ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನವ ಕರ್ನಾಟಕ’ದ ಹದಿನೆಂಟು ಸಂಪುಟಗಳು ಬಿಡುಗಡೆ

By Staff
|
Google Oneindia Kannada News

ಬೆಂಗಳೂರು : ಸಾಹಿತ್ಯವಲಯದ ಸದ್ಯದ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ಸಾಹಿತ್ಯದ ಚರ್ಚೆಗಿಂತ ಸಾಹಿತಿಗಳ ಚರ್ಚೆಯೇ ಪ್ರಸ್ತುತ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದ ಯವನಿಕ ಸಭಾಂಗಣದಲ್ಲಿ ‘ಹೊಸತು’ ವಾಚಿಕೆ ಮಾಲೆಯ 18 ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತ, ಮೌನ ಮುರಿದಿರುವ ಚಿಂತಕರು ಮತ್ತು ಸಾಹಿತಿಗಳು ಅನಗತ್ಯ ವಿಚಾರಗಳಲ್ಲಿ ಆಸಕ್ತಿವಹಿಸಿದ್ದಾರೆ ಎಂದು ದೂರಿದರು.

ಬರೆಯುವವರು ಮಾತ್ರ ಸಾಹಿತಿಗಳಲ್ಲ. ಕೆಲವರು ಮಾತಿನ ಮೂಲಕವೂ ಬರವಣಿಗೆಗೆ ಸಾಕಷ್ಟು ಕೊಡುಗೆ ನೀಡಬಲ್ಲರು. ಹೀಗಾಗಿ ಬರೆಯುವ ಸಾಹಿತಿಗಳು, ಬರೆಯದ ಸಾಹಿತಿಗಳಿಗೆ ಗೌರವ ನೀಡಬೇಕು ಎಂದರು.

ಕವಿ ಡಾ. ಚೆನ್ನವೀರ ಕಣವಿ ಸಮರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ. ರಾಮಕೃಷ್ಣ , ಡಾ. ಬಿ.ಎಸ್‌. ಶೈಲಜಾ, ಪ್ರೊ. ವಿ. ಚಂದ್ರಶೇಖರ ನಂಗಲಿ, ನವಕರ್ನಾಟಕ ಪ್ರಕಾಶನದ ಆರ್‌.ಎಸ್‌. ರಾಜಾರಾಮ್‌ ಹಾಜರಿದ್ದರು.

ಹದಿನೆಂಟು ಸಂಪುಟಗಳು : ನವಕರ್ನಾಟಕ ಪ್ರಕಾಶನ, ತನ್ನ ‘ಹೊಸತು’ ಪತ್ರಿಕೆಯಲ್ಲಿ ಪ್ರಕಟವಾದ ಪ್ರಮುಖ ಲೇಖನಗಳ 18 ಸಂಪುಟಗಳನ್ನು ಹೊಸವರ್ಷದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದೆ. ಲೇಖಕರು ಮತ್ತು ಕೃತಿಗಳ ವಿವರ -

  • ಕೆ.ಎಲ್‌. ಗೋಪಾಲಕೃಷ್ಣರಾವ್‌ -‘ವಿಚಾರ ಸಂಪತ್ತು’
  • ಡಾ. ಎಂ.ಎನ್‌. ಕೇಶವರಾವ್‌ರ -‘ತಿಳಿವು’
  • ಸಿ.ಆರ್‌. ಕೃಷ್ಣ ರಾವ್‌ -‘ಪ್ರಚಲಿತ ವಿದ್ಯಮಾನ’
  • ಡಾ. ಬಿ.ಎಸ್‌. ಶೈಲಜಾ -‘ಬಾನಿಗೊಂಡು ಕೈಪಿಡಿ’
  • ಡಾ. ಎನ್‌. ಗಾಯಿತ್ರಿ - ‘ಆಯ್ದ ಸಂಪಾದ ಕೀಯಗಳು’
  • ರಾ.ನಂ. ಚಂದ್ರ ಶೇಖರ -‘ಇದು ನಮ್ಮ ಕರ್ನಾಟಕ’
  • ಚಿ. ಶ್ರೀನಿವಾಸರಾಜು -‘ಪರಿಮಳದ ಸುಗ್ಗಿ’
  • ರವಿಕುಮಾರ್‌ ಅಜ್ಜೀಪುರ - ‘ಕಥಾಕುಂಜ’
  • ಭಾರತೀ ಕಾಸರ ಗೋಡು -‘ಬಂಧ-ಬಂಧುರ’
  • ಕೆ. ಎಸ್‌. ಪಾರ್ಥಸಾರಥಿ -‘ದರ್ಶನ-ಸಂದರ್ಶನ’
  • ಡಾ. ವಸುಂಧರಾ ಭೂಪತಿ -‘ವೈದ್ಯಲೋಚನ’
  • ನೇಮಿಚಂದ್ರ -‘ಮಹಿಳಾಲೋಕ’
  • ಪ್ರೊ. ವಿ. ಚಂದ್ರಶೇಖರ ನಂಗಲಿ -‘ವಚನ ಸಾಹಿತ್ಯ’
  • ಪರಂಜ್ಯೋತಿ -‘ಬಿಂಬ-ಪ್ರತಿಬಿಂಬ’
  • ಪ್ರೊ. ಬಿ. ವಿ. ವೀರಭದ್ರಪ್ಪ -‘ಶಿಕ್ಷಣ ಮತ್ತು ಸಂಸ್ಕೃತಿ’
  • ಡಾ. ಎಚ್‌. ಎಸ್‌. ರಾಘವೇಂದ್ರರಾವ್‌ -‘ಸಾಹಿತ್ಯ ಸಂವಾದ’
  • ಡಾ. ಎಚ್‌.ಎಸ್‌. ಗೋಪಾಲರಾವ್‌ -‘ಇತಿಹಾಸದ ಪರಾಮರ್ಶೆ’
  • ಕೆ.ಎಸ್‌. ನವೀನ್‌ -ವಿಜ್ಞಾನ ಮತ್ತು ವೈಜ್ಞಾನಿಕ ಮನೋ ಧರ್ಮ’
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X