ಮಾಧವಾ ಕೇಶವಾ

ನಿನ್ನಲೆ ಇರುವೆ ಪ್ರೀತಿಸು ಎನುವಾ
ದೂರ ದೂರ ಓಡುವಾ ಕೇಶವಾ ಮಾಧವಾ
ತುಂಬದೆ ಇರಲು ಅವನಾ ಪ್ರೀತಿಯ ಗಡಿಗೆ
ಯಶೊಧರೆ ತುಂಬಲು ಮೊಸರು ಮಜ್ಜಿಗೆ
ಬೆಣ್ಣೆಯ ಮೆದ್ದು ದೂರ ದೂರ ಓಡುವಾ
ಯಶೊಧರೆ ತುಂಬಲು ಮೊಸರು ಮಜ್ಜಿಗೆ
ಬೆಣ್ಣೆಯ ಮೆದ್ದು ದೂರ ದೂರ ಓಡುವಾ
ರಾಧೆಯ ಪ್ರೇಮದ ನದಿಯಲಿ ಈಜುವಾ
ಪ್ರೇಮದ ಸೆಲೆ ಅವಳೆದೆಯಲಿ ಇಡುವಾ
ತೀರವ ಸೇರಿ ಕೊಳಲನು ಊದುವಾ
ಪ್ರೀತಿಯ ಎಳೆಗಳ ಜೋಡಿಸಿ ಹೊಸೆಯುವಾ
ಎದೆಯೊಳಗೆದೆಗಳ ಸೇರಿಸಿ ನೇಯುವಾ
ಪ್ರೇಮ ಬಂಧನದಲಿ ಚಂದನ ತೀಡುವಾ
ಅಲ್ಲಿ ಮೋಕ್ಷವ ತೋರುವಾ ಇಲ್ಲಾಡಿಸುವಾ
ಅಳಿಸುವಾ ನಗಿಸುವಾ ಮೋಹ ಮಾಡುವಾ
ಕಣ್ತೆರೆವುದರೊಳಗೆ ಮಾಯವಾಗುವಾ
ಪ್ರೀತಿಯಲಿ ಬಡವಾ ಮಾಧವಾ ಕೇಶವಾ
ನಿನ್ನಲೆ ಇರುವೆ ಪ್ರೀತಿಸು ಎನುವಾ
ಮಾಧವಾ ಕೇಶವಾ ದೂರ ದೂರ ಓಡುವಾ












Click it and Unblock the Notifications