ರಾಜ್ ಅಪಹರಣ ನಂತರದ ಮೊದಲ ಕಂತಿನ ನಿಟ್ಟುಸಿರು
ಬೆಂಗ-ಳೂ-ರು: ರಾ-ಜ್ ಬಗೆಗಿ-ನ ಸುದ್ದಿ-ಗಾ-ಗಿ ಚಾತ-ಕ ಪಕ್ಷಿ-ಗ-ಳಂ-ತೆ ಕಾದಿ-ದ್ದ ಮನ-ಸು-ಗ-ಳಿ-ಗೆ ಮೊದ-ಲ ಕಂತಿ-ನ ನಿಟ್ಟು-ಸಿ-ರು ಬಂದಿ-ದೆ. ಬೆಂಗಳೂರಿನ ಸದಾಶಿವನಗರದ ರಾಜ್ ಮ-ನೆ-ಯ-ಲ್ಲೂ ಮಂದ-ಹಾ-ಸ-ದ ಹೊ-ನ-ಲು ಚಿ-ಮ್ಮಿ-ದ ಬಗ್ಗೆ ಸುದ್ದಿ -ವರದಿಗಳು ಬರುತ್ತಿವೆ. ಈ ನಡು-ವೆ ಊರಿ-ಗೆ ಹೊಲ-ಗೇ-ರಿ-ಯೆಂ-ಬಂ-ತೆ ಊಹಾ-ಪೋ-ಹ-ಗ-ಳೂ ಸಾಧ್ಯ-ವಾ-ದ-ಷ್ಟು ಮಟ್ಟಿ-ಗೆ ಪ-ರಿ-ಸ್ಥಿ-ತಿ ಆಳು-ವ ಚಾನ್ಸ್-ಗಾ-ಗಿ ತವ-ಕಿ-ಸು-ತ್ತಿ-ವೆ. ವದಂತಿಗಳ ಮಾರುಕಟ್ಟೆಯಲ್ಲಿ ಲೇಟೆ-ಸ್ಟ್ ಊಹಾ-ಪೊ-ಹ ಎಂದ-ರೆ ಕ್ಯಾಸೆ-ಟ್-ನ-ಲ್ಲಿ-ರು-ವು-ದು ರಾಜ್ ಧ್ವನಿ-ಯೇ? ಎಂಬ ಅನು-ಮಾ-ನ-ದ ಗೂಬೆ ಸವಾ-ರಿ ಮಾಡ-ಲು ತವ-ಕಿ-ಸು-ತ್ತಿ-ದೆ. ಸೋ ಫಾರ್, ಅನು-ಮಾ-ನ- ಬಿಗ-ಡಾ-ಯಿ-ಸದಂ-ತೆ ನೋಡಿ-ಕೊ-ಳ್ಳಲಾ-ಗು-ತ್ತಿ-ದೆ.
ರಾಜ್‌ರ ಹಿರಿ-ಯ ಪುತ್ರ ಶಿವ-ರಾ-ಜ್, ಪತ್ನಿ ಪಾರ್ವ-ತ-ಮ್ಮ, ಎರ-ಡ-ನೇ ಪು-ತ್ರ ರಾಘ-ವೇಂ-ದ್ರ ಹಾಗೂ ಮುಖ್ಯ-ಮಂ--ತ್ರಿ ಕೃ-ಷ್ಣ ಸೇರಿ-ದಂ-ತೆ ಅನೇ-ಕ ಜನ ರಾಜ್ ಧ್ವನಿ-ಯ-ನ್ನು ದೃಢ-ಪ-ಡಿ-ಸಿ-ರು-ವ ವರ-ದಿ-ಗ-ಳು ಬರುತ್ತಲೇ ಇವೆ.
ಈವ-ರೆ-ಗೆ ಆತ-ಂ-ಕ-ದ ಸುಳಿ-ಯ-ಲ್ಲಿ ಗೊಂದ-ಲ-ಗೊಂ-ಡಂ-ತೆ ಕಾಣು-ತ್ತಿ-ದ್ದ ಅಭಿ-ಮಾ-ನಿ-ಗ-ಳು ಯಾವು-ದ-ನ್ನು ನಂಬ-ಬೇ-ಕು ಯಾವು-ದ-ನ್ನು ಬಿಡ--ಬೇ-ಕು ಎಂಬ ಸ್ಥಿತಿ-ಯ-ಲ್ಲಿ ಕಳೆ-ದ ಐದು ದಿನ-ಗ-ಳ ಕಾಲ ತಲ್ಲ-ಣ--ದ-ಲ್ಲಿ ಮು-ಳು-ಗಿ-ದ್ದ-ರು. ಕ್ಯಾಸೆ-ಟ್ ಧ್ವನಿ -ಮ-ರು-ಳು-ಗಾ-ಡಿ-ನ ಓಯ-ಸೀ-ಸ್-ನಂ-ತೆ ಬಂದಿ-ದೆ. ಈ ನಡು-ವೆ ಕೆಲ-ವು ಕಿಡಿ-ಗೇ-ಡಿ-ಗ-ಳು ಕ್ಯಾಸೆ-ಟ್-ನ-ಲ್ಲಿ-ರು-ವು-ದು ರಾಜ್ ಧ್ವನಿ ಅಲ್ಲ ಎಂದು ದುಃಖ-ತ-ಪ್ತ ಅಭಿ-ಮಾ-ನಿ-ಗಳನ್ನು ದಾರಿ-ತ-ಪ್ಪಿ-ಸ-ಲು ಯತ್ನಿ-ಸು-ತ್ತಿ-ದ್ದಾ-ರೆ ಎಂಬ ಸುದ್ದಿ-ಗ-ಳೂ ಬರ-ತೊ-ಡ-ಗಿ-ವೆ.
ತಮ್ಮ ಪತಿ-ಯ ಧ್ವ-ನಿ-ಯ-ನ್ನು ಖಚಿ-ತ-ಪ-ಡಿ-ಸಿ ಮಾತ-ನಾ-ಡಿ-ರು-ವ ಪಾರ್ವ-ತ-ಮ್ಮ, ರಾಜ್ ಅಪ-ಹ-ರ-ಣ-ವಾ-ದಾ-ಗಿ-ನಿಂ-ದ ಒಮ್ಮೆ-ಯೂ ತಾವು ಕಣ್ಣೀ-ರು ಹಾಕಿ-ಲ್ಲ. ಧೈಯ-ರ್-ಗುಂ-ದ-ದೆ, ತಾಳ್ಮೆ-ಯಿಂ-ದ ಇರ--ಬೇ-ಕೆಂ-ದು ಪತಿ ರಾಜ್ ನೀಡಿ-ದ್ದ ಸೂಚ-ನೆ ಮೇರೆ-ಗೆ ನೆಡೆ-ದು-ಕೊ-ಳ್ಳು-ತ್ತಿ-ರು-ವು-ದಾ-ಗಿ ಹೇ-ಳಿ-ದ್ದಾ-ರೆ.
ತನ್ನ ತಂದೆ-ಯ ಧ್ವ-ನಿ-ಯ-ನ್ನು ಯಾರೂ ಅನು-ಕ-ರಿ-ಸ-ಲು ಸಾಧ್ಯ-ವಿಲ್ಲ ಎಂದಿ-ರು-ವ ರಾಜ್-ರ ಎರ-ಡ-ನೇ ಪುತ್ರ ರಾಘ-ವೇಂ-ದ್ರ, ಅಭಿ-ಮಾ-ನಿ-ಗ-ಳ-ನ್ನು ಸಮಾ-ಧಾ-ನಪಡಿಸುತ್ತಿ-ದ್ದಾ-ರೆ. ಈ ನಡು-ವೆ ವರ-ನ-ಟ-ನ ಸುರ-ಕ್ಷಿ-ತ ಬಿಡು-ಗ-ಡೆ-ಗೆ ಪ್ರಾರ್ಥ-ನೆ-ಗ-ಳು, ಯಜ್ಞ-ಯಾ-ಗಾ-ದಿ-ಗ-ಳು ನಡೆ-ದೇ ಇವೆ. ರಾಜ್ ಅವ-ರ ಮನೆಗೆಗ ರಾಜ-ಕಾ-ರ-ಣಿ-ಗ-ಳು, ವಿ-ವಿ-ಧ ರಂಗ-ಗ-ಳ ಗಣ್ಯ-ರು, ಅಭಿ-ಮಾ-ನಿ-ಗಳ ಮಹಾಪೂರ ಹರಿದು ಬರುತ್ತಲೇ ಇದೆ. ಕ್ಯಾಸೆ-ಟ್ ಕಳಿ-ಸಿ-ದ ವೀರ-ಪ್ಪ-ನ್-ಗೆ ರಾಜ್ ಕುಟುಂ-ಬ ಧನ್ಯ-ವಾ-ದ ಅರ್ಪಿ-ಸಿ-ದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications