Soaked Figs Anjeer Benefits: ಕೊಲೆಸ್ಟ್ರಾಲ್ ಕಡಿಮೆ ಮಾಡಲು.. ಒಣಗಿದ ಅಂಜೂರ ಹಣ್ಣು ಹಾಲಿನಲ್ಲಿ ನೆನೆಸಿ ತಿನ್ನಿ...!
ಒಣಗಿದ ಅಂಜೂರ ಹಣ್ಣುಗಳು ರುಚಿಯಲ್ಲಿ ಸಿಹಿಯಾಗಿರುತ್ತವೆ. ಅಲ್ಲದೆ ಅಂಜೂರದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವುದಿಲ್ಲ. ಇದು ಮಲ್ಬೆರಿ ಸಸ್ಯವರ್ಗಕ್ಕೆ ಸೇರಿದ ಸಸ್ಯವಾಗಿದ್ದು ಈ ಹಣ್ಣು ಸುಮಾರಾಗಿ ಮೋದಕದ ಆಕಾರವನ್ನು ಹೋಲುತ್ತದೆ.
ಹಸಿಯಾಗಿದ್ದಾಗ ಅತಿ ಮೃದುವಾಗಿದ್ದ ಈ ಹಣ್ಣು ಒಣಗಿದ ಬಳಿಕ ಕೊಂಚ ಗಟ್ಟಿಯೇ ಇರುತ್ತದೆ ಹಾಗೂ ಒಣಗಿನ ಬೀಜಗಳು ಸಹಾ ಗರಿಮುರಿಯಾಗಿರುತ್ತದೆ. ಹೆಚ್ಚಿನವರಿಗೆ ಇಷ್ಟು ಗಟ್ಟಿಯಾಗಿರುವ ಒಣಫಲವನ್ನು ಸೇವಿಸುವುದು ಇಷ್ಟವಾಗುವುದಿಲ್ಲ.

ಆದರೆ ರಾತ್ರಿಯಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ಸೇವಿಸಬಹುದು. ಇದನ್ನು ನಿಯಮಿತವಾಗಿ ಅನುಸರಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕೊಲೆಸ್ಟ್ರಾಲ್ ಇರುವವರು ಹಾಲಿನಲ್ಲಿ ನೆನೆಸಿಟ್ಟು ಈ ಹಣ್ಣನನ್ನು ತಿನ್ನಬಹುದು. ಇದು ಫೈಬರ್, ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆಯ ಸಮತೋಲನವನ್ನು ಹೊಂದಿರುತ್ತದೆ.
1. ರಕ್ತನಾಳಗಳಲ್ಲಿನ ಕೊಲೆಸ್ಟ್ರಾಲ್ ಕಡಿಮೆ: ನಿಮ್ಮ ಆಹಾರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ರಕ್ತನಾಳಗಳಲ್ಲಿ ಸೇರಿಕೊಳ್ಳುತ್ತದೆ. ಅಂಜೂರದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ದೇಹದಲ್ಲಿ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಹಲವಾರು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾದ ಅಂಶವೆಂದರೆ ಅಂಜೂರದಲ್ಲಿರುವ ಕ್ಲೋರೋಜೀನಿಕ್ ಆಮ್ಲ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.
2. ಒಣಗಿದ ಅಂಜೂರದಲ್ಲಿ ನೀರಿನಲ್ಲಿ ಕರಗುವ ಫೈಬರ್ ಇರುತ್ತದೆ. ಹಾಲಿನಲ್ಲಿ ನೆನೆಸಿದಾಗ, ಅವು ತುಂಬಾ ಆರೋಗ್ಯಕರ ರೀತಿಯಲ್ಲಿ ದೇಹವನ್ನು ಸೇರುತ್ತವೆ. ಹಾಲಿನೊಂದಿಗೆ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಅದು ಕರುಳನ್ನು ಶುದ್ಧೀಕರಿಸುತ್ತದೆ.. ಇದರಿಂದಾಗಿ ಕೊಲೆಸ್ಟ್ರಾಲ್ ದೇಹದಿಂದ ನೇರವಾಗಿ ಮಲಕ್ಕೆ ಹೋಗುತ್ತದೆ.

3. ಅಂಜೂರವು ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ಮಾತ್ರವಲ್ಲದೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಸ್ನಾಯು ಮತ್ತು ಮೂಳೆ ದೌರ್ಬಲ್ಯದಂತಹ ದೈಹಿಕ ದೌರ್ಬಲ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವುಗಳನ್ನು ನೇರವಾಗಿ ತಿನ್ನಬಹುದು. ನೀರಿನಲ್ಲಿ ನೆನೆಸುವುದರಿಂದ ಇದು ಉತ್ತಮ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಅಂಜೂರದ ಹಣ್ಣುಗಳನ್ನು ನೆನೆಸುವ ವಿಧಾನ
1. ಒಣಗಿದ ಅಂಜೂರ 2-4 ತುಂಡುಗಳನ್ನು ತೆಗೆದುಕೊಳ್ಳಿ.
2. ಸಣ್ಣ ಬೌಲ್ ಅನ್ನು ಅರ್ಧದಷ್ಟು ನೀರಿನಿಂದ ತುಂಬಿಸಿ. ಅದರಲ್ಲಿ ಅಂಜೂರ ತುಂಡುಗಳನ್ನು ನೆನೆಸಿಡಿ. ರಾತ್ರಿಯಿಡೀ ನೆನೆಯಲು ಬಿಡಿ.
3. ಬೆಳಿಗ್ಗೆ ಸ್ವಲ್ಪ ನೀರನ್ನು ಇದಕ್ಕೆ ಬೆರೆಸಿ
4. ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನಿರಿ. ಇದರೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಕೂಡ ಸೇರಿಸಬಹುದು.
ರಾತ್ರಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಆಗುವ ಕೆಲವು ಲಾಭಗಳು ಇಲ್ಲಿವೆ
1. ಮಲಬದ್ಧತೆ ಹೋಗಲಾಡಿಸಲು ಬೆಳಿಗ್ಗೆ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನಿರಿ. ಏಕೆಂದರೆ ಅಂಜೂರದಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಹ ಆರೋಗ್ಯಕರವಾಗಿರಿಸುತ್ತದೆ.
2. ಅಂಜೂರದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಆರೋಗ್ಯಕರ ಮೂಳೆಗಳಿಗೆ ಅವಶ್ಯಕವಾಗಿದೆ. ನಮ್ಮ ದೇಹ ಸ್ವತಃ ಕ್ಯಾಲ್ಸಿಯಂ ಅನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅನ್ನು ಒದಗಿಸುವ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.
3. ಅಂಜೂರದ ಹಣ್ಣುಗಳು ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ, ವಿಶೇಷವಾಗಿ ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅಂಜೂರ ಉತ್ತಮ ಆಹಾರವಾಗಿದೆ. ಬೆಳಿಗ್ಗೆ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದು ಊಟದ ನಡುವೆ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ.
4. ಅಂಜೂರ ಕ್ಲೋರೊಜೆನಿಕ್ ಆಮ್ಲ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ಅಥವಾ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವವರಿಗೆ ಅಂಜೂರ ಉತ್ತಮವಾಗಿದೆ.
5. ಅಂಜೀರಿನಲ್ಲಿರುವ ಸತು, ಮ್ಯಾಂಗನೀಸ್, ಮೆಗ್ನೀಸಿಯಮ್, ಕಬ್ಬಿಣ ಇತ್ಯಾದಿ ಖನಿಜಗಳು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿನ್ನುವುದರಿಂದ ನಿಮ್ಮ ದೇಹವನ್ನು ಹಾರ್ಮೋನ್ ಅಸಮತೋಲನ ಮತ್ತು ಮೆನೋಪಾಸ್ ನಂತರದ ಸಮಸ್ಯೆಗಳಿಂದ ರಕ್ಷಿಸುತ್ತದೆ. ಅಂಜೂರವು PMS ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.












Click it and Unblock the Notifications