ನುಡಿ ಗಾರುಡಿಗ ಲಂಕೇಶ್ 75

ಮಾರ್ಚ್ 6ರ ಶನಿವಾರ ಮತ್ತು 7 ಭಾನುವಾರ ಬೆಳಗಿನಿಂದ ಬೈಗಿನವರೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ಜರುಗುವ ವಿಚಾರ ಸಂಕಿರಣದಲ್ಲಿ ಒಟ್ಟು ಆರು ಗೋಷ್ಠಿಗಳಿವೆ. ಲಂಕೇಶ್ ಅವರ ಬಹುಮುಖೀ ವ್ಯಕ್ತಿತ್ವ ಮತ್ತು ಲೇಖನ ಕೃಷಿಯ ಮೇಲೆ ಈ ಗೋಷ್ಠಿಗಳು ಇನ್ನಷ್ಟು ಬೆಳಕು ಚೆಲ್ಲಲಿದ್ದು ಲಂಕೇಶ್ ಅಭಿಮಾನಿಗಳು ಹಾಗೂ ಸಾರಸ್ವತ ಲೋಕದಲ್ಲಿ ಅಭಿರುಚಿಯುಳ್ಳವರು ಸಂಕಿರಣದಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮ ಆಯೋಜಕರು ಕೋರಿದ್ದಾರೆ.
ವಿವರಗಳು ಇಂತಿವೆ :
ಮಾರ್ಚ್ 6, ಶನಿವಾರ ಉದ್ಘಾಟನಾ ಸಮಾರಂಭ : ಸ್ವಾಗತ ಭಾಷಣ; ಎಸ್. ಗುಣಸೇಕರನ್, ಪ್ರಾದೇಶಿಕ ಕಾರ್ಯದರ್ಶಿ, ದಕ್ಷಿಣ ಪ್ರಾದೇಶಿಕ ಕಚೇರಿ, ಸಾಹಿತ್ಯ ಅಕಾಡೆಮಿ. ಪ್ರಾಸ್ತಾವಿಕ ಭಾಷಣ; ಗೌರಿ ಲಂಕೇಶ್. ಉದ್ಘಾಟನೆ : ವೈದೇಹಿ ; ಅಧ್ಯಕ್ಷತೆ ; ಕಿ.ರಂ. ನಾಗರಾಜ.
ಗೋಷ್ಠಿ 1 : 12 ಗಂಟೆಗೆ : ಲಂಕೇಶ್ ಮತ್ತು ಕನ್ನಡ ಸಾಹಿತ್ಯ ಪರಂಪರೆ 1
ಲಂಕೇಶ್ ಮತ್ತು ಕಾವ್ಯ : ಬಂಜಗೆರೆ ಜಯಪ್ರಕಾಶ
ಲಂಕೇಶ್ ಮತ್ತು ವಿಮರ್ಶೆ : ರಹಮತ್ ತರೀಕೆರೆ
ಲಂಕೇಶ್ ಮತ್ತು ಸಣ್ಣಕತೆ : ಆಶಾದೇವಿ
ಅಧ್ಯಕ್ಷತೆ : ಕೆ. ಮರುಳಸಿದ್ದಪ್ಪ
ಗೋಷ್ಠಿ 2: 2.20ಕ್ಕೆ: ಲಂಕೇಶ್ ಮತ್ತು ಕನ್ನಡ ಸಾಹಿತ್ಯ ಪರಂಪರೆ 2
ಲಂಕೇಶ್ ಮತ್ತು ಕಾದಂಬರಿ :ವಿ.ಎಸ್. ಶ್ರೀಧರ
ಲಂಕೇಶ್ ಮತ್ತು ನಾಟಕ : ರಘುನಂದನ
ಲಂಕೇಶ್ ಅವರ ಸಾಹಿತ್ಯಕ ಬರಹಗಳು : ಪಟ್ಟಾಭಿರಾಮ ಸೋಮಯಾಜಿ
ಅಧ್ಯಕ್ಷತೆ : ಫಕೀರ್ ಮೊಹಮ್ಮದ್ ಕಟ್ಪಾಡಿ
ಗೋಷ್ಠಿ 3 : 4.30 ಗಂಟೆಗೆ : ಲಂಕೇಶ್ ಮತ್ತು ನಾನು
ಬಿ. ಚಂದ್ರೇಗೌಡ
ಕೆ. ಅಕ್ಷತಾ
ಸರ್ಜಾ ಶಂಕರ್
ಅಧ್ಯಕ್ಷತೆ: ಕೋಟಿಗಾನಹಳ್ಳಿ ರಾಮಯ್ಯ
ಮಾರ್ಚ್ 7 ಭಾನುವಾರ: 10 ಗಂಟೆಗೆ ಸಂಕಿರಣ ಆರಂಭ
ಗೋಷ್ಠಿ 4 : ಲಂಕೇಶ್ ಬಗ್ಗೆ ಕೆಲವು ಅನಿಸಿಕೆಗಳು:
ಪಾರ್ವತೀಶ
ಸುಬ್ಬು ಹೊಲೆಯಾರ್
ಗುರುಶಾಂತ್
ಅಧ್ಯಕ್ಷತೆ : ಜಿ. ರಾಜಶೇಖರ
ಗೋಷ್ಠಿ 5 : ಮಧ್ಯಾಹ್ನ 12 ಗಂಟೆಗೆ : ಲಂಕೇಶ್ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗಳು
ವಿರೋಧ ಪಕ್ಷವಾಗಿ ಲಂಕೇಶ್ : ದಿನೇಶ್ ಅಮೀನ್‌ಮಟ್ಟು
ಲಂಕೇಶ್ ಅವರ ರಾಜಕೀಯ ಚಿಂತನೆ : ಕೆ. ಫನಿಕಾಜ್
ದಮನಿತರ ದನಿಯಾಗಿ ಲಂಕೇಶ್ : ಬಿ.ಎಂ. ಬಷೀರ್
ಅಧ್ಯಕ್ಷತೆ : ಎಚ್.ಎಲ್. ಕೇಶವಮೂರ್ತಿ
ಗೋಷ್ಠಿ 6 : 2.30ಕ್ಕೆ : ಲಂಕೇಶ್ ಮತ್ತು ಸಮಕಾಲೀನ ಸವಾಲುಗಳು
ಪ್ರಸ್ತುತ ರಾಜಕೀಯ : ಎ.ಕೆ. ಸುಬ್ಬಯ್ಯ
ಪ್ರಸ್ತುತ ಚಳವಳಿಗಳು : ಡಾ. ವಾಸು
ಕೋಮುವಾದ ಮತ್ತು ಜಾಗತೀಕರಣ : ಬಿ.ಎಂ. ಪುಟ್ಟಯ್ಯ
ಅಧ್ಯಕ್ಷತೆ : ಜಿ. ರಾಮಕೃಷ್ಣ
ಸಮಾರೋಪ ಸಮಾರಂಭ 4 ಗಂಟೆಗೆ
ಗೌರಿ ಲಂಕೇಶ್
ಪಾರ್ವತೀಶ
ಬಿರಾದಾರ್
ಅಧ್ಯಕ್ಷತೆ : ದೇವನೂರು ಮಹಾದೇವ
ಲಂಕೇಶ್ 75 : ಕವಿಗೋಷ್ಠಿ : ಕವನಗಳನ್ನು ವಾಚಿಸುವವರು:
ವಿನಯ, ಬಾಗೇಶ್ರೀ, ಅಕ್ಷತಾ, ಬಿ. ಶ್ರೀನಿವಾಸ್, ಸುಬ್ಬು ಹೊಲೆಯಾರ್, ಎಸ್. ಮಂಜುನಾಥ್, ರಂಗನಾಥ್, ಟಿ.ಎನ್. ಸೀತಾರಾಮ್, ಕಿ.ರಂ. ನಾಗರಾಜ, ವೈದೇಹಿ, ಜ್ಯೋತಿ ಗುರುಪ್ರಸಾದ್, ವೀರಣ್ಣ ಮಡಿವಾಳರ, ರಮೇಶ್ ಅರವಿಂದ್, ಕೈದಾಲ್ ಕೃಷ್ಣಮೂರ್ತಿ, ಅರೀಫ್ ರಾಜಾ, ಕೆ. ಶರೀಫಾ, ಶಿವಸುಂದರ್, ಕೀರ್ ಭಾಷಾ
ಅಧ್ಯಕ್ಷತೆ: ಚಂಪಾ












Click it and Unblock the Notifications