ಸಿನಿಮಾ ಸಂಗೀತದ ಸುವರ್ಣ ಯುಗ!


ಸಿನಿ ಸಂಗೀತದ ಸಿರಿವಂತಿಕೆ ಅರ್ಥ ಮಾಡಿಕೊಳ್ಳಲು, ಸಿನಿ ಇತಿಹಾಸದ ಪುಟಗಳನ್ನು ಹಿಂದಕ್ಕೆ ತಿರುಗಿಸಬೇಕು. ಆಗ ಆ ಬಾಲಿವುಡ್‌ನಿಂದ ಈ ಸ್ಯಾಂಡಲ್‌ವುಡ್‌‌ವರೆಗಿನ ಸಿನಿ ಸಂಗೀತದ ವೈಭವ ದರ್ಶನ ಲಭ್ಯ.



Famous singer Mukeshಪುಟ್ಟದೊಂದು ಸರ್ಜರಿಯ ಕಾರಣಕ್ಕೆ, ಗೃಹಬಂಧನದಲ್ಲಿರುವ ಈ ಅವಧಿಯಲ್ಲಿ ನಾನು ಓಡಾಡುವಂತಿಲ್ಲ, ಅಲೆಯುವಂತಿಲ್ಲ. ಅಫ್ ಕೋರ್ಸ್, ಟೈಮ್ ಪಾಸ್ ಹೇಗಪ್ಪಾ ಎಂಬ ಸಮಸ್ಯೆ ನನಗೆ ಮೊದಲಿನಿಂದಲೂ ಇಲ್ಲ. ಓದಲೇಬೇಕಾಗಿರುವ ಪುಸ್ತಕಗಳು, ಕೇಳಲೇಬೇಕಾಗಿರುವ ಸಂಗೀತ, ನೋಡಲೇಬೇಕಾಗಿರುವ ಕ್ಲಾಸಿಕ್ ಸಿನೆಮಾಗಳು ಧಂಡಿಯಾಗಿರುವಾಗ, ಉಳಿದಿರುವ ಜೀವನಪರ್ವವೇ ಸಾಲದೇನೋ ಎನ್ನುವಾಗ, ಎಷ್ಟು ಸಮಯವಿದ್ದರೂ ಸಾಲದು. ಒಂದಿಷ್ಟು ಟಿವಿ ಹಾಕಿಕೊಂಡೆ.

ಈ ಕಿರುತೆರೆಯ ಪೆಟ್ಟಿಗೆಯಲ್ಲಿ 70 - 80 ವಾಹಿನಿಗಳಿವೆ. ಆದರೂ ಕೆಲವೊಮ್ಮೆ, ಈ ವಾಹಿನಿಗಳ ಲೋಕದಲ್ಲಿ ಅದೆಷ್ಟೆಷ್ಟು ಸುತ್ತಾಡಿದರೂ ಚೆಂದದ ಕಾರ್ಯಕ್ರಮವೊಂದೂ ಸಿಕ್ಕುವುದಿಲ್ಲ. ಹಿಮೇಶ್ ರೇಶಮ್ಮಯ್ಯ - ಎ.ಆರ್.ರೆಹಮಾನ್ ಅಂತಹವರು ಹಾಡುವಾಗ, ಇವರ ಪ್ರತಿಭೆಗಿಂತ, ಇವರಿಗೆ ಸಿಕ್ಕ - ಸಿಕ್ಕುತ್ತಿರುವ ಅವಕಾಶಗಳೇ ಜಾಸ್ತಿ ಅನ್ನಿಸುತ್ತದೆ. ಅದಕ್ಕಿಂತ ಈ ಹಾಡುಗಳ ಅತಿಯಾದ ಪುನಃಪ್ರಸಾರ ತಲೆ ಚಿಟ್ಟು ಹಿಡಿಸುತ್ತದೆ.

ಹಿಂದೀ ಚಿತ್ರರಂಗದ ಅದೃಷ್ಟವೋ - ಸೌಭಾಗ್ಯವೋ, ಹಿಂದೊಮ್ಮೆ ಮಹಾನ್ ಪ್ರತಿಭೆಗಳೆಲ್ಲಾ ಒಟ್ಟುಗೂಡಿ ಚಿರಸ್ಮರಣೀಯ ಮಹಾನ್ ಗೀತೆಗಳ - ಮಹಾನ್ ಸಂಗೀತದ ಸೃಷ್ಟಿಗೆ ಕಾರಣರಾಗಿದ್ದರು.

ಐವತ್ತರ - ಅರವತ್ತರ ದಶಕಗಳ ಚಿತ್ರಸಾಹಿತಿಗಳಾಗಲೀ, ಸಂಗೀತ ನಿರ್ದೇಶಕರಾಗಲೀ, ಈ ಸೃಷ್ಟಿಯ ಉಪಕರಣಗಳಾದರು. ಮುಖೇಶ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಹೇಮಂತ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋ‍ಸ್ಲೆ ಅವರೆಲ್ಲರ ಗಾಯನ ಪ್ರತಿಭೆಗೆ ಸಚಿನ್‍ದೇವ್ ಬರ್ಮನ್, ಶಂಕರ್-ಜೈಕಿಷನ್, ಮದನ್ ಮೋಹನ್, ನೌಶಾದ್, ವಸಂತ್ ದೇಸಾಯಿ, ಓ.ಪಿ.ನಯ್ಯಾರ್ ಅಂತಹ ಸಂಗೀತ ನಿರ್ದೇಶಕರಿಗೆ ದೊರೆತ ಚಿತ್ರಸಾಹಿತಿಗಳೂ ಅಂತಹ ಘಟಾನುಘಟಿಗಳೇ.

ಶೈಲೇಂದ್ರ, ಹಸರತ್ ಜೈಪುರಿ, ಭರತ್ ವ್ಯಾಸ್, ಶಕೀಲ್ ಬದಾಯುನಿ, ಮಜ್ರೂಹ್ ಸುಲ್ತಾನ್‍ಪುರಿ, ಒಬ್ಬೊಬ್ಬರ ಕೊಡುಗೆಯೂ ಅಪೂರ್ವವೇ. ಇಲ್ಲಿ ಶಾಂತಾರಾಮ್, ರಾಜ್‍ಕಪೂರ್ ಅಂತಹ ಚಿತ್ರನಿರ್ಮಾತೃಗಳ ಕೊಡುಗೆಯೂ ಕಡಿಮೆಯದಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+