ನವಂಬರ್ 13 ರಿಂದ ಬೆಂಗಳೂರಿನಲ್ಲಿ ಮಕ್ಕಳ ಪುಸ್ತಕೋತ್ಸವ
ಬೆಂಗಳೂರು : ಕೊಲ್ಕತಾದ ರಾಜಾರಾಮ್ ಮೋಹನ್‌ರಾಯ್ ಗ್ರಂಥಾಲಯ ಪ್ರತಿಷ್ಠಾನ ನವಂಬರ್ 13 ರಿಂದ 17 ರವರೆಗೆ 5 ದಿನಗಳ ಅಖಿಲ ಭಾರತ ಮಕ್ಕಳ ಪುಸ್ತಕ ಪ್ರದರ್ಶನವನ್ನು ನಗರದಲ್ಲಿ ನಡೆಸಲಿದೆ.
ಪ್ರಸ್ತುತ ವರ್ಷವನ್ನು ಅಂತರರಾಷ್ಟ್ರೀಯ ಪುಸ್ತಕ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು , ಮಕ್ಕಳ ಪುಸ್ತಕಗಳನ್ನು ಹೆಚ್ಚು ಪ್ರಚಾರ ಮಾಡುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಈ ವಿಷಯವನ್ನು ಶುಕ್ರವಾರ ಕೊಲ್ಕತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜಾರಾಮ್ ಮೋಹನ್‌ರಾಯ್ ಗ್ರಂಥಾಲಯ ಪ್ರತಿಷ್ಠಾನದ ಅಧ್ಯಕ್ಷ ಡಾ. ಸೂರ್ಯನಾಥ್ ಕಾಮತ್ ತಿಳಿಸಿದರು.
ಮೇಳದಲ್ಲಿ ಭಾಗವಹಿಸಲು ಬಯಸುವ ಪುಸ್ತಕ ಪ್ರಕಾಶಕರು ಹಾಗೂ ಮಾರಾಟಗಾರರು ತಮ್ಮ ಮಳಿಗೆಗಳನ್ನು ತೆರೆಯುವ ಸಂಬಂಧ ಅಕ್ಟೋಬರ್ 15 ರೊಳಗಾಗಿ ಪ್ರತಿಷ್ಠಾನವನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications