ಕಪ್ಪು ತಾಜ್‌ಮಹಲ್‌ ಕನಸು ಕಾಣುವ ಶ್ವೇತ ಸುಂದರಿ....!

ಬೆಂಗಳೂರು : ಬೆಂಗಳೂರಿನ ನಟಿ ಹಾಗೂ ಕಮಲಹಾಸನ್‌ರ ‘ಹೇರಾಂ’ ಖ್ಯಾತಿಯ ವಸುಂಧರಾದಾಸ್‌ ಅವರು ಮ್ಯಾಗ್ನಾ ಸೌಂಡ್‌ಗಾಗಿ ಸಿದ್ಧಪಡಿಸಿರುವ ‘ಮೇರಿ ಜಾನ್‌’ ಎಂಬ ಹೆಸರಿನ ಸಂಗೀತದ ಅಲ್ಬಂ ನಗರದಲ್ಲಿ ಬಿಡುಗಡೆಯಾಗಿದೆ.

ಬ್ಲಾಕ್‌ ತಾಜ್‌ ಮಹಲ್‌ನ ಕನಸು ಕಾಣುವ ಪ್ರೇಮಿಯಾಬ್ಬಳು ಪ್ರೇಮದ ಉತ್ತುಂಗವ ಕಾಣಲು ತವಕಿಸುವ ಹಾಗೂ ಸತತ ಪ್ರಯತ್ನ ಮಾಡುವ ಸಣ್ಣ ಕಥೆಯ ಎಳೆಯನ್ನೇ ಆಧಾರವಾಗಿಟ್ಟುಕೊಂಡು ಈ ಆಲ್ಬಂ ತಯಾರಿಸಲಾಗಿದೆ. ಈ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳಿಗೆ ಸ್ವತಃ ವಸುಂಧರಾದಾಸ್‌ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ದಾಸ್‌ ಆಲ್ಬಂ ಹೊರತರುವುದು ನನ್ನ ಬಹುಕಾಲದ ಕನಸಾಗಿತ್ತು. ಈಗ ನನಸಾಯಿತು ಎಂದರು. ಅರೆಬಿಕ್‌, ಲ್ಯಾಟಿನ್‌ ಅಮೆರಿಕ, ಸ್ಟ್ಯಾನಿಶ್‌ ಸಂಗೀತವನ್ನು ಬಳಸಿಕೊಂಡು ಈ ಆಲ್ಬಂಗೆ ಸಂಗೀತ ಸಂಯೋಜಿಸಲಾಗಿದೆ ಎಂದರು.

ಪೀಯೂಶ್‌ ಮಿಶ್ರ ಹಾಗೂ ಪ್ರವೀಣ್‌ ಅವರು ಆಲ್ಬಂ ರೂಪಿಸಲು ಸಹಕರಿಸಿದ್ದಾರೆ ಎಂದು ಹೇಳಿದ ಅವರು, ಅಂತ್ಯ ಅರ್ಥಾತ್‌ ಸಾವಿನ ಸುಳಿವೇ ಸುಳಿಯದ ಪವಿತ್ರ ಪ್ರೇಮದ ಸಾವಿರ ದನಿಯುಳ್ಳ ಅಲ್ಬಂ ಒಂದನ್ನು ಹೊರತರುವ ಬಯಕೆಯಿಂದ ತಾವು ಒಂದು ವರ್ಷದಿಂದದಲೂ ಸತತವಾಗಿ ಶ್ರಮಪಟ್ಟಿದ್ದಾಗಿಯೂ ಅವರು ತಿಳಿಸಿದರು.

(ಇನ್‌ಫೋವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+