಯಾಕ್ ಮತ್ತು ಫೀಲ್ಡ್ (ಎಟಿಎಫ್) ಕೂಟದಲ್ಲಿ ಪಾಲ್ಗೊಳ್ಳಲಿದೆ.
ಜಕಾರ್ತಾ ಕೂಟದಲ್ಲಿನ ಸಾಧನೆ ಸಿಡ್ನಿ ಒಲಂಪಿಕ್ಸ್ ಆಯ್ಕೆಗೆ ಮಾನದಂಡವಾಗಲಿದೆ. ಅಥ್ಲೀಟ್‌ಗಳು ಅಲ್ಲಿ ತೋರುವ ಸಾಮರ್ಥ್ಯದ ಮೇಲೆ 25 ಮಂದಿಯನ್ನು ಸಿಡ್ನಿ ಒಲಂಪಿಕ್ಸ್‌ಗೆ ಆರಿಸಲಾಗುವುದು ಎಂದು ಭಾರತ ಅಮೆಚೂರ್ ಅಥ್ಲೆಟಿಕ್ ಫೆಡರೇಷನ್ (ಎಎಎಫ್‌ಐ) ಅಧ್ಯಕ್ಷ ಸುರೇಶ್ ಕಲ್ಮಾಡಿ ತಿಳಿಸಿದ್ದಾರೆ.
ಜಕಾರ್ತ ಕೂಟದಲ್ಲಿ 22 ಮಂದಿ ಮಹಿಳೆಯರು ಭಾಗವಹಿಸುತ್ತಿದ್ದು, ತಮ್ಮ ಸಾಮರ್ಥ್ಯ ತೋರಲು ಉತ್ತಮ ಅವಕಾಶ ದೊರೆತಿದೆ. ಸಿಡ್ನಿ ಒಲಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡವನ್ನು ಆಗಸ್ಟ್ 31ರಂದು ಪ್ರಕಟಿಸಲಾಗುವುದು ಎಂದು ಎಎಎಫ್‌ಐ ಕಾರ್ಯದರ್ಶಿ ಲಲಿತ್ ಭಾನೋಟ್ ಹೇಳಿದ್ದಾರೆ.