127217recessionಪಬ್ ಬಾರ್‌ಗಳ ಕಿಕ್ ಇಳಿಸಿದ ಆರ್ಥಿಕ ಹಿಂಜರಿತ/news/2009/01/05/bar-crisis-in-bengaluru.htmlಬೆಂಗಳೂರು, ಜ. 5 : ಮುಗ್ಗರಿಸಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಕೆಲಸ ಕಳೆದುಕೊಳ್ಳುವಿಕೆ, ಸಂಬಳದಲ್ಲಿ ಕಡಿತ, ಕಂಪನಿಗಳ ಮುಚ್ಚುವಿಕೆಯಂಥ ಪ್ರತ್ಯಕ್ಷ ದುಷ್ಪರಿಣಾಮ ಉಂಟಾಗಿದ್ದರೆ ಪರೋಕ್ಷವಾಗಿ ಕುಡಿತದಿಂದ ಸರ್ವನಾಶವಾಗುತ್ತಿದ್ದ ಕುಟಂಬಗಳಿಗೆ ಮಾನಸಿಕ ನೆಮ್ಮದಿಯನ್ನು ತಂದಿದೆ.ಆರ್ಥಿಕ ಸಂಕಷ್ಟದಿಂದಾಗಿ ಕುಡುಕರು ಎಚ್ಚೆತ್ತಿರುವುದರಿಂದ ಬೆಂಗಳೂರಿನ ಬಾರ್ ಮತ್ತು ಪಬ್ ಮಾಲಿಕರು ಬಾಯಿಬಡಿದುಕೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣ ಶೇ.40ಕ್ಕೂ ಹೆಚ್ಚು 33894http://kannada.oneindia.com/img/2009/01/05-liquor.jpg127217recessionಸುದ್ದಿಗೋಷ್ಠಿಗಳಲ್ಲಿ ಒಣಹವೆಗೆ ಕ್ಷಣಗಣನೆ/movies/headlines/2009/01/13-count-down-for-dry-eve-parties-began-kfcc.htmlಕನ್ನಡ ಚಲನಚಿತ್ರಗಳಿಗೆ ಸಂಬಂಧಿಸಿದ ಪತ್ರಿಕಾಗೋಷ್ಠಿ, ಆಡಿಯೋ ಕ್ಯಾಸೆಟ್ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಸಂಜೆ ಹೊತ್ತು ಇಟ್ಟುಕೊಳ್ಳಬಾರದು ಎಂಬ ವಾಣಿಜ್ಯ ಮಂಡಳಿಯ ಆದೇಶ ಜಾರಿಯಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 1 ನೇ ತೇದಿಯಿಂದಲೇ ಜಾರಿಗೆ ಬರಬೇಕಾಗಿದ್ದ ಈ ಆದೇಶ ಕಾರಣಾಂತರಗಳಿಂದ 15ನೇ ತಾರೀಖಿಗೆ ಮುಂದೂಡಲಾಗಿತ್ತು. ವಾಣಿಜ್ಯ ಮಂಡಳಿ ಮತ್ತೆ ಮನಸ್ಸು ಬದಲಾಯಿಸದಿದ್ದರೆ, ಇದೇ ಗುರುವಾರ ಉತ್ತರಾಯಣ ಪುಣ್ಯಕಾಲದ ಆರಂಭದಿಂದ 34046http://kannada.oneindia.com/img/2009/01/13-kcn-chandrashekar2.jpg127217recessionನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg127217recessionರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು/movies/studio/2009/02/19-rockline-venkatesh-starts-two-new-films.htmlಸದ್ದಿಲ್ಲದಂತೆ ರಾಕ್ ಲೈನ್ ವೆಂಕಟೇಶ್ ರ ಎರಡು ಹೊಸ ಚಿತ್ರಗಳು ವಾರದ ಹಿಂದೆಯೇ ಸೆಟ್ಟೇರಿವೆ. ರಾಕ್ ಲೈನ್ ರ ಎರಡು ಚಿತ್ರಗಳ ನಾಯಕರಾಗಿ ವಿಜಯ್ ಮತ್ತು ದಿಗಂತ್ ನಟಿಸುತ್ತಿದ್ದಾರೆ. ಈ ಚಿತ್ರಗಳ ನಾಯಕಿ ಪಾತ್ರಕ್ಕೆ ಹುಡುಕಾಟ ಆರಂಭವಾಗಿದೆ. ಮಾಧ್ಯಮದವರ ಹಂಗ್ಯಾಕೆ ಎಂದು ರಾಕ್ ಲೈನ್ ವೆಂಕಟೇಶ್ ಒಂಚೂರು ಸುಳಿವು ಕೊಡದೆ ಈ ಎರಡು ಚಿತ್ರಗಳ 34752http://kannada.oneindia.com/img/2009/02/19-rockline-venkatesh1.jpg127217recessionಬೆಂಗಳೂರಿನಲ್ಲಿ ಟೊಯೋಟಾ ಸಣ್ಣ ಕಾರು ಘಟಕ/lifestyle/automobiles/2009/0224-toyota-small-car-plant-in-bengaluru.htmlಯಾವುದೇ ಮಾತುಕತೆ ನಡೆಯುತ್ತಿರಲಿ, ಅದು ಕೊನೆಗೆ ಆರ್ಥಿಕ ಬಿಕ್ಕಟ್ಟಿನೆಡೆಗೇ ಬಂದು ನಿಲ್ಲುತ್ತದೆ. ಇದು ಆಟೋಮೊಬೈಲ್ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಷಾರಾಮಿ ಅನ್ನುವ ಮಾತು ನೇಪಥ್ಯಕ್ಕೆ ಸರಿದಿದ್ದು ಎಲ್ಲ ಕಾರು ತಯಾರಿಕಾ ಕಂಪನಿಗಳು ಸಣ್ಣ ಕಾರುಗಳ ತಯಾರಿಕೆಯತ್ತ ಗಮನ ಹರಿಸಿವೆ. ಆರ್ಥಿಕ ಸಂಕಷ್ಟ ಕಾರಿನ ಇಗ್ನೀಷನ್ ಕೀ ಶುರು ಮಾಡುವ ಮೊದಲೇ ಇಂಜಿನ್ನಿಗೆ ಬಿಸಿ ಮುಟ್ಟಿಸಿದೆ.ಟೊಯೋಟಾ ಕಂಪನಿ ಕೂಡ ಇದಕ್ಕೆ 34833http://kannada.oneindia.com/img/2009/02/24-toyota-small-car1.jpg380202vinayak patagarಮಣ್ಣನ್ನು ಮರೆತವರು ಮರಳಿ ಮಣ್ಣಿಗೆ/literature/my-karnataka/2009/0312-recession-malenadu-software-enggs-come-back.htmlಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕೃತಿಯ ಬಗ್ಗೆ ಮಾತನಾಡುತ್ತಿಲ್ಲ. ಮಣ್ಣನ್ನೆ ಮರೆತು ಹೊದ ನಮ್ಮ ಜಿಲ್ಲೆಯ ಪ್ರತಿಭಾವಂತರು ಮರಳಿ ಮಣ್ಣಿಗೆ ಮರಳುತ್ತಿರುವವ ಬಗ್ಗೆ ಒಂದಿಷ್ಟು ಮಾತು. ಆರ್ಥಿಕ ಬಿಕ್ಕಟ್ಟು ಜಾಸ್ತಿ ದುಃಖವನ್ನು ತಂದಿದ್ದರೆ, ಒಂದು ಹಿಡಿ ಮಣ್ಣಿನಷ್ಟು ಸಂತೋಷವನ್ನೂ ಮರಳಿ ನೀಡಿದೆ. ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ 35172http://kannada.oneindia.com/img/2009/03/12-vinayak-patagar1.jpg380202vinayak patagarದಿನಕರರ ಕುಟುಕುವ ರಾಜಕೀಯ ಚುಟುಕುಗಳು/cj/vinayak-patagar/2009/0414-dinakar-desai-chutukugalu.htmlಚುಟುಕುಬ್ರಹ್ಮ ದಿನಕರ ದೇಸಾಯಿಯವರು ಸ್ವತಃ ರಾಜಕಾರಣಿಯಾಗಿದ್ದರು ಮತ್ತು ಅದರಲ್ಲಿನ ಆಳ-ಅಗಲವನ್ನು ಹತ್ತಿರದಿಂದ ಕಂಡವರು. ಚುರುಕಾದ ಚುಟುಕುಗಳ ಮುಖಾಂತರ ಕೊಳಕು ರಾಜಕಾರಣಿಗಳಿಗೆ ಚಾಟಿಯೇಟು ನೀಡಿದ ನಾಲ್ಕು ಸಾಲಿನ ಪದ್ಯಗಳನ್ನು ಓದುವುದೇ ಒಂದು ಸೊಗಸು. ದೇಸಾಯಿಯವರ ಜನ್ಮಶತಮಾನೋತ್ಸದ ಸಂದರ್ಭದಲ್ಲಿ ಅವರ ಚುಟುಕುಗಳನ್ನು ಓದುವದರ ಮೂಲಕ ಚುಟುಕುಬ್ರಹ್ಮರನ್ನು ನೆನಪಿಸಿಕೊಳ್ಳೋಣ.* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾಕನ್ನಡ ಸಾಹಿತ್ಯದಲ್ಲಿ ಚುಟುಕು ಬ್ರಹ್ಮ ಎಂದೇ 35942http://kannada.oneindia.com/img/2009/04/14-dinakar-desai1.jpg380202vinayak patagarಯಾರಾದ್ರೂ ಹಳ್ಳಿಗಳನ್ನು ಹುಡುಕಿ ಕೊಡುತ್ತೀರಾ?/cj/vinayak-patagar/2009/0515-villages-are-vanishing-due-to-globalization.htmlನಮ್ಮ ದೇಶದ ಜೀವಾಳ ಹಳ್ಳಿಗಳು. ನಿಜ ಹಳ್ಳಿಗಳನ್ನು ನಿರ್ಲಕ್ಷಿಸಿದರೆ ನಮಗೆ ಉಳಿಗಾಲವಿಲ್ಲ. ನಮ್ಮೆಲ್ಲರ ಉಳಿವೂ ಅಳಿವೂ ಹಳ್ಳಿಗಳಲ್ಲಿದೆ. ನಾವೂ ಹಳ್ಳಿಗಳನ್ನು ಉಳಿಸಿದರೆ ಹಳ್ಳಿಗಳು ನಮ್ಮನ್ನು ಉಳಿಸುತ್ತವೆ. ನಾವೆಲ್ಲ ಹಳ್ಳಿಗಳತ್ತ ಹಿಂತಿರುಗೋಣ. ಮೊದಲಿನ ಮಾನವೀಯ ಸಂಬಂಧಗಳ, ಸಾಂಸ್ಕ್ರತಿಕ ವೈವಿಧ್ಯಗಳನ್ನು ಪುನಃ ಸ್ಥಾಪಿಸೋಣ. ಮುಂದಿನ ಜನಾಂಗಕ್ಕೆ ಅದನ್ನು ತೋರಿಸೋಣ ಏನಂತೀರಾ?* ವಿನಾಯಕ ಪಟಗಾರ, ಬೆಟ್ಕುಳಿ, ಕುಮಟಾಇವತ್ತು ಹಳ್ಳಿಗಳು ಮೊದಲಿನಂತೆ ಹಳ್ಳಿಗಳಾಗಿ 36652http://kannada.oneindia.com/img/2009/05/15-vinayak-patagar1.jpg380202vinayak patagarಮರೆಯಾಗುತ್ತಿರುವ ಕರಾವಳಿಯ ಹುರಿಯಕ್ಕಿ ಲಾಡು/cj/vinayak-patagar/2009/0526-huriyakki-ladu-coastal-karnataka-recipe.htmlಕರಾವಳಿ ವಿಶೇಷ ತಿಂಡಿ ತಿನಸುಗಳಲ್ಲಿ ಹುರಿಯಕ್ಕಿ ಲಾಡು ಒಂದು. ಆಧುನಿಕತೆಯ ಸೋಗಿನಲ್ಲಿ ಸಾಂಪ್ರದಾಯಕವಾಗಿ ಪ್ರಮುಖ ಆಹಾರವಾಗಿ ಉಳಿದುಕೊಂಡಿರುವ ಕುಚ್ಚಿಗೆ ಅಕ್ಕಿಯಿಂದ ಮತ್ತು ತೆಳುವಾದ ಜೋನಿ ಬೆಲ್ಲದಿಂದ ತಯಾರಿಸಲ್ಪಡುವ ಲಾಡು ಇಂದಿನ ಥಳಕು ಬಳುಕಿನ ನಾಜೂಕಿನ ಬೇಕರಿ ತಿಂಡಿಗಳ ಭರಾಟೆಗಳ ಮಧ್ಯೆ ಅಪರೂಪವಾಗುತ್ತಿದೆ.* ವಿನಾಯಕ ಪಟಗಾರ್, ಬೆಟ್ಕುಳಿ, ಕುಮಟಾಮೊದಲ್ಲೆಲ್ಲಾ ಬೇಸಿಗೆ ರಜೆ ಮುಗಿಸಿ ದೂರದ ಊರುಗಳಿಗೆ ಹೋಗುವಾಗ ಡಬ್ಬಿ 36902http://kannada.oneindia.com/img/2009/05/26-huriyakki-ladu1.jpg108971malenaduದೀರ್ಘ ಕಾಲ ಬಾಳುವ ಹೂ ಬಿಗ್ನೋನಿಯಾ/literature/articles/2008/1229-long-lasting-bignonia-flower.htmlಹೇಮಂತ ಮುಗಿದು ಶಿಶಿರ ಋತು ಕಾಲಿಡುತ್ತಿದ್ದಂತೆ ಮಲೆನಾಡಿನ ಕಾಡಿನಲ್ಲಿ ಹಳೆತನ ಅಳಿದು ಹೊಸತನ ಪಡೆಯುವ ಸಂಭ್ರಮ. ಸಾವಿರಾರು ಪ್ರಭೇದಗಳ ಹೂಗಳು ನನಗಿಂತ ಚೆಲುವೆಯರು ಯಾರಲ್ಲಿ? ಎಂದು ಬೀಗಲು ಪ್ರಾರಂಭಿಸುತ್ತವೆ. ಅವುಗಳ ಆಯುಷ್ಯ ಮಾತ್ರ ಒಂದೇ ದಿನ. ಆದರೆ, ಬಿಗ್ನೋನೇಸಿಯೇ (Bignoniaceae) ಕುಟುಂಬಕ್ಕೆ ಸೇರಿದ ಬಿಗ್ನೋನಿಯಾ ಹೂ ಮಾತ್ರ ಭರ್ತಿ ಎರಡು ತಿಂಗಳುಗಳ ಕಾಲ ದೀರ್ಘ ಬಾಳುತ್ತದೆ.* ರಾಘವೇಂದ್ರ 33747http://kannada.oneindia.com/img/2008/12/29-bignonia2.jpg108971malenaduಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg108971malenaduಆಲೆಮನೆಯತ್ತ ಹೋಗೋಣ ಬನ್ನಿ/column/shreenidhi/2009/0224-alemane-in-malenadu.htmlಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಕರ್ನಾಟಕದ ಹಳ್ಳಿಗಳಲ್ಲಿ, ಅದರಲ್ಲಿಯೂ ಮಲೆನಾಡ ಹಳ್ಳಿಗಳಲ್ಲಿ ಆಲೆಮನೆಗಳು ಜೀವ ಪಡೆಯಲು ಶುರುಮಾಡುತ್ತವೆ. ಮುಸ್ಸಂಜೆ ಹೊತ್ತಲ್ಲಿ ಮಂಡಕ್ಕಿ, ಮಿರ್ಚಿ ಮೆಲ್ಲುತ್ತ ಗಿಂಡಿಗಟ್ಟಲೆ ತಾಜಾತಾಜಾ ಕಬ್ಬಿನಹಾಲನ್ನು ಗಂಟಲಿಗಿಳಿಸುತ್ತಿದ್ದರೆ... ಅದರ ಆನಂತ, ರಸಾಸ್ವಾದವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಸಾಧ್ಯವಾದರೆ ಹಳ್ಳಿಗಳಲ್ಲಿ ಸಿಗುವ ಆಲೆಮನೆಗೆ ಭೇಟಿ ನೀಡಿ ಕಬ್ಬಿನರಸ ಹೀರಿರಿ.* ಶ್ರೀನಿಧಿ ಡಿಎಸ್ಮತ್ತೆ ಮಲೆನಾಡಿನ ಸುದ್ದಿ ಬರೀತಿದೀನಿ ಅಂತ 34838http://kannada.oneindia.com/img/2009/02/24-alemane1.jpg108971malenaduಮಣ್ಣನ್ನು ಮರೆತವರು ಮರಳಿ ಮಣ್ಣಿಗೆ/literature/my-karnataka/2009/0312-recession-malenadu-software-enggs-come-back.htmlಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕೃತಿಯ ಬಗ್ಗೆ ಮಾತನಾಡುತ್ತಿಲ್ಲ. ಮಣ್ಣನ್ನೆ ಮರೆತು ಹೊದ ನಮ್ಮ ಜಿಲ್ಲೆಯ ಪ್ರತಿಭಾವಂತರು ಮರಳಿ ಮಣ್ಣಿಗೆ ಮರಳುತ್ತಿರುವವ ಬಗ್ಗೆ ಒಂದಿಷ್ಟು ಮಾತು. ಆರ್ಥಿಕ ಬಿಕ್ಕಟ್ಟು ಜಾಸ್ತಿ ದುಃಖವನ್ನು ತಂದಿದ್ದರೆ, ಒಂದು ಹಿಡಿ ಮಣ್ಣಿನಷ್ಟು ಸಂತೋಷವನ್ನೂ ಮರಳಿ ನೀಡಿದೆ. ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ 35172http://kannada.oneindia.com/img/2009/03/12-vinayak-patagar1.jpg108971malenaduಹಳ್ಳಿ ಹುಡುಗರ ಉಳಿಮನೆ (ಹೋಂಸ್ಟೇ)'ನಮ್ಮನೆ'/travel/karnataka/help/2009/0316-nammane-home-stay-talavata-shivamogga.htmlಕೆಲಸ ಅರಸುತ್ತಿರುವ ಹಳ್ಳಿ ಯುವಕರು ಬೆಂಗಳೂರಿಗೆ, ಕೆಲಸ ಸಿಕ್ಕ ಹಳ್ಳಿ ಸಾಫ್ಟ್ ವೇರ್ ಇಂಜಿನಿಯರುಗಳು ಡಾಲರ್ ಕನಸಿನಲ್ಲಿ ವಿದೇಶಕ್ಕೆ ಜಿಗಿಯುತ್ತಿರುವ ಸಂದರ್ಭದಲ್ಲಿ ಸಮಾನಮನಸ್ಕ ಶಿವಮೊಗ್ಗ ಜಿಲ್ಲೆ ತಳವಾಟದ ಹಳ್ಳಿ ಯುವಕರು ಪಟ್ಟಣಿಗರನ್ನೇ ಹಳ್ಳಿಗೆ ಸೆಳೆಯುವ ಕೈಂಕರ್ಯಕ್ಕೆ ಕೈಹಾಕಿದ್ದಾರೆ. ಪಟ್ಟಣ ಸೇರಬೇಕೆನ್ನುವ ಯುವಕರಿಗೆ ಮಾದರಿಯಾಗಿದ್ದಾರೆ. ಎಂಥವರ ಕೈಗೂ ನಿಲುಕುವ ಹೋಂಸ್ಟೇ ನಿರ್ಮಿಸಿ ಊಟ ವ್ಯವಸ್ಥೆಯ ಆತಿಥ್ಯ ನೀಡಿ ಉಪಜೀವನಕ್ಕೆ 35259http://kannada.oneindia.com/img/2009/03/16-nammane-homestay2.jpgnews"> ಮಣ್ಣನ್ನು ಮರೆತವರು ಮರಳಿ ಮಣ್ಣಿಗೆ | Global Economic Crisis | Software profession | Vinayak Patagar - ಮಣ್ಣನ್ನು ಮರೆತವರು ಮರಳಿ ಮಣ್ಣಿಗೆ - Kannada Oneindia

ಮಣ್ಣನ್ನು ಮರೆತವರು ಮರಳಿ ಮಣ್ಣಿಗೆ

Vinayak Patagar, Kumata
ಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕೃತಿಯ ಬಗ್ಗೆ ಮಾತನಾಡುತ್ತಿಲ್ಲ. ಮಣ್ಣನ್ನೆ ಮರೆತು ಹೊದ ನಮ್ಮ ಜಿಲ್ಲೆಯ ಪ್ರತಿಭಾವಂತರು ಮರಳಿ ಮಣ್ಣಿಗೆ ಮರಳುತ್ತಿರುವವ ಬಗ್ಗೆ ಒಂದಿಷ್ಟು ಮಾತು. ಆರ್ಥಿಕ ಬಿಕ್ಕಟ್ಟು ಜಾಸ್ತಿ ದುಃಖವನ್ನು ತಂದಿದ್ದರೆ, ಒಂದು ಹಿಡಿ ಮಣ್ಣಿನಷ್ಟು ಸಂತೋಷವನ್ನೂ ಮರಳಿ ನೀಡಿದೆ. ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ ಕಲಿಸಿದೆ.

* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾ

ಜಗತ್ತಿನ್ಯಾದಂತ ಆರ್ಥಿಕ ಕುಸಿತ. ಪ್ರತಿದಿನ ನಿಮಿಷದ, ಸೆಕೆಂಡಿನ ಲೆಕ್ಕದಲ್ಲೋ ಸಾವಿರಗಳ ಲೆಕ್ಕದಲ್ಲಿ ಉದ್ಯೋಗ ಕಡಿತವಾಗುತ್ತಿರುವುದನ್ನು ಸುದ್ದಿ ಮಾಧ್ಯಮಗಳು ಮಾತ್ರ ಯಾವುದೇ ಕಡಿತ ಮಾಡದೇ ಪ್ರಕಟಿಸಿದುವರ ಮೂಲಕ ತಮ್ಮ ಧಾರಳತನವನ್ನು ತೊರಿಸುತ್ತಿದೆಯೆನ್ನಿ. ಅದೇನೆ ಇರಲಿ, ಆರ್ಥಿಕ ಕುಸಿತದ ಬಗ್ಗೆ ಮೊದಲು ಕೇಳಿದಾಗ ನಮ್ಮಲ್ಲಿ ಇದರ ಪರಿಣಾಮ ಬೀರಲಿಕ್ಕಿಲ್ಲ ಎಂದೇ ಭಾವಿಸಿದ್ದೆ. ಆದರೆ ಇತ್ತೀಚೆಗೆ ಸದ್ದಿಲ್ಲದೆ ಬದಲಾವಣೆಗಳು ಆಗುತ್ತಿವೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ.

ಮೊದಲಿಗೆ ನಮ್ಮಲಿನ ಯಾವ ಜನ ಹೆಚ್ಚಾಗಿ ಸಾಫ್ಟ್ ವೇರ್, ಅದು ಇದು ಅಂತ ಬೆಂಗಳೂರು, ವಿದೇಶ, ಅಂತ ಹೋದವರು ಎಂದು ನೊಡಿದರೆ, ಮಲೆನಾಡಿನ ತಂಪಾದ ನೆರಳಲ್ಲಿ ಅಡಿಕೆ ತೋಟ ಮಾಡಿಕೊಂಡಿದ್ದ ರೈತರ (ಒಡೆಯರ..?) ಮಕ್ಕಳು. ಇದಕ್ಕೂ ಒಂದು ಕಾರಣವಿದೆ. ಸಾಫ್ಟ್ ವೇರ್ ಪ್ರವರ್ಧಮಾನಕ್ಕೆ ಬರುವ ಸಂದರ್ಭದಲ್ಲೇ ಅಡಿಕೆಗೆ ನಿರೀಕ್ಷೆಗೂ ಮೀರಿ ಬೆಲೆ ಬಂದಿತು. ಇದು ಉನ್ನತ ವ್ಯಾಸಂಗಕ್ಕೆ ಅನುಕೂಲವನ್ನು ಒದಗಿಸಿಕೊಟ್ಟಿತ್ತಲ್ಲದೆ, ಬುದ್ದಿವಂತರಾದ ನಮ್ಮ ಜನಕ್ಕೆ ಬೆಳೆಯಲು ತುಂಬಾ ಅನುಕೂಲವನ್ನೂ ಒದಗಿಸಿಕೊಟ್ಟಿತು. ದೈಹಿಕ ಶ್ರಮವನ್ನು ಕೇಳದೇ ಬುದ್ದಿಮತ್ತೆಯನ್ನು ಮಾತ್ರ ಬೇಡುವ ಸಾಫ್ಟ್ ವೇರ್ ಕ್ಷೇತ್ರ ನಮ್ಮವರಿಗೆ ತಕ್ಕದಾಗಿ ಹೊಂದಿಕೆಯಾಗಿ, ತಣ್ಣನೆಯ ಏಸಿ ರೂಮಿನಲ್ಲಿ ನಿರೀಕ್ಷೆಗೂ ಮಿರಿದ ಸಂಬಳ ಎಣಿಸುತ್ತ ಪಕ್ಕದೂರಿಗೆ ಹೊಗಿ ಬಂದಂತೆ ವಿದೇಶ ಸುತ್ತತೊಡಗಿದ್ದರು. ಮೊದಲಿಗೆ ಅಪ್ಪ - ಅಮ್ಮಂದಿರಿಗೆ ತಮ್ಮ ಮಕ್ಕಳು ವಿದೇಶದಲ್ಲಿ ದುಡಿಯುವುದು ಸಂತೋಷವೇನೋ ಕೊಡುತ್ತಿತ್ತು. ಆದರೆ ಕ್ರಮೇಣ ಹಿರಿಯರಿಗೆ ಒಂಟಿತನ ಕಾಡಿದ್ದಂತೂ ಸುಳ್ಳಲ್ಲ. ವರ್ಷ ಕಳೆದಂತೆ ಉದ್ಯೋಗ, ವಲಸೆ ಎನ್ನುವುದು ನಮ್ಮ ಮಲೆನಾಡು ಪ್ರದೇಶಗಳ ಮಾನವೀಯ ಸಂಬಂಧಗಳಲ್ಲಿ, ಸಾಮಾಜಿಕ, ಸಾಂಸ್ಕೃತಿಕವಾಗಿ ಪರಿಣಾಮಗಳನ್ನು ಬೀರಲಾರಂಬಿಸಿತು.

ಸಾಫ್ಟ್ ವೇರ್, ಎಂ.ಎನ್.ಸಿ. ಅಂತ ಬೆಂಗಳೂರು, ವಿದೇಶ ಅಂತ ಬಸ್ಸು ವಿಮಾನ ಹತ್ತಿದ ಮೇಲೆ ಮಲೆನಾಡಿನ ಹಳ್ಳಿಗಳಲ್ಲಿ ಜನರೇ ವಿರಳವಾಗತೊಡಗಿದರು. ನೂರಾರು ಎಕರೆ ಅಡಿಕೆ ತೋಟಗಳನ್ನು ನೋಡಿಕೊಳ್ಳಲು ಯಾರು ಇಲ್ಲದಂತಾಗಿ ಬರೆ ಆಳಿನ ಮೇಲೆ ಹಿರಿಯರು ಅವಲಂಬಿತವಾಗಬೇಕಾಯಿತು. ಇಲ್ಲಿಯ ಹೆಣ್ಣು ಮಕ್ಕಳು ಸಹ ಬೆಂಗಳೂರು, ವಿದೇಶದಲ್ಲಿದ್ದವರನ್ನೇ ಮದುವೆಯಾಗಲು ಬಯಸಿದ್ದ ಪರಿಣಾಮ ತೋಟ ನೋಡಿಕೊಳ್ಳುತ್ತಿದ್ದವರಿಗೆ ಹೆಣ್ಣೆ ಸಿಗದೆ ಒತ್ತಾಯದ ಬ್ರಹ್ಮಚರ್ಯ ಪಾಲನೆಗೆ ಒಳಗಾಗಬೇಕಾಯಿತು. ಹೆಣ್ಣು ಸಿಗದೆ ಕಂಗಾಲಾದ ಕೆಲವರು ಬೆಂಗಳೂರಿಗೆ ಹೋಗಿ ತಾತ್ಕಾಲಿಕ ಚಾಕರಿ ಮಾಡಿ ಬೆಂಗಳೂರು ಗಂಡು ಎನ್ನಿಸಿಕೊಂಡು ಮದುವೆಯಾದ ಮೇಲೆ ಪುನ: ಊರಿಗೆ ಮರುಳಿದ ಉದಾಹರಣೆಗಳು ಸಾಕಷ್ಟಿದೆಯೆನ್ನಿ. ಹಬ್ಬ ಹರಿದಿನ ಅಂತ ವಾರಗಟ್ಟಲೆ ಮನೆಗಳೆಲ್ಲಾ ಜನಜಂಗುಳಿಯಿಂದ ಕೂಡಿರುತ್ತಿದ್ದ ದಿನಗಳು ಮಾಯವಾಗಿ ಅಪ್ಪ - ಅಮ್ಮ ಆಳು ಮಾತ್ರ ಮಾಡಿಕೊಳ್ಳುವ ಪರಿಸ್ಥಿತಿ ಪ್ರತಿಯೊಂದು ಮನೆಯಲ್ಲಿ ಬರತೊಡಗಿತು. ದೊಡ್ಡದಾದ ಮನೆಯಲ್ಲಿ ಹಿರಿಯ ಜೀವಿಗಳು ಶಾಪಗ್ರಸ್ತ ಜೀವಿಗಳಂತೆ ಕಾಣ ತೊಡಗಿದ್ದರು. ವರ್ಷಕ್ಕೊಂದು ಬಾರಿನೋ, ಎರಡು ವರ್ಷಕ್ಕೊಂದು ಬಾರಿನೋ ಬುರ್ ಅಂತ ಗಾಡಿ ಮೇಲೆ ಬಂದು ವಾಹ್ ಅಂತಾ ಅಡಿಕೆ ತೋಟ ನೋಡಿ, ಅದೇ ದೃಷ್ಟಿಯಲ್ಲಿ ಹಿರಿಯ ಜೀವಗಳನ್ನು ನೋಡಿ ಟಾಟಾ ಎಂದು ಹೊಗುವ ವಿಸಿಟಿಂಗ್ ಅತಿಥಿಗಳಂತೆ, ಮನೆಯಲ್ಲಿ ಹುಟ್ಟಿ ಬೆಳೆದ ಮಕ್ಕಳೂ ಬದಲಾದರು. ಅಥವಾ ಸಾಫ್ಟವೇರೆ ಆ ರೀತಿ ಬದಲಾಯಿಸಿತೆ ಗೊತ್ತಾಗುತ್ತಿಲ್ಲ.

ಆರ್ಥಿಕ ಕುಸಿತ ಎನ್ನುವುದು 'ಮರಳಿ ಮಣ್ಣಿಗೆ' ಎನ್ನುವ ಮಾತು ನೆನಪಿಗೆ ತರಿಸುತ್ತಿದೆ. ವಿದೇಶದಲ್ಲಿದವರೂ ಬೆಂಗಳೂರಿಗೆ, ಬೆಂಗಳೂರಿನವರೂ ಊರಿಗೆ ಮರುಳುತ್ತಿದ್ದಾರೆ. ವಿದೇಶದಲ್ಲಿರುವವರು ಪದೇ ಪದೇ ಫೋನ್ ಮಾಡಿ ಕ್ಷೇಮ -ಕುಶಲದ ಬಗ್ಗೆ, ಅಡಿಕೆ ಬೆಳೆಗಳ ಬಗ್ಗೆ ವಿಚಾರ ಮಾಡತೊಡಗಿದ್ದಾರೆ. ಮೊದಲ್ಲೆಲ್ಲಾ ಒನ್ ಲೈನ್ ಮುಖಾಂತರ ದೇವರ ಕಾರ್ಯವನ್ನೋ, ಅಜ್ಜನ್ನ ತಿಥಿನ್ನೋ ಮಾಡಿ ಮುಗಿಸುತ್ತಿದ್ದ ಮಂದಿ ಈಗ ಅದೇ ಕಾರ್ಯ ಮಾಡಲು ಕೆಂಪು ಬಸ್ಸು ಹಿಡಿದು ಹಳ್ಳಿಗಳಲ್ಲಿರುವ ತಮ್ಮ ಮನೆಯತ್ತ ಮುಖ ಮಾಡಿದ್ದಾರೆ. ಪ್ರತಿ ಅಡಿಕೆ ಮರವನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದಾರೆ. ಬೆಳಿಗ್ಗೆ ವಾಕಿಂಗ್ ಹೆಸರಿನಲ್ಲಿ ತೋಟ ಸುತ್ತುತ್ತಾ ಅಡಿಕೆ ಆರಿಸತೊಡಗಿದ್ದಾರೆ. ಹಿರಿಯ ಜೀವಗಳನ್ನು ಆತ್ಮೀಯವಾಗಿ ಮಾತನಾಡಿಸತೊಡಗಿದ್ದಾರೆ. ಅಡಿಕೆ ಬೆಳೆಗಳ ಬಗ್ಗೆ, ತಮಗಿರುವ ಆಸ್ತಿಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸತೊಡಗಿದ್ದಾರೆ.

ವರ್ಷಕ್ಕೊಂದು ಬಾರಿ ಊರಿಗೆ ಬರುತ್ತಿದ್ದ ಮನೆ ಮಕ್ಕಳು ಈಗ ಮೂರು ತಿಂಗಳಿಗೊಮ್ಮೆಯಾದರು ಅಜ್ಜನ ತಿಥಿ, ದೇವರ ಕಾರ್ಯಎನ್ನುತ್ತ ಬರುವುದನ್ನು ನೋಡಿ ಹಿರಿಯ ಜೀವಗಳು ಸಂತೋಷ ಪಡಬೇಕೋ, ದುಃಖ ಪಡಬೇಕೋ ತಿಳಿಯದೆ ತಳಮಳ ಗೊಂಡಂತಾಗಿದ್ದಾರೆ. ಇನ್ನು ಅರ್ಧ- ಮರ್ಧ ಬುದ್ಧಿವಂತರಾದ ಕೆಲವು ಯುವಕರು ಬೆಂಗಳೂರಿನಂತಹ ಮಹಾನಗರಗಳಲ್ಲಿ ಖಾಸಗಿ ಬ್ಯಾಂಕುಗಳಲ್ಲಿ ಸಾಲ ಕೊಡಿಸುವ ಏಜೆಂಟರುಗಳಾಗಿ ಟೈ ಕಟ್ಟಿಕೊಂಡು ಕೆಲಸ ಮಾಡುತ್ತ, ಊರಲ್ಲಿ ತಾವೂ ಬ್ಯಾಂಕಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದೇವೆ ಎಂದು ಹೇಳುತ್ತಿದ್ದವರು, ಈಗ ಟೈ ಕಳಚಿಟ್ಟು ಊರು ಕಡೆ ಮರಳಿದ್ದಾರೆ. ಬ್ಯಾಂಕಿನಲ್ಲಿ ನೌಕರಿಯಿದ್ದ ನಮ್ಮ ಹುಡುಗುರು ಯಾಕೇ ಹಿಂದಿರುಗುತ್ತಿದ್ದಾರೆ ಎಂದು ಅರ್ಥವಾಗದೆ, ಹಿರಿಯ ತಲೆಗಳು ಕಾಶ್ಮೀರ ಸಮಸ್ಯೆಯಷ್ಟೇ ಸೀರಿಸ್ಸಾಗಿ ಸಂಜೆ ಕಟ್ಟೆ ಮೇಲೆ ಗಂಭೀರವಾಗಿ ಚರ್ಚೆಯಲ್ಲಿ ತೊಡಗಿದ್ದಾರೆ. ಆ ಯುವಕರದು ಅಯೋಮಯ ಪರಿಸ್ಥಿತಿ.

ಬರೇ ಸಾಫ್ಟವೇರ್, ವಿದೇಶ, ಬೆಂಗಳೂರಿನ ಕನಸುಗಳೇ ಬೀಳುತ್ತಿದ್ದ ಯವತಿಯರಿಗೆ ಈಗ ಆ ರೀತಿಯ ಕನಸುಗಳು ಬೀಳುವುದು ಕಡಿಮೆಯಾಗಿದೆ. ಮನೆಯ ಮುಂದಿನ ಅಡಿಕೆಮರ, ಕೆಂಪು ಮಣ್ಣಿನ ರಸ್ತೆ , ತಣ್ಣನೆಯ ಮಜ್ಜಿಗೆ, ಕೊಟ್ಟಿಗೆಯ ಎಮ್ಮೆ ಎಲ್ಲವೂ ಹಿತವೆನಿಸತೊಡಗಿದೆ. ಮೊದಲ್ಲೆಲ್ಲಾ ಕಣ್ಣೆತ್ತಿಯೂ ನೋಡದ ಪಕ್ಕದ ಮನೆಯ ಅಡಿಕೆ ತೋಟ ನೋಡಿಕೊಂಡಿರುವ ಯುವಕನ ಕಡೆ ಈಗ ಮುಗಳ್ನಗೆ ಬೀರುತ್ತಿದ್ದಾಳೆ. ತಮ್ಮೂರಿನ ಯುವತಿಯರಿಂದಲೇ ನಿರ್ಲಕ್ಷಕ್ಕೆ ಒಳಗಾಗಿ, ಮದುವೆಯಿಂದ ವಂಚಿತರಾಗಿ, ಚಿಕ್ಕಪುಟ್ಟ ಕತೆ ಕವನ ಲೇಖನಗಳನ್ನು ಬರೆದುಕೊಂಡಿದ್ದ ಬಡಪಾಯಿ ಲೇಖಕನಿಗೆ, ಪಿಗ್ಮಿ ಸಂಗ್ರಹಣೆಕಾರನಿಗೆ, ಅಂಚೆಯಣ್ಣನಿಗೆ, ಕನ್ನಡ ಶಾಲಾ ಮಾಸ್ತರನಿಗೆ, ಅಡಿಕೆ ದಲ್ಲಾಳಿಗೆ ಈಗ ಹುಡುಗಿಯರು ವಾರೆಗಣ್ಣು ಬೀರುತ್ತಿರುವುದು ನೋಡಿ ವಾಸ್ತವವೋ, ಕನಸೋ ಎಂದು ತಿಳಿಯದೇ ಗಲಿಬಿಲಿಗೊಳಗಾಗಿದ್ದಾರೆ. ಊರಲ್ಲೇ ಇದ್ದು ಚಿಕ್ಕಪುಟ್ಟ ಉದ್ಯೋಗ ಮಾಡಿಕೊಂಡಿದ್ದವರಿಗೆ ಈಗ ಮನೆಯವರಿಂದ ದಂಡ - ಪಿಂಡ ಎಂದು ಬೈಯಿಸಿಕೊಳ್ಳುವುದು ತಪ್ಪಿದೆ. ಅವರಿಗೆ ಇದ್ದಕ್ಕಿದ್ದಂತೆ ಡಿಮ್ಯಾಂಡಪ್ಪೋ ಡಿಮಾಂಡೋ.

ಕೆಲವು ಮಠಕ್ಕೆ, ಸ್ವಾಮಿಗಳಿಗೆ ಆದಾಯದಲ್ಲಿ ಭಾರಿ ಕಡಿತ. ವಿದೇಶದ ಡಾಲರ್ ಬರುತ್ತಿಲ್ಲ. ಕರೆಯೋಲೆಯು ಬರುತ್ತಿಲ್ಲ. ವಿದೇಶಿ ಭಕ್ತಾದಿಗಳೇ ಸಂಕಟದಲ್ಲಿರುವಾಗ ಇನ್ನೆಲ್ಲಿ ದೇಣಿಗೆ. ಬೆಂಗಳೂರಿನ ಕೆಲವು ಸಾಫ್ಟವೇರ್ ಕಂಪನಿಗಳು ಮಧ್ಯಾಹ್ನದ ಊಟ ಬಂದ್ ಮಾಡಿವೆ. ಪರಿಣಾಮ ನಮ್ಮ ಜಿಲ್ಲೆಯಿಂದ ಅವರಿಗಾಗಿಯೇ ತಯಾರಾಗಿ ಹೋಗುತ್ತಿದ್ದ ನವಿರಾದ ಹಲಸಿನ ಹಪ್ಪಳಗಳ ರಪ್ತು ಪ್ರಮಾಣದಲ್ಲಿ ಕುಸಿತ ಕಂಡಿದೆಯಂತೆ. ಇನ್ನು ಮುಂದಾದರು ನಮ್ಮ ಜನಸಾಮನ್ಯರಿಗೆ ಕೈಗೆಟಕಬಹುದು ಎಂಬ ಚಿಕ್ಕ ಆಸೆ ಮೂಡಿದೆ. ಖಾಸಗಿ ಬ್ಯಾಂಕುಗಳ ಮೋಹ ಕಡಿಮೆಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹಾರ ಜಾಸ್ತಿಯಾಗಿದೆ. ಕೋಕೋ ಕೋಲಾ ಕೋಲಾಹಲ ಕಡಿಮೆಯಾಗಿ ಮುರಳ್ಳಹಣ್ಣಿನ ಕೊಕಂಗೆ ಬೇಡಿಕೆ ಬಂದಿದೆ. ಕಾಲಾಯ ತಸ್ಮೈನಮಃ.

ಒಟ್ಟಿನಲ್ಲಿ ಆರ್ಥಿಕ ಕುಸಿತ ಸುಖ - ದು:ಖ ದ ಜೊತೆಗೆ ತನ್ನ ನೆಲದ ಮಣ್ಣನ್ನು ಮರೆತವರನ್ನು ಮರಳಿ ಮಣ್ಣಿಗೆ ಮರಳುವಂತೆ ಮಾಡಿದೆ. ಜನರೆ ವಿರಳವಾಗಿದ್ದ ಸಂಪದ್ಭರಿತ ಮಲೆನಾಡು ಪ್ರದೇಶಗಳಲ್ಲಿ ಜನ ಮುಖ ಮಾಡುತ್ತಿರುವುದು ನಿಜಕ್ಕೂ ಸಂತೋಷದಾಯಕ ಸಂಗತಿ. ಏನೇ ಆಗಲಿ ನಮ್ಮೂರಿನ ಮಣ್ಣೆ ನಮಗೆ ಶಾಶ್ವ್ವತ ಅಲ್ಲವೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+