ಕೆಪಿಸಿಎಲ್- ಸಿಂಗರೇನಿ ಒಡಂಬಡಿಕೆ : ಆರ್‌ಪಿಟಿಎಸ್‌ಗೆ 30 ಲಕ್ಷ ಟನ್ ಕಲ್ಲಿದ್ದಲು
ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್) ವು ಆಂಧ್ರಪ್ರದೇಶದ ಸಿಂಗರೇನಿ ಕಲ್ಲಿದ್ದಲು ಸಂಸ್ಥೆಯಾಂದಿಗೆ ಇಂಧನ ಪೂರೈಕೆ ಕುರಿತ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.
ವರ್ಷಕ್ಕೆ 1260 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಲಿರುವ ಈ ಒಪ್ಪಂದದಿಂದ ರಾಯಚೂರಿನ ಥರ್ಮಲ್ ವಿದ್ಯುತ್ ಉತ್ಪಾದನಾ ಕೇಂದ್ರ (ಆರ್‌ಪಿಟಿಎಸ್) ಕ್ಕೆ ಸಿಂಗರೇನಿ ಕಲ್ಲಿದ್ದಲು ಗಣಿಯಿಂದ ಪ್ರತಿ ವರ್ಷ 30 ಲಕ್ಷ ಟನ್ ಕಲ್ಲಿದ್ದಲು ಪೂರೈಕೆಯಾಗಲಿದೆ. ಪ್ರಸ್ತುತ ಆರ್‌ಟಿಪಿಎಸ್ ಪ್ರತಿ ನಿತ್ಯ 25 ದಶಲಕ್ಷ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದು, ಸ್ಥಾವರಕ್ಕೆ 1600 ಮೆಟ್ರಿಕ್ ಟನ್ ಕಲ್ಲಿದ್ದಲಿನ ಅಗತ್ಯವಿದೆ ಎಂದು ಕೆಪಿಸಿಎಲ್‌ಪತ್ರಿಕಾ ಹೇಳಿಕೆ ತಿಳಿಸಿದೆ.
ಕೆಪಿಸಿಎಲ್ ಕಾರ್ಯ ನಿರ್ವಾಹಕ ನಿರ್ದೇಶಕ ಕೆ. ಜ್ಯೋತಿ ರಾಮಲಿಂಗಂ ಹಾಗೂ ಸಿಂಗರೇನಿ ಕಲ್ಲಿದ್ದಲು ಸಂಸ್ಥೆಯ ಅಧ್ಯಕ್ಷ ಶರ್ಮ ಹೈದರಾಬಾದ್‌ನಲ್ಲಿ ಶುಕ್ರವಾರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು ಎಂದು ಕೆಪಿಸಿಎಲ್ ಪತ್ರಿಕಾ ಪ್ರಕಟಣೆ ತಿಳಿಸಿದೆ. ದೀರ್ಘಾವಧಿಯ ಈ ಒಡಂಬಡಿಕೆಯಿಂದ ‘ಡಿ’ ದರ್ಜೆಯ ಉತ್ತಮ ಗುಣ ಮಟ್ಟದ ಕಲ್ಲಿದ್ದಲು ಪೂರೈಕೆಯಾಗಲಿದ್ದು, ರಾಯಚೂರು ಥರ್ಮಲ್ ವಿದ್ಯುತ್ ಕೇಂದ್ರದ ಕಲ್ಲಿದ್ದಲಿನ ಅಗತ್ಯ ಅರ್ಧದಷ್ಟು ಕಡಿಮೆಯಾಗಲಿದೆ.
(ಯುಎನ್‌ಐ)