ಷರೀಫಜ್ಜನ ಕ್ಷಮೆ ಕೋರುತ್ತಾ.. ಕಾವೇರಿನ ಕೋರ್ಟು ನುಂಗಿತಾ ತಂಗಿ..

By: ಕೃಪೆ: ವಾಟ್ಸಾಪ್ ನಲ್ಲಿ ಬಂದಿದ್ದು
Subscribe to Oneindia Kannada

ಕಾವೇರಿ ನದಿನೀರಿನ ಹಂಚಿಕೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಮಂಗಳವಾರ (ಸೆ 20) ಪ್ರಕಟಿಸಲಿದೆ. ಲಕ್ಷಾಂತರ ಕನ್ನಡಿಗರ ಕೂಗಿಗೆ ನ್ಯಾಯಾಲಯ ಸ್ಪಂದಿಸಲಿದೆಯೇ, ಇಲ್ಲವೋ ಕಾದು ನೋಡಬೇಕಾಗಿದೆ.

ಸಂತ ಶಿಶುನಾಳ ಷರೀಫರ ಪ್ರಸಿದ್ದ 'ಕೋಡಗಾನ ಕೋಳಿ ನುಂಗೀತಾ ನೋಡವ್ವಾ.. ತಂಗಿ' ಜಾನಪದ ಹಾಡನ್ನು ಕಾವೇರಿ ವಿಚಾರದ ಇತ್ತೀಚಿನ ಬೆಳವಣಿಗೆಗೆ ಹೋಲಿಸಿ, ಬದಲಾಯಿಸಿದ ಸಾಹಿತ್ಯ ವಾಟ್ಸಾಪ್ ನಲ್ಲಿ ಈ ರೀತಿ ಹರಿದಾಡುತ್ತಿದೆ. (ಸಂ)

ಕಾವೇರಿನ ಕೋರ್ಟು ನುಂಗಿತ್ತಾ.. ನೋಡವ್ವಾ ತಂಗಿ ಕಾವೇರಿನ ಕೋರ್ಟು ನುಂಗಿತ್ತಾ..
ಕೋರ್ಟು ಪ್ರಾಧಿಕಾರವ ನುಂಗಿ, ನಾರಿಮನ್ ಫೀಸು ನುಂಗಿ
ಗೆಲ್ಲಲು ಹೋದ ಸರಕಾರವನ್ನು, ಪ್ರತಿವಾದ ನುಂಗಿತ್ತಾ..
ತಂಗಿ.. ಕಾವೇರಿನ ಕೋರ್ಟ್ ನುಂಗಿತ್ತಾ..

 Famous Shishunala Sharif Kodagana Koli song converted, relating to Ongoing Cauvery issue

ಅಮ್ಮ ಸಿದ್ದುನ ನುಂಗಿ, ಸಿದ್ದು ಕನ್ನಡಿಗರನ್ನು ನುಂಗಿ
ಹೋರಾಡಲು ಬಂದ ಕಾವೇರಿ ಮಕ್ಕಳನ್ನೇ ಕಂಡಲ್ಲಿ ಗುಂಡು ನುಂಗಿತ್ತಾ...
ತಂಗಿ.. ಕಾವೇರಿನ ಕೋರ್ಟ್ ನುಂಗಿತ್ತಾ..

ಬೆಂಕಿ ಲಾರಿಯ ನುಂಗಿ, ಲಾರಿಯ ನೀರು ನುಂಗಿ
ನೀರಿಗಾಗಿ ಬಂದ ಸು'ಕುಮಾರ'ರನ್ನು ಕಾವೇರಿ ಕಿಚ್ಚು ನುಂಗಿತ್ತಾ...
ತಂಗಿ.. ಕಾವೇರಿನ ಕೋರ್ಟ್ ನುಂಗಿತ್ತಾ..

ಟಿಆರ್ಪಿ ಮೀಡಿಯಾ ನುಂಗಿ, ಮಿಡಿಯಾ ಜನರ ನುಂಗಿ
ಶಾಂತಿ ಕಾಯೋ ಮೀಡಿಯವನ್ನೇ, ಹಣದ ದಾಹ ನುಂಗಿತ್ತಾ...
ತಂಗಿ.. ಕಾವೇರಿನ ಕೋರ್ಟ್ ನುಂಗಿತ್ತಾ..

ಮಾಫಿಯಾ ನೇತ್ರಾವತಿಯ ನುಂಗಿ, 'ಹಸ್ತ' ಮಹಾದಾಯಿಯ ನುಂಗಿ
ಪ್ರಭು ಸಿದ್ದನ ನಿದ್ದೆ ಕರ್ನಾಟಕವನ್ನೇ ನುಂಗಿತ್ತಾ..
ನೋಡವ್ವಾ ತಂಗಿ.. ಕಾವೇರಿನ ಕೋರ್ಟ್ ನುಂಗಿತ್ತಾ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Famous Santha Shishunala Sharif folk song Kodagana Koli Nungita tangi..song converted, relating to Ongoing Cauvery issue.
Please Wait while comments are loading...