Sugar Test: ಫಾಸ್ಟಿಂಗ್ ಬ್ಲೆಡ್ ಶುಗರ್ ಎಂದರೇನು? ಈ ಟೆಸ್ಟ್ ಯಾವಾಗ ಮಾಡಿಸಬೇಕು? ಎಷ್ಟು ಇದ್ದರೆ ಒಳ್ಳೆಯದು?
ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಪ್ರಸ್ತುತ ಸಕ್ಕರೆ ಕಾಯಿಲೆ ಮಾಮೂಲಿಯಾಗಿಬಿಟ್ಟಿದೆ. ಆದರೆ ಇದಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಂದಹಾಗೆ ಸಕ್ಕರೆ ಕಾಯಿಲೆ ಇರುವಿಕೆ ಹಾಗೂ ಅದರ ಪ್ರಮಾಣವನ್ನು ಪತ್ತೆ ಮಾಡಲು ಹಲವಾರು ಬಗೆಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಆದರೆ ಸಕ್ಕರೆ ಕಾಯಿಲೆ ಇರುವುದನ್ನು ಪತ್ತೆ ಮಾಡಲು ಎಫ್‌ಬಿಎಸ್ (FBS) ಪರೀಕ್ಷೆ ಉತ್ತಮ ಎನ್ನುತ್ತದೆ ವೈದ್ಯಕೀಯ ಕ್ಷೇತ್ರ. ಹಾಗಾದರೆ ಫಾಸ್ಟಿಂಗ್ ಬ್ಲೆಡ್ ಶುಗರ್ ಎಂದರೇನು? ಈ ಟೆಸ್ಟ್ ಯಾವಾಗ ಮಾಡಿಸಬೇಕು? ಎಷ್ಟು ಇದ್ದರೆ ಒಳ್ಳೆಯದು?
ರಾತ್ರಿ ಊಟ ಮಾಡಿ ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ಮಾಡುವ ಪರೀಕ್ಷೆಯನ್ನು ಫಾಸ್ಟಿಂಗ್ ಬ್ಲೆಡ್ ಶುಗರ್ (Fasting Blood Sugar Test) ಎಂದು ಕರೆಯಲಾಗುತ್ತದೆ. ಅಂದರೆ ಈ ಪರೀಕ್ಷೆಯ ನಿಖರ ವರದಿಗಾಗಿ 12 ಗಂಟೆ ಯಾವುದೇ ಆಹಾರವನ್ನು ಸೇವಿಸಿರಬಾರದು. ಅಂದರೆ ಸಂಜೆ 7 ಗಂಟೆಗೆ ಊಟ ಮಾಡಿದರೆ ಬೆಳಿಗ್ಗೆ 7 ಗಂಟೆಗೆ ಈ ಪರೀಕ್ಷೆ ಮಾಡಿಸಬೇಕು. ರಾತ್ರಿ 8 ಗಂಟೆಗೆ ಊಟ ಮಾಡಿದರೆ ಬೆಳಿಗ್ಗೆ 8 ಗಂಟೆಗೇ ಈ ಪರೀಕ್ಷೆಯನ್ನು ಮಾಡಿಸಬೇಕು. ಕಡಿಮೆ ಅವಧಿಯಲ್ಲಿ ಅಂದರೆ 12 ಗಂಟೆಗೂ ಕಡಿಮೆ ಅವಧಿಯಲ್ಲಿ ಈ ಪರೀಕ್ಷೆ ಮಾಡಿಸುವುದರಿಂದ ನಿಖರವಾದ ಮಾಹಿತಿಯನ್ನು ಪಡೆಯಲು ಆಗುವುದಿಲ್ಲ.

ಹಾಗಂತ ರಾತ್ರಿ 9 ಗಂಟೆ ನಂತರ ಊಟ ಮಾಡುವವರು ಬೆಳಗ್ಗೆ 9 ಗಂಟೆಗೆ ಪರೀಕ್ಷೆ ಮಾಡಿಸಿಕೊಳ್ಳುವುದು ಕೂಡ ನಿಖರವಾದ ಮಾಹಿತಿಯನ್ನು ಪಡೆಯುವುದಿಲ್ಲ. ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿದಾಗ ಮಾತ್ರ ಕಾಯಿಲೆ ಇದಿಯಾ ಅಥವಾ ಇಲ್ವಾ? ಇದ್ದರೆ ಎಷ್ಟು ಪ್ರಮಾಣದಲ್ಲಿ ಇದೆ ಎಂದು ನಿಖರವಾಗಿ ತಿಳಿಯಬಹುದು. ಹೀಗಾಗಿ ಸಕ್ಕರೆ ಕಾಯಿಲೆ ಪತ್ತೆ ಹಚ್ಚಲು ಹಾಗೂ ಅದರ ಪ್ರಮಾಣವನ್ನು ತಿಳಿಯಲು ವೈದ್ಯಕೀಯ ಕ್ಷೇತ್ರದಲ್ಲಿ ಎಫ್‌ಬಿಎಸ್ ಪರೀಕ್ಷೆಯನ್ನು ಹೆಚ್ಚಾಗಿ ನಂಬಲಾಗುತ್ತದೆ. ಇದು ದೃಢ ಕೂಡ ಆಗಿದೆ. ಹಾಗಾದರೆ ಎಫ್‌ಬಿಎಸ್ ಯಾವಾಗ ಮಾಡಿಸಬೇಕು? ಯಾವ ಲಕ್ಷಣಗಳಿದ್ದರೆ ಮಾಡಿಸಿದರೆ ಉತ್ತಮ?
ಎಫ್‌ಬಿಎಸ್ ಯಾವಾಗ ಮಾಡಿಸಬೇಕು?
* ಮೂತ್ರ ವಿಸರ್ಜನೆ ಹೆಚ್ಚಾದಾಗ- ಬಾಯಾರಿಕೆ ಹೆಚ್ಚಾದಾಗ ಎಫ್‌ಬಿಎಸ್ ಮಾಡಿಸಿ.
* ಆಗಾಗ ಇನ್‌ಫೆಕ್ಷನ್ ಆಗುತ್ತಿರುತ್ತದೆ. ಆಗ ಎಫ್‌ಬಿಎಸ್ ಮಾಡಿಸುವುದು ಉತ್ತಮ.
* ಇದ್ದಕ್ಕಿದ್ದಂತೆ ತೂಗ ಕಡಿಮೆಯಾಗುವುದು. ಒಂದೆರೆಡು ತಿಂಗಳಲ್ಲಿ ತೂಕ ಕಡಿಮೆ ಆದರೆ ಎಫ್‌ಬಿಎಸ್ ಪರೀಕ್ಷೆ ಮಾಡಿಸಿ.
* ಕಣ್ಣುಗಳು ಮಂಜಾಗುವುದು. ದೃಷ್ಟಿಯಲ್ಲಿ ತೊಂದರೆಯಾಗುವುದು ಕಂಡು ಬಂದರೆ ಟೆಸ್ಟ್ ಮಾಡಿಸುವುದು ಒಳ್ಳೆಯದು.
* ಕಾಲುಗಳು ಮರುಗಟ್ಟುವುದು, ಚುಚ್ಚಿದ ರೀತಿ ಆಗುವುದು.
ಈ ಟೆಸ್ಟ್ ಮಾಡಿಸುವ ಮುಂಚೆ ತೆಗೆದುಕೊಳ್ಳುವ ಮುಜಾಗ್ರತಾ ಕ್ರಮಗಳು:-
* ಈ ಪರೀಕ್ಷೆ ಮಾಡಿಸುವ ಮುನ್ನ 12 ಗಂಟೆ ಮುಂಚಿತವಾಗಿ ಯಾವುದೇ ಆಹಾರವನ್ನು ಸೇವಿಸಿರಬಾರದು. ಅಂದರೆ ಖಾಲಿ ಹೊಟ್ಟೆಯಲ್ಲಿ ಪರೀಕ್ಷೆ ಮಾಡಿಸಬೇಕು. ಪ್ರೋಟೀನ್ ಅಂಶ ಇರದೇ ಇರುವ ಆಹಾರವನ್ನು ಸೇವಿಸಬೇಕು. ಆದರೆ ಅಂತಹ ಆಹಾರ ಯಾವುದೂ ಕೂಡ ಇಲ್ಲ. ಹೀಗಾಗಿ 12 ಗಂಟೆ ಕಾಲ ಯಾವ ಆಹಾರವನ್ನು ಸೇವಿಸಲೇ ಬಾರದು.
* ಹೆಚ್ಚು ನೀರನ್ನು ಕುಡಿಯಬಹುದು. ನೀರು ಕುಡಿಯುವುದರಿಂದ ಈ ಪರೀಕ್ಷೆಗೆ ಯಾವುದೇ ಸಮಸ್ಯೆ ಇಲ್ಲ.
*ಪರೀಕ್ಷೆಗಾಗಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲೂ ರಾತ್ರಿ ತುಂಬಾ ತಡರಾತ್ರಿವರೆಗೂ ಎದ್ದು ಊಟ ಮಾಡುವುದನ್ನು ಬಿಟ್ಟುಬಿಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾತ್ರಿ 11 ಗಂಟೆಗೆ ಆಹಾರ ಸೇವಿಸಿ ಬೆಳಗ್ಗೆ 11 ಗಂಟೆಗೆ ಪರೀಕ್ಷೆ ಮಾಡಿಸುವುದು ಉತ್ತಮವಲ್ಲ. ಇದರಿಂದ ನಿಖರವಾದ ಮಾಹಿತಿ ತಿಳಿಯುವುದಿಲ್ಲ. ರಾತ್ರಿ 9 ಗಂಟೆ ಒಳಗೆ ಊಟ ಮಾಡಿ ಬೆಳಗ್ಗೆ 9 ಗಂಟೆಯ ಒಳಗೆ ಪರೀಕ್ಷೆ ಮಾಡಿಸುವುದು ನಿಖರವಾದ ಫಲಿತಾಂಶವನ್ನು ನೀಡುತ್ತದೆ.
* ನಿಮಗೆ ಶುಗರ್ ಇರಲಿ ಇರದೇ ಇರಲಿ ರಾತ್ರಿ ಊಟದಲ್ಲಿ ಅನ್ನ, ಮುದ್ದೆ, ಚಪಾತಿ, ಕಾಳುಗಳನ್ನು ಬಳಸಬೇಡಿ. ಹಣ್ಣು, ತರಕಾರಿ, ಸೊಪ್ಪು ರಾತ್ರಿ ಊಟದಲ್ಲಿ ಹೆಚ್ಚಾಗಿರಬೇಕು.
* ನಿದ್ದೆ ತುಂಬಾ ಮುಖ್ಯ. ನಾಳೆ ಪರೀಕ್ಷೆ ಹೋಗಬೇಕು ಅನ್ನೋ ಗಾಬರಿ ಇರಬಾರದು. ಭಯ ಇರಬಾರದು. ಸಂಪೂರ್ಣವಾಗಿ ಎಂದಿನಂತೆ ನಿದ್ದೆ ಮಾಡುವುದು ಮುಖ್ಯ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡಿದಾಗಲೂ ಶುಗರ್ ಲೇವಲ್ ನಿಖರವಾಗಿ ಇರುವುದಿಲ್ಲ.
* ಒತ್ತಡ, ತಲೆ ನೋವು ಇದ್ದರೆ ಪರೀಕ್ಷೆ ಮಾಡಿಸಲೇಬೇಡಿ. ಹೀಗೆ ಮಾಡುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಪರೀಕ್ಷೆ ವರದಿ ನಿಖರವಾಗಿ ಬರುವುದಿಲ್ಲ.
* ಶುಗರ್ ಲೆಸ್ ಕಾಫಿ, ಟೀ, ಹಾಲು ಪರೀಕ್ಷೆಗೂ ಮುನ್ನ ಕುಡಿದು ಪರೀಕ್ಷೆ ಮಾಡಿಸಬಾರದು. ಯಾವುದೇ ಪಾನಿಯವನ್ನು ಪರೀಕ್ಷೆಗೂ ಮುನ್ನ ಕುಡಿಯಬಾರದು.
* ಎಫ್‌ಬಿಎಸ್ ಪರೀಕ್ಷೆ ಮಾಡಿಸುವ ಬೆಳಗ್ಗೆ ವ್ಯಾಯಾಮ, ವಾಕ್, ಎಕ್ಸಸೈಸ್ ಮಾಡಬೇಡಿ. ಇದರಿಂದಲೂ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಪರೀಕ್ಷೆ ವರದಿ ನಿಖರವಾಗಿ ಬರುವುದಿಲ್ಲ.
* ಜ್ವರ, ಕೆಮ್ಮು, ನಗಡಿ ಹೀಗೆ ಸರ್ನಣಪುಟ್ಟ ಕಾಯಿಲೆ ಇದ್ದಾಗಲೂ ಎಫ್‌ಬಿಎಸ್ ಪರೀಕ್ಷೆ ಮಾಡಿಸಬೇಡಿ. ಈ ಸಮಯದಲ್ಲಿ ಮಾಡಿಸಿದರೆ ನಿಖರವಾದ ಮಾಹಿತಿ ತಿಳಿಯಲು ಸಾಧ್ಯವಿಲ್ಲ.
* ಎಫ್‌ಬಿಎಸ್ ಪರೀಕ್ಷೆ ಸಮಯದಲ್ಲಿ ಯಾವುದೇ ಮಾತ್ರಗಳನ್ನೂ ತೆಗೆದುಕೊಳ್ಳಬಾರದು.
ಶುಗರ್ ಲೆವರ್ ಎಷ್ಟು ಇರಬೇಕು?
ದೇಹದಲ್ಲಿ ಶುಗರ್ ಲೆವಲ್ ಎಷ್ಟು ಇರಬೇಕು ಅನ್ನೋದರ ಗೊಂದಲ ಜನರಲ್ಲಿ ಇದೆ. ಒಂದೊಂದು ಲ್ಯಾಬ್ ಅಲ್ಲಿ ಒಂದೊಂದು ರೀತಿಯ ಪರೀಕ್ಷಾ ವರದಿಗಳು ಬಂದು ಜನರನ್ನು ಸಾಕಷ್ಟು ಗೊಂದಲಕ್ಕೆ ತಳ್ಳುತ್ತಿವೆ. ಶುಗರ್ ಲೆವಲ್ 70 ರಿಂದ 100 ಇದ್ದರೆ ನಾರ್ಮಲ್, 101-125 ಇದ್ದರೆ ರಿಸ್ಕ್, 126+ ಇದ್ದರೆ ಡಯಾಬಿಟೀಸ್ ಎಂದು ಹಲವಾರು ವೈದ್ಯರು ಹೇಳುತ್ತಾರೆ.
ಆದರೆ ಇಲ್ಲಿ 150ರವರೆಗೂ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. 150 ವರೆಗೂ ಇದು ನಾರ್ಮಲ್ ಎಂದು ದೇಹ ಸ್ವೀಕರ ಮಾಡುತ್ತದೆ. ಯಾವಾಗ ಇದು 150ಕ್ಕಿಂತ ಜಾಸ್ತಿ ಆಗುತ್ತೋ ಆಗ ದೇಹದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಅದನ್ನು ಕಂಟ್ರೋಲ್ ಮಾಡಬೇಕಾಗುತ್ತದೆ. ಅಗತ್ಯ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಶುಗರ್ ಲೆವಲ್ ತಿಳಿದ ಬಳಿಕ ಗಾಬರಿ ಆಗಬೇಡಿ. ಭಯ ಪಡಬೇಡಿ. ಚಿಂತೆ ಮಾಡುವುದನ್ನು ಬಿಟ್ಟು ಬಿಡಿ. ಗಂಭೀರವಾಗಿ ತೆಗೆದುಕೊಳ್ಳಬೇಡಿ. ಇದರಿಂದಲೂ ಶುಗರ್ ಲೆವಲ್ ಜಾಸ್ತಿಯಾಗುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಯಾವುದೇ ಪರೀಕ್ಷಾ ವರದಿ ಬಂದ ಬಳಿಕ ಗಾಬರಿಯಾಗದೇ ಇರುವುದು ತುಂಬಾ ಮುಖ್ಯ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ನುರಿತ ವೈದ್ಯರನ್ನು ಸಂಪರ್ಕಿಸಿ)
-
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications