ಬುಧವಾರ ಸರಕಾರದ ಸಂದೇಶದೊಂದಿಗೆ ಅಡಗುತಾಣಕ್ಕೆ ಗೋಪಾಲ್
ಚೆನ್ನೈ : ವೀರಪ್ಪನ್ ಮಂಡಿಸಿರುವ ಹೊಸ ಬೇಡಿಕೆಗಳು ಹಾಗೂ ಹಿಂದಿನ ಬೇಡಿಕೆಗಳಿಗೆ ಕೇಳಿರುವ ಸ್ಪಷ್ಟೀಕರಣಕ್ಕೆ ಪೂರಕವಾದ ಪುರಾವೆಗಳೊಂದಿಗೆ ಎರಡೂ ರಾಜ್ಯಗಳ ಸಂಧಾನಕಾರ ನಕ್ಕೀರನ್ ಗೋಪಾಲ್ ಬುಧವಾರ (16ರಂದು) ಮತ್ತೆ ಕಾಡಿಗೆ ತೆರಳಲಿದ್ದಾರೆ.
ಈ ವಿಷಯವನ್ನು ತಮಿಳುನಾಡು ಸರಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ವೀರಪ್ಪನ್ ಶುಕ್ರವಾರ ಗೋಪಾಲ್ರೊಂದಿಗೆ ಕಳುಹಿಸಿರುವ ಹೊಸ ಬೇಡಿಕೆಗಳ ಬಗ್ಗೆ ಎರಡೂ ರಾಜ್ಯಗಳು ಚರ್ಚಿಸಿದ್ದು , ಪೂರಕ ಪುರಾವೆ ಹಾಗೂ ದಾಖಲೆಗಳನ್ನು ಒಟ್ಟುಗೂಡಿಸುತ್ತಿವೆ. ಈ ಪ್ರಕ್ರಿಯೆ ಮುಗಿದ ಕೂಡಲೇ ವೀರಪ್ಪನ್ ಬಳಿಗೆ ಗೋಪಾಲ್ ಹೊರಡಲಿದ್ದಾರೆ.
ಬೇಡಿಕೆಗಳ ಸಂಬಂಧದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಶನಿವಾರ ಮಧ್ಯಾಹ್ನ ಮುಖ್ಯಕಾರ್ಯದರ್ಶಿ ಎ.ಪಿ. ಮುತ್ತುಸ್ವಾಮಿ, ಗೃಹಕಾರ್ಯದರ್ಶಿ ಶಾಂತಾ ಶೈಲಾ ನಾಯರ್, ಪೊಲೀಸ್ ಮಹಾನಿರ್ದೇಶಕ ಎಫ್.ಸಿ. ಶರ್ಮಾ ಹಾಗೂ ಇತರ ಉನ್ನತಾಧಿಕಾರಿಗಳ ಜತೆ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ ಚರ್ಚಿಸಿದರು.
ತಮಿಳುನಾಡು ಸರಕಾರ ವೀರಪ್ಪನ್ ಬೇಡಿಕೆಗಳಿಗೆ ಅನುಕೂಲಕರ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕ ಸರಕಾರ ಸೋಮವಾರ ಅಗತ್ಯ ದಾಖಲಾತಿಗಳನ್ನು ತಮಿಳುನಾಡು ಸರಕಾರಕ್ಕೆ ಸಲ್ಲಿಸಲಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications