ದ್ವಿಪದಿಗಳು
- ಶಿವಮೂರ್ತಿ
E-mail : [email protected]
ಚೆಲುವೆ ನೀನು ನಕ್ಕರೆ, ಅದುವೆ ಹಾಲು ಸಕ್ಕರೆನೀನು ಜೊತೆಯಲಿ ಇದ್ದರೆ, ಜೇಬಿಗೆ ಭಾರಿ ತೊಂದರೆ
ಚೆಲುವೆ ನೀನು ಉಲಿಯುವಾಗ ಚೈತ್ರ ಮರಳಿ ಬಂದಿತು
ನಲ್ಲೆ ನೀನು ನಡೆಯುವಾಗ ಈ ಭೂಮಿಯು ಅದುರಿತು
ಓ... ನಲ್ಲೆ ನೀನೆ ಎಲ್ಲಾ ನನ್ನ ಜೀವನದಲಿ, ಕೊನೆವರೆಗೆ....
ಅಂದುಕೊಂಡಿದ್ದೆ ನಾನು ನಿನ್ನ ಸಹೋದರಿ ಸಿಗುವವರೆಗೆ....
ನಿನ್ನ ಮೊಗ, ನಿನ್ನ ನಗು, ನಿನ್ನ ನಯನಗಳನು ನಾ ಇಷ್ಟಪಟ್ಟೆ
ನಾ.. ಹೇಳುವ ಸುಳ್ಳು ನಿಜದ ತಲೆಯ ಮೇಲೆ ಹೊಡೆದಷ್ಟೆ
ಪ್ರತಿ ಇರುಳಿನಲಿ ನಿನ್ನ ಮೊಗವನು ನಾ ಕಾಣುವೆ,
ಅದಕ್ಕೆ ಏನೋ... ನಾ ಚೀರುತ್ತಾ ಮೇಲೇಳುವೆ.
ಮೊದಲ ನೋಟದಲ್ಲಿ ನನ್ನಲ್ಲೇನೋ.. ರೋಮಾಂಚನ
ಅದು .... ನಿನ್ನ ಕಂಡಾಗ ಭಯದಿಂದುಂಟಾದ ಕಂಪನ
ಈ.. ನನ್ನ ಕವನಗಳಿಗೆ ಪ್ರೇರಣೆ ಯಾರು ಗೊತ್ತೆ....?
ಒಂದಿಷ್ಟು ರಮ್ ಮತ್ತು ಸೋಡದ ಗಮ್ಮತ್ತೆ.........
ಶಿವಮೂರ್ತಿಯವರ ದ್ವಿಪದಿಗಳ ರಚನೆ ಹೇಗನ್ನಿಸಿತು ?
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications