ಮನೆ ಸೊಬಗು ಹೆಚ್ಚಿಸುವ ‘ಇಕ್ಸೋರ' ಶಿವನ ಇಷ್ಟ ಪುಷ್ಪ

By: ಬಿ.ಎಂ.ಲವಕುಮಾರ್
Subscribe to Oneindia Kannada

ವರ್ಷಪೂರ್ತಿ ಗಿಡದ ತುಂಬಾ ಕೆಂಪನೆಯ ಬಣ್ಣದಲ್ಲಿ ದೊಡ್ಡ ದೊಡ್ಡ ಗೊಂಚಲುಗಳಲ್ಲಿ ಒತ್ತೊತ್ತಾಗಿ ಹೂಬಿಟ್ಟು ಸುಂದರವಾಗಿಯೂ, ಆಕರ್ಷಕವಾಗಿಯೂ ಕಂಗೊಳಿಸುತ್ತಾ ಪುಷ್ಪ ಪ್ರೇಮಿಗಳ ಮನಕ್ಕೆ ಲಗ್ಗೆಯಿಡುವ ಇಕ್ಸೋರ ಹೂವನ್ನು ನೋಡದವರು ಬಹಳ ವಿರಳ. ಇದೀಗ ಎಲ್ಲ ಮನೆಗಳ ಎದುರು ಹಾಗೂ ಹೂತೋಟಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾ ಜನಪ್ರಿಯ ಪುಷ್ಪವಾಗಿ ಬೆಳೆಯತೊಡಗಿದೆ.

ಇಕ್ಸೋರ ಪುಷ್ಪವು ಉದ್ಯಾನವನದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಮನೆಯ ಸೊಬಗನ್ನು ಇಮ್ಮಡಿಗೊಳಿಸುತ್ತದೆ. ಉಷ್ಣವಲಯದ ವಾತಾವರಣವು ಇಕ್ಸೋರಕ್ಕೆ ಯೋಗ್ಯವಾಗಿದ್ದು, ಸಾಮಾನ್ಯವಾಗಿ ಎಲ್ಲ ಮಣ್ಣಿನಲ್ಲಿಯೂ ಹುಲುಸಾಗಿ ಬೆಳೆಯುತ್ತದೆ. ಈ ಪುಷ್ಪದ ಗಿಡವು ಸುಮಾರು ಐದರಿಂದ ಏಳು ಅಡಿಗಳಷ್ಟು ಎತ್ತರ ಬೆಳೆಯುತ್ತದೆ. ಗಿಡ ನೆಟ್ಟು ಒಂದೆರಡು ವರ್ಷದಲ್ಲಿ ಹೂಬಿಡಲು ಪ್ರಾರಂಭಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕೋಲಗಳಲ್ಲಿ ಇಕ್ಸೋರ ಪುಷ್ಪಕ್ಕೆ ವಿಶೇಷ ಸ್ಥಾನವಿದೆ. ಕಾಡುಗಳಲ್ಲಿ ಬೆಳೆಯುವ ಇಕ್ಸೋರ ಹೂಗಳನ್ನು ಕೋಲದ ಸಂದರ್ಭದಲ್ಲಿ ಬಳಸುತ್ತಾರೆ. ಮಲೆನಾಡಿನ ಕಾಡುಗಳಿಗೊಂದು ಸುತ್ತು ಹೊಡೆದರೆ ಇದಕ್ಕೆ ಸಂಬಂಧಿಸಿದಂತೆ ಹಲವು ತಳಿಗಳು ಕಾಣಸಿಗುತ್ತವೆ. ಇವುಗಳು ಕಾಡು ಜಾತಿಯದ್ದಾಗಿವೆ.[ಕಿಲಕಿಲನೆ ನಗೆ ಬೀರುವ ಲಾಲ್ಬಾಗ್ ಪುಷ್ಪಲೋಕ]

ನೋಡುಗರನ್ನು ತಕ್ಷಣವೇ ಸೆಳೆಯುವ ಇಕ್ಸೋರ ಪುಷ್ಪವು ಕೇರಳ ದೇವಾಲಯದಲ್ಲಿ ತನ್ನದೇ ಆದ ಪ್ರಾಶಸ್ತ್ಯ ಪಡೆದಿದೆ. ಇದನ್ನು 'ಕೇಪಳ' ಎಂದು ಕರೆಯುತ್ತಾರೆ. ಇಕ್ಸೋರ ಪುಷ್ಪದ ಇನ್ನಿತರ ಮಾಹಿತಿ ಇಲ್ಲಿದೆ.

ಇಕ್ಸೋರ ಪುಷ್ಪವು ಯಾವ ಕುಟುಂಬಕ್ಕೆ ಸೇರಿದೆ?

ಇಕ್ಸೋರ ಪುಷ್ಪವು ಯಾವ ಕುಟುಂಬಕ್ಕೆ ಸೇರಿದೆ?

ಒಂದು ಮೂಲದ ಪ್ರಕಾರ ಇದು ಸಿಂಗಾಪುರ ದೇಶದ ಹೂ ಎನ್ನಲಾಗಿದೆ. ನಂತರ ಇತರೆಡೆಗೆ ಹರಡಿತು ಎಂದು ಹೇಳಲಾಗುತ್ತಿದೆ. ರೂಬಿಸಿಯ (Rubiaceae) ಕುಟುಂಬಕ್ಕೆ ಸೇರಿದ ಇದನ್ನು ಸಸ್ಯ ಶಾಸ್ತ್ರೀಯದ ಹೆಸರಿನ ಪ್ರಕಾರ ಇಕ್ಸೋರ ಸಿಂಗಪೊರೆನ್ಸಿಸ್ ಎಂದು ಕರೆಯುತ್ತಾರೆ. ಇದರ ಉಪಕುಟುಂಬ Ixoroideae.

ಇಕ್ಸೋರ ಪುಷ್ಪಕ್ಕಿರುವ ಇನ್ನಿತರ ಹೆಸರುಗಳು

ಇಕ್ಸೋರ ಪುಷ್ಪಕ್ಕಿರುವ ಇನ್ನಿತರ ಹೆಸರುಗಳು

ಇಕ್ಸೋರ ಪುಷ್ಪವನ್ನು "ವೆಸ್ಟ್‌ ಇಂಡಿಯನ್ ಜಾಸ್ಮಿನ್, ವಿರುಚಿ, ರಂಗನ್, ಖೇಮ್, ಪೊನ್ನ, ಚಾನ್ ಟಾನಿಯಾ, ಟೆಚಿ, ಪಾನ್, ಸಂತನ್, ಜರುಮ್-ಜರುಮ್, ಜಂಗಲ್ ಫ್ಲೇಮ್, ಜಂಗಲ್ ಜೆರಾನಿಯಮ್" ಹೀಗೆ ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಇಕ್ಸೋರ ಗಿಡಗಳು ಯಾರ ಮನೆಮುಂದೆ ಹುಲುಸಾಗಿ ಬೆಳೆಯುತ್ತದೆಯೋ ಆ ಮನೆಯಲ್ಲಿ ದಿನನಿತ್ಯ ನೆಮ್ಮದಿ ಸುಖವಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಇಕ್ಸೋರ ಪುಷ್ಪ ಯಾವ ದೇವರಿಗೆ ಪ್ರಿಯ?

ಇಕ್ಸೋರ ಪುಷ್ಪ ಯಾವ ದೇವರಿಗೆ ಪ್ರಿಯ?

ಕೆಲವರ ನಂಬಿಕೆಯ ಪ್ರಕಾರ ಈ ಹೂವು ಈಶ್ವರನಿಗೆ ಬಲು ಪ್ರಿಯವೆಂದೂ ಆದುದರಿಂದ ಇಕ್ಸೋರ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಕೇರಳದ ದೇವಾಲಯಗಳ ಸುತ್ತಮುತ್ತ ಈ ಹೂವಿನ ಹಲವಾರು ಗಿಡಗಳಿವೆ.

ಇಕ್ಸೋರ ಪುಷ್ಪ ಎಷ್ಟು ಬಣ್ಣಗಳಲ್ಲಿ ಕಾಣಸಿಗುತ್ತದೆ?

ಇಕ್ಸೋರ ಪುಷ್ಪ ಎಷ್ಟು ಬಣ್ಣಗಳಲ್ಲಿ ಕಾಣಸಿಗುತ್ತದೆ?

ಇಕ್ಸೋರ ಪುಷ್ಪದ ಗಿಡವನ್ನು ಕಸಿ ಮಾಡಿ ಬೆಳೆಸಬಹುದು. ಮೊದಲೆಲ್ಲ ಕೇವಲ ಕೆಂಪನೆಯ ಬಣ್ಣದ ಹೂಗಳು ಮಾತ್ರ ಅಲ್ಲಲ್ಲಿ ಕಾಣಸಿಗುತ್ತಿದ್ದವು. ಇದೀಗ ಬಿಳಿ, ಗುಲಾಬಿ ಬಣ್ಣ, ಹಳದಿ, ಹಸಿರು ಹೀಗೆ ನಾನಾ ಬಣ್ಣದಲ್ಲಿ ಇಕ್ಸೋರ ಕಂಗೊಳಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ixora is a genus of flowering plants in the Rubiaceae family. it is commonly known as West Indian Jasmine. Other common names include viruchi, rangan, kheme, ponna, chann tanea, techi, pan, santan, jarum-jarum, jungle flame, jungle geranium.
Please Wait while comments are loading...