ಇವುಗಳಲ್ಲಿ ಒಂದನ್ನು ಮನೆ ಬಾಗಿಲಲ್ಲಿ ಇಟ್ಟರೆ ನಿಮ್ಮ ಮನೆಗೆ ರಾಜಯೋಗ!
ಮನೆಗೆ ಧನಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತರಲು ಯಾವುದನ್ನು ಇಡಬೇಕು ಮತ್ತು ಯಾವ ವಸ್ತುವನ್ನು ಇಡಬಾರದು ಎಂಬುದರ ಕುರಿತು ಜ್ಞಾನ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ಅತ್ಯಂತ ಹಳೆಯ ಭಾರತೀಯ ವಾಸ್ತುಶಿಲ್ಪ ವ್ಯವಸ್ಥೆಗಳಲ್ಲಿ ವಾಸ್ತು ಒಂದಾಗಿದೆ.
ಮನೆಯಲ್ಲಿರುವ ಕೆಲವು ವಸ್ತುಗಳು ನಮ್ಮ ಆರೋಗ್ಯ ಮತ್ತು ಅದೃಷ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಾಸ್ತು ವಿವರಿಸುತ್ತದೆ. ಅದರ ಪ್ರಕಾರ ಕೆಲವು ವರ್ಣಚಿತ್ರಗಳನ್ನು ಮನೆಯೊಳಗೆ ಅಥವಾ ಪ್ರವೇಶದ್ವಾರದ ಬಳಿ ಇರಿಸಬೇಕೆಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಹಾಗಾದರೆ ವರ್ಣಚಿತ್ರಗಳನ್ನು ನೀವು ಯಾವ ದಿಕ್ಕಿನಲ್ಲಿ ಇರಿಸಬೇಕು ಮತ್ತು ಮನೆಯಲ್ಲಿ ಧನಾತ್ಮಕತೆಯನ್ನು ಸುಧಾರಿಸಲು ಅವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಯೋಣ.
ಸರಸ್ವತಿಯ ಫೋಟೋ
ದೇವಿ ಸರಸ್ವತಿಯನ್ನು ಬುದ್ಧಿವಂತಿಕೆಯ ದೇವತೆ ಎಂದು ಕರೆಯಲಾಗುತ್ತದೆ. ಪ್ರವೇಶದ್ವಾರದಲ್ಲಿ ಆಕೆಯ ಚಿತ್ರ ಅಥವಾ ಪೇಂಟಿಂಗ್ ಅನ್ನು ಇರಿಸುವುದು ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ತರಲು ಒಂದು ಉತ್ತಮ ಮಾರ್ಗವಾಗಿದೆ. ಅವರ ಪೇಂಟಿಂಗ್ ಅನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡಬೇಕು ಮತ್ತು ಪೇಂಟಿಂಗ್ ಮೇಲೆ ಧೂಳು ಸೇರದಂತೆ ಎಚ್ಚರಿಕೆ ವಹಿಸಬೇಕು.
ಈ ಚಿತ್ರಕಲೆಯು ಮನೆಯ ಮಕ್ಕಳು ಮತ್ತು ಹಿರಿಯರಿಗೆ ಜ್ಞಾನ ಮತ್ತು ಬುದ್ಧಿವಂತಿಕೆಯ ಕಡೆಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಮನೆಯೊಳಗೆ ಶಾಂತಿಯ ಭಾವವನ್ನು ಹರಡುತ್ತದೆ.
ಗರುಡನ ಚಿತ್ರಕಲೆ
ಗರುಡನ ವರ್ಣಚಿತ್ರ ಮನೆಗೆ ದೈವಿಕ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಅಥವಾ ಪ್ರವೇಶದ್ವಾರದಲ್ಲಿ ನೇತುಹಾಕಿದರೆ ತುಂಬಾ ಒಳ್ಳೆಯದು. ಆದರೆ ಈ ವರ್ಣಚಿತ್ರದ ಮೇಲೆ ಯಾವುದೇ ಕಲೆಗಳಾಗದಂತೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.
ಗರುಡನನ್ನು ಶಕ್ತಿ ಮತ್ತು ರಕ್ಷಣೆಯ ಸಂಕೇತವೆಂದು ಹೇಳಲಾಗುತ್ತದೆ. ಗರುಡನ ವರ್ಣಚಿತ್ರ ಮನೆಯನ್ನು ರಕ್ಷಿಸುತ್ತದೆ. ಗರುಡನ ಕಾವಲು ನೋಟ ಮನೆಯನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ.
'ಟ್ರೀ ಆಫ್ ಲೈಫ್' ಚಿತ್ರಕಲೆ
'ಟ್ರೀ ಆಫ್ ಲೈಫ್' ಪೇಂಟಿಂಗ್ ಅನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಚಿತ್ರಕಲೆ ಸಮತೋಲನ ಮತ್ತು ಸಮೃದ್ಧಿಯ ಸಂಕೇತವಾಗಿದೆ. ನಿಮ್ಮ ಮನೆಯ ಒಳಾಂಗಣಕ್ಕೆ ಪ್ರಕೃತಿಯ ಸೊಬಗನ್ನು ತರುತ್ತದೆ.
'ಟ್ರೀ ಆಫ್ ಲೈಫ್' ನ ಶಾಖೆಗಳು ಬೆಳವಣಿಗೆಯ ಕಥೆಗಳನ್ನು ಹೇಳುತ್ತವೆ. ಆದರೆ ಬೇರುಗಳು ಕುಟುಂಬದ ಯೋಗಕ್ಷೇಮವನ್ನು ನೀಡುತ್ತವೆ ಎಮದು ನಂಬಲಾಗುತ್ತದೆ. ಸಾಮರಸ್ಯದ ಭಾವವನ್ನು ತೋರಿಸುವ ಈ ವರ್ಣಚಿತ್ರ ಕೇವಲ ಮನೆಯ ಅಲಂಕಾರಕ್ಕಿಂತ ಹೆಚ್ಚಾಗಿ ಜೀವನದ ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.
ಗಣೇಶನ ಚಿತ್ರಕಲೆ
ಭಗವಾನ್ ಗಣೇಶನು ಅಡೆತಡೆಗಳನ್ನು ನಿವಾರಿಸುತ್ತಾನೆ. ಸಮೃದ್ಧಿಯನ್ನು ನೀಡುತ್ತಾನೆ ಎಂದು ಆರಾಧಿಸಲಾಗುತ್ತದೆ. ಹಾಗಾಗಿ ಗಣೇಶನ ವಿಗ್ರಹವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಅಥವಾ ಮನೆಯ ಪ್ರವೇಶದ್ವಾರದಲ್ಲಿ ಇಡುವುದು ಉತ್ತಮ.
ಗಣೇಶನ ವರ್ಣಚಿತ್ರ ಕೇವಲ ಅಲಂಕಾರಿಕ ವಸ್ತುವಲ್ಲ. ಅದು ಆಶೀರ್ವದಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಗಣೇಶನ ಚಿತ್ರಕಲೆ ಅಥವಾ ಪ್ರತಿಮೆಯನ್ನು ಹೊಂದಿದ್ದರೆ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯಬಹುದು.
ಕಮಲದ ಚಿತ್ರಕಲೆ
ಮನೆಯ ಪ್ರವೇಶ ದ್ವಾರದಲ್ಲಿ ಕಮಲದ ವರ್ಣಚಿತ್ರವನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಕಮಲ ಶುದ್ಧತೆ ಮತ್ತು ಅನುಗ್ರಹದ ಸಂಕೇತವಾಗಿದೆ. ಈ ಚಿತ್ರಕಲೆ ನಿಮ್ಮ ಮನೆಯಲ್ಲಿ ಸಾಮರಸ್ಯ, ಸಂಪತ್ತು ಮತ್ತು ಧನಾತ್ಮಕ ಶಕ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕಮಲದ ಕೋಮಲ ದಳಗಳನ್ನು ನಿಮ್ಮ ಮನೆಯೊಳಗೆ ಇರಿಸಿದಾಗ, ನಿಮ್ಮ ಮನೆಯ ವಾತಾವರಣದಲ್ಲಿ ಶಾಂತಿಯುತ ಭಾವನೆ ನೀಡುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)
-
ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications