Get Updates
Get notified of breaking news, exclusive insights, and must-see stories!

ಸಂತೆಬೆನ್ನೂರಿನಲ್ಲಿ ಪರ್ಜನ್ಯಜಪ

ಬೆಂಗಳೂರು : ಎನಿತು ವರ್ಣಿಸಲಿ ಈ ಮಳೆರಾಯನ. ಎಂದು, ಯಾವಾಗ ಆತ ವ್ಯಗ್ರನಾಗುತ್ತಾನೋ. ಎಂದು ಶಾಂತನಾಗುತ್ತಾನೋ... ಯಾರ ಮೇಲೆ ಮುನಿಯುತ್ತಾನೋ... ಯಾರಿಗೆ ಒಲಿಯುತ್ತಾನೋ...

ಈಗ ಆಗಿರುವುದೂ ಅದೆ. ಸಂತೆ ಬೆನ್ನೂರಿನಲ್ಲಿ ಮಳೆಯಾಗಿಲ್ಲ. ಪರ್ಜನ್ಯ ಜಪ ಮಾಡಿ, ಹಾಡನು ಹಾಡಿ ಮಳೆತರಿಸಲು ಪ್ರಯತ್ನಿಸಿ ಇಲ್ಲಿ ನ ಜನ ಸೋತಿದ್ದಾರೆ. ಕೊನೆಗೆ ಜೀವಂತವಿರುವ ಯುವಕನೊಬ್ಬನನ್ನು ಚಟ್ಟದ ಮೇಲೆ ಮಲಗಿಸಿ, ಅಣಕು ಶವಯಾತ್ರೆ ಮಾಡಿ ವರುಣನಿಗೆ ಮಳೆಗಾಗಿ ಅಪೀಲು ಹಾಕಿಕೊಂಡಿದ್ದಾರೆ.

ಕತ್ತೆಯ ಮೆರವಣಿಗೆ ಮಾಡಿದರೆ, ಮೋಜಿನ ಸುಳ್ಳು ಮದುವೆ ಮಾಡಿದರೆ, ಅಣಕು ಶವಯಾತ್ರೆ ಕೈಗೊಂಡರೆ ಮಳೆರಾಯ ಒಲಿಯುತ್ತಾನೆ ಎಂಬ ಒಂದು ನಂಬಿಕೆ ಜನರಲ್ಲಿದೆ. ಇಷ್ಟೆಲ್ಲ ಮಾಡಿದರೂ ಕೆಲವೆಡೆ ಮಳೆಯೇ ಆಗುವುದಿಲ್ಲ. ಇನ್ನು ಕೆಲವೆಡೆ ಬೇಡ ಬೇಡವೆಂದರೂ ಮಳೆ ಬೀಳುತ್ತದೆ.

ಬೆಂಗಳೂರಿನಲ್ಲಿ ಮೊನ್ನೆ ರಾತ್ರಿ ಆದದ್ದೂ ಅದೆ. ರಾತ್ರಿ 10 ಗಂಟೆಯ ಸಮಯ. ಇದ್ದಕ್ಕಿದಂತೆ ಕಾರ್ಮೋಡ ಕವಿಯಿತು. ಸುಮಾರು ನಾಲ್ಕು ಗಂಟೆಗಳ ಕಾಲ ಎಡೆಬಿಡದೆ ಮಳೆ ಸುರಿಯಿತು. ಅದೂ ಒಂಬತ್ತು ಸೆಂಟಿ ಮೀಟರ್‌. ಒಳಚರಂಡಿ ವ್ಯವಸ್ಥೆ ಹದಗೆಟ್ಟ ಬೆಂಗಳೂರಲ್ಲಿ ರಸ್ತೆಗಳೆಲ್ಲಾ ಕೆರೆಗಳಾದವು. ಮ್ಯಾನ್‌ಹೋಲ್‌ಗಳ ಮುಚ್ಚಳ ಕಿತ್ತು, ಹೊಲಸು ನೀರು ಹೊರಚಿಮ್ಮಿತು, ರಸ್ತೆಗಳಲ್ಲಿ ಸುಮಾರು ನಾಲ್ಕು ಅಡಿಯಷ್ಟು ನೀರು ಹರಿಯ ತೊಡಗಿತು. ತಗ್ಗು ಪ್ರದೇಶದ ಮನೆಗಳೆಲ್ಲ ಜಲಾವೃತವಾದವು. ತಳಪಾಯ ಭದ್ರ ಇಲ್ಲದ ಮನೆಗಳು ನೆಲಕಚ್ಚಿದವು.

ಸಂತೆ ಬೆನ್ನೂರಿನಲ್ಲಿ ಅಣಕು ಶವಯಾತ್ರೆ ನಡೆದರೆ, ಬೆಂಗಳೂರಿನ ಮಳೆಗೆ ಮಹಿಳೆಯಾಬ್ಬರು ಶವವೇ ಆದರು. ಮಳೆಯಿಂದ ಕುಸಿದ ಮನೆ ಮಹಿಳೆಯಾಬ್ಬರನ್ನು ಬಲಿ ತೆಗೆದುಕೊಂಡಿತು. ಮೊನ್ನೆ ಮುನ್ಸೂಚನೆ ನೀಡದೆ, ರಾತ್ರಿಯೆಲ್ಲ ಸುರಿದ ಮಳೆ ಶಾಂತವಾಯಿತು. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಮುಂಗಾರು ದುರ್ಬಲವಾಯಿತು. ರಾಮನಗರದಲ್ಲಿ ಒಂದು ಸೆಂಟಿಮೀಟರ್‌ ಮಳೆ ಆಗಿದೆ ಎಂಬುದನ್ನು ಬಿಟ್ಟರೆ, ಉಳಿದಂತೆ ಹೆಚ್ಚಿನ ಮಳೆ ಎಲ್ಲೂ ಆಗಿಲ್ಲ. ದಕ್ಷಿಣ ಒಳನಾಡಿನ ಒಂದೆರಡು ಕಡೆ, ನಾಲ್ಕಾರು ಹನಿ ಬಿದ್ದಿದೆ. ಕರಾವಳಿಯಲ್ಲಿ ಮಳೆ ನಿಂತು ಒಣಹವೆ ಮೂಡಿದೆ.

ಮುಂದಿನ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರೂ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವೆಡೆ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ಮಳೆ ಆಗುವ ನಿರೀಕ್ಷೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+