ಮಂಗಳ, ಶುಕ್ರವಾರದಂದು ಏಕೆ ಈ ಕೆಲಸಗಳನ್ನು ಮಾಡಬಾರದು?
Recommended Video

"ನಾಳೆ ಮಂಗಳವಾರ, ಮಾರನೆಯ ದಿನ ನವಮಿ ಆಮೇಲೆ ನಾನಿಲ್ಲಿ ನಿಲ್ಲುವೆನೆ?" -ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವನವೊಂದರ ಸಾಲಿದು. ಅಂದರೆ ಕವಿತೆಯಲ್ಲಿ ಹೆಣ್ಣುಮಗಳು ತನ್ನ ಪತಿಗೆ ಹೇಳುವ ಮಾತಿದು. ಏಕೆಂದರೆ, ಮಂಗಳವಾರ ಹಾಗೂ ನವಮಿಯಂದು ಪ್ರಯಾಣ ಮಾಡಕೂಡದು ಎಂಬುದು ನಂಬಿಕೆ.
ಮಂಗಳವಾರ ಒಂದೇ ಅಲ್ಲ, ಶುಕ್ರವಾರ ಕೂಡ ಕೆಲವು ಕೆಲಸಗಳನ್ನು ಮಾಡುವುದಿಲ್ಲ. ಮಲೆನಾಡಿನ ಭಾಗದಲ್ಲಿ ಇರುವ ನಂಬಿಕೆ ಏನೆಂದರೆ, ತವರಿಗೆ ಬಂದ ಮಗಳನ್ನು ಮಂಗಳವಾರ ವಾಪಸ್ ಕಳಿಸುವುದಿಲ್ಲ. ಸೊಸೆಯನ್ನು ಶುಕ್ರವಾರ ಆಕೆಯ ತವರಿಗೆ ಕಳಿಸುವುದಿಲ್ಲ. ಅದೇ ರೀತಿ ಅತಿಥಿಯನ್ನು ಮನೆಗೆ ಬಂದ ಏಳನೇ ದಿನ ವಾಪಸ್ ಕಳಿಸುವುದಿಲ್ಲ.
ಇವೆಲ್ಲವೂ ನಂಬಿಕೆ ಭಾಗವೇ. ಇದನ್ನು ನಂಬದವರು ಬೇರೆ ವಾದವನ್ನೇ ಹೂಡಬಹುದು. ಮಗಳನ್ನು ಮನೆಯಿಂದ ವಾಪಸ್ ಕಳುಹಿಸಲು ಇಷ್ಟವಿಲ್ಲದವರು, ಸೊಸೆಯನ್ನು ತವರಿಗೆ ಕಳುಹಿಸಿಕೊಡಲು ನೆಪ ಹುಡುಕಿದಂಥವರು ಈ ರೀತಿಯ ಮಾತುಗಳನ್ನು ಜಾರಿಗೆ ತಂದಿರಬಹುದು ಎನ್ನುವ ಮಾತನಾಡಬಹುದು.
ಅದೇ ರೀತಿ ಮನೆಗೆ ಬಂದ ನೆಂಟರನ್ನು ಏಳನೇ ದಿವಸದವರೆಗೆ ಗೌರವಯುತವಾಗಿ ನೋಡುವವರು ಸಹ ಉಂಟೇ ಎಂದು ಹುಬ್ಬೇರಿಸಬಹುದು! ಇರಲಿ ಈ ಲೇಖನದಲ್ಲಿ ಮಂಗಳವಾರ ಹಾಗೂ ಶುಕ್ರವಾರ ಯಾವ ಕಾರಣಕ್ಕೂ ಮಾಡಬಾರದ ಈ ಕೆಲಸದ ಬಗ್ಗೆ ತಿಳಿದುಕೊಳ್ಳೋಣ.

ಮಂಗಳವಾರ ಕುಜನ ದಿನ
ಮಂಗಳವಾರ ಕುಜನ ಆಧಿಪತ್ಯ ಇರುವ ದಿನ. ಆ ದಿನ ಯಾರಿಗಾದರೂ ಹಣ ಕೊಟ್ಟರೆ ಕಲಹ ಕಟ್ಟಿಟ್ಟ ಬುತ್ತಿ ಎಂಬುದು ನಂಬಿಕೆ. ಆದ್ದರಿಂದ ಮಂಗಳವಾರದಂದು ಹಣ ಕೊಡುವುದನ್ನೋ ತರುವುದನ್ನೋ ನಮ್ಮ ಹಿಂದಿನವರು ಸಹ ಮಾಡುತ್ತಿರಲಿಲ್ಲ. ಇಂದಿಗೂ ಆ ನಂಬಿಕೆ ಮುಂದುವರಿದುಕೊಂಡು ಬಂದಿದೆ.

ಹಣ ಬಂದರೆ ಬೇಡ ಅನ್ನುವುದಿಲ್ಲ
ಇನ್ನು ಶುಕ್ರವಾರದಂದು ಸಹ ಹಣಕಾಸಿನ ವಿಚಾರವಾಗಿ ಮನೆಯೊಳಗೆ ದುಡ್ಡು ಬಂದರೆ ಯಾರೂ ಬೇಡ ಅನ್ನುವುದಿಲ್ಲ. ಆದರೆ ಕೊಡಬೇಕು ಅಂದರೆ ಖಂಡಿತಾ ಒಪ್ಪುವುದಿಲ್ಲ. ಅಷ್ಟೇ ಅಲ್ಲ, ಆ ದಿನ ಮುಸ್ಸಂಜೆಯಲ್ಲಂತೂ ಹಾಲು, ಮೊಸರು, ತುಪ್ಪ, ಸಕ್ಕರೆ ಹೀಗೆ ಮಹಾಲಕ್ಷ್ಮಿ ಸ್ವರೂಪವಾದ ಏನನ್ನೂ ಮನೆಯಿಂದ ಆಚೆ ಕೊಡುವುದಿಲ್ಲ.

ಲಕ್ಶ್ಮಿ ಚಂಚಲೆ
ಶುಕ್ರವಾರದಂದು ಲಕ್ಷ್ಮಿ ದಿನ ಎಂಬುದು ಸಾರ್ವತ್ರಿಕ ನಂಬಿಕೆ. ಲಕ್ಶ್ಮಿ ಮೊದಲೇ ಚಂಚಲೆ. ಆಕೆಯನ್ನು ಗೌರವಿಸದಿದ್ದರೆ, ಆದರಿಸದಿದ್ದರೆ ಮನೆ ಬಿಟ್ಟು ಹೊರಟು ಹೋಗುತ್ತಾಳೆ ಅನ್ನೋದು ಸಹ ನಂಬಿಕೆಯ ಭಾಗ. ಆದ್ದರಿಂದಲೇ ಹಣಕಾಸು, ಬೆಳ್ಳಿ-ಬಂಗಾರವನ್ನು ಆ ದಿನ ಮನೆಯಿಂದ ಆಚೆಗೆ, ಕೊನೆಗೆ ಬ್ಯಾಂಕ್ ಲಾಕರ್ ನಲ್ಲಿ ಇಡುತ್ತೇವೆ ಅಂದರೂ ಕೆಲವರು ಒಪ್ಪಲ್ಲ.

ಕ್ಷೌರ ಮಾಡಿಸಿದರೆ ಆಯುಷ್ಯ ಕ್ಷೀಣ
ಮಂಗಳವಾರದಂದು ಕ್ಷೌರ- ಯಾವುದೇ ಖರೀದಿ ಸೇರಿದಂತೆ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇನ್ನು ಕ್ಷೌರ ಅಂದರೆ ಆಯುಷ್ಕರ್ಮ ಎಂದು ಸಹ ಕರೆಯುವುದುಂಟು. ಅಂದರೆ ನಮ್ಮ ಆಯುಷ್ಯ ಹಾಗೂ ಆರೋಗ್ಯಕ್ಕೂ ಕ್ಷೌರ ಮಾಡಿಸಿಕೊಳ್ಳುವುದಕ್ಕೂ ಸಂಬಂಧವಿದೆ. ಮಂಗಳವಾರದಂದು ಆಯುಷ್ಕರ್ಮ ಮಾಡಿಸಿದರೆ ಆಯುಷ್ಯ ಕ್ಷೀಣಿಸುತ್ತದೆ. ಆದ್ದರಿಂದ ಆ ದಿನ ಕ್ಷೌರ ಮಾಡಿಸಿಕೊಳ್ಳಬಾರದು.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications