ಕಾಂತಾವರದ ನಾ.ಮೊಗಸಾಲೆಗೆ ವೈದ್ಯ ಸಾಹಿತ್ಯಪ್ರಶಸ್ತಿ
ಮೂಡಬಿದರೆ : ಕವಿ, ಕಥೆಗಾರ, ಕಾದಂಬರಿಕಾರ ಹಾಗೂ ಕಾಂತಾವರ ಕನ್ನಡ ಸಂಘದ ಮೂಲಕ ಸಾರಸ್ವತ ಲೋಕದಲ್ಲಿ ಪರಿಚಿತರಾದ ಡಾ. ನಾ. ಮೊಗಸಾಲೆ ಅವರಿಗೆ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಡಾ.ನಾ. ಮೊಗಸಾಲೆ ಅವರು ಬರೆದಿರುವ ‘ಆರೋಗ್ಯ- ಅನಾರೋಗ್ಯ’ ಕೃತಿ ಡಾ. ಪಿ. ಎಸ್. ಶಂಕರ ಪ್ರತಿಷ್ಠಾನದ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಗೆ ಪಾತ್ರವಾಗಿದೆ. ಕಾಂತಾವರದಂಥ ಗ್ರಾಮೀಣ ಪರಿಸರದಲ್ಲಿ ಸಾಹಿತ್ಯ, ಮತ್ತು ಸಾಂಸ್ಕೃತಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಾ. ಮೊಗಸಾಲೆ ಅವರು ಸ್ವತಃ ವೈದ್ಯರು. ಮೊಗಸಾಲೆಯವರು ವರ್ಧಮಾನ ಸಾಹಿತ್ಯ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಮುದ್ದಣ ಪ್ರಶಸ್ತಿಯ ರೂವಾರಿ.
ಗುಲ್ಬರ್ಗದಲ್ಲಿ ಜನವರಿ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಚಿತ್ರದುರ್ಗ ಬೃಹನ್ಮಠದ ಮುರುಘರಾಜೇಂದ್ರ ಶರಣ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪ್ರೊ. ವಿ. ಪಿ. ದೇವುಳ ಗಾಂವ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications