Get Updates
Get notified of breaking news, exclusive insights, and must-see stories!

ನಿಮ್ಮ ವ್ಯಾಪಾರ ರೈಲಿನಂತೆ ವೇಗವಾಗಬೇಕಾ? ಇದೊಂದು ನವಿಲು ಗರಿ ಸಾಕು...

ಮನೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಇದು ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಆದರೆ ಇದನ್ನು ಇಡುವ ಸ್ಥಳದ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಆದ್ದರಿಂದ ಅವುಗಳನ್ನು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಮನೆಯಲ್ಲಿ ಇರಿಸುವುದು ತುಂಬಾ ಮುಖ್ಯ.

ಲಕ್ಷ್ಮಿದೇವಿ ಆಶೀರ್ವಾದ

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಕುಟುಂಬದಲ್ಲಿನ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ ಮತ್ತು ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ಆಕೆ ಮನೆಯಲ್ಲಿರುವ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತಾಳೆ. ಹೀಗಾಗಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನವಿಲು ಗರಿಗಳನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು.

Vastu tips benefits of peacock feather for profit in business or happiness in family

ವ್ಯವಹಾರದಲ್ಲಿ ಅದೃಷ್ಟ

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಅಂಗಡಿಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ವ್ಯಾಪಾರವು ರೈಲಿನಂತೆ ವೇಗವನ್ನು ಪಡೆದುಕೊಳ್ಳುತ್ತದೆ. ಇದಕ್ಕಾಗಿ ಮೊದಲು ಅಂಗಡಿಯ ಮುಖ್ಯ ದ್ವಾರದಲ್ಲಿ ನವಿಲು ಗರಿಯನ್ನು ಕಟ್ಟಬೇಕು. ಇದಲ್ಲದೇ ಅಂಗಡಿಯ ಬಾಗಿಲಲ್ಲಿ ಒಂದು ನವಿಲು ಗರಿಯನ್ನು ಇಡಬೇಕು ಮತ್ತು ಎರಡು ನವಿಲು ಗರಿಗಳನ್ನು ಚೌಕಟ್ಟು ಮಾಡಿ ಅಂಗಡಿಯ ಪೂರ್ವ ದಿಕ್ಕಿನಲ್ಲಿ ನೇತು ಹಾಕಬೇಕು. ಇದಲ್ಲದೇ ಅಂಗಡಿಯ ಪೂಜಾ ಸ್ಥಳದಲ್ಲಿ ನವಿಲು ಗರಿ ಇಡಬೇಕು. ಹೀಗೆ ಮಾಡಿದಲ್ಲಿ ಕೆಲವೇ ದಿನಗಳಲ್ಲಿ ನೀವು ನಿಮ್ಮ ವ್ಯವಹಾರದಲ್ಲಿ ಲಾಭವನ್ನು ಕಾಣಲು ಪ್ರಾರಂಭಿಸುತ್ತೀರಿ.

ದುಷ್ಟ ಕಣ್ಣಿನಿಂದ ಕುಟುಂಬ ರಕ್ಷಣೆ

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮಗು ಮತ್ತು ಕುಟುಂಬವನ್ನು ದುಷ್ಟ ಕಣ್ಣಿನಿಂದ ರಕ್ಷಿಸಲು ನವಿಲು ಗರಿಗಳು ತುಂಬಾ ಪ್ರಯೋಜನಕಾರಿಯಾಗಿವೆ. ಇದಕ್ಕಾಗಿ ತಾಯಿತದಲ್ಲಿ ನವಿಲು ಗರಿಗಳನ್ನು ಹಾಕಿ ಮಗುವಿಗೆ ಹಾಕಿ. ಇದು ನಿಮ್ಮ ಮಗುವನ್ನು ದುಷ್ಟ ಕಣ್ಣುಗಳು ಮತ್ತು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.

ವೈವಾಹಿಕ ಸಂಬಂಧದಲ್ಲಿ ಉತ್ತಮ

ನಿಮ್ಮ ಸಂಬಂಧದಲ್ಲಿ ಎಲ್ಲವೂ ಸರಿಯಾಗಿ ಇಲ್ಲದಿದ್ದರೆ ನೀವು ಮನೆಯಮಲಗುವ ಕೋಣೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಬಹುದು. ಇದು ನಿಮ್ಮ ಸಂಬಂಧವನ್ನು ಸರಿಪಡಿಸುತ್ತದೆ. ಜೊತೆಗೆ ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಇದನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು.

vVastu tips benefits of peacock feather for profit in business or happiness in family

ಗ್ರಹಗಳ ಸ್ಥಿತಿಯಿಂದಾಗುವ ತೊಂದರೆ ನಿವಾರಣೆ

ಗ್ರಹಗಳ ಸ್ಥಿತಿಯಿಂದ ನೀವು ತುಂಬಾ ತೊಂದರೆಗೀಡಾಗಿದ್ದರೆ ಅದನ್ನು ನಿಭಾಯಿಸಲು ನವಿಲು ಗರಿಗಳು ನಿಮಗೆ ಸಹಾಯ ಮಾಡುತ್ತವೆ. ಇದಕ್ಕಾಗಿ ನಿತ್ಯ ಗ್ರಹ ಮಂತ್ರವನ್ನು 21 ಬಾರಿ ಪಠಿಸಿ ಮತ್ತು ನವಿಲು ಗರಿಗಳ ಮೇಲೆ ನೀರನ್ನು ಸಿಂಪಡಿಸಿ, ಅದನ್ನು ಮನೆಯನ್ನು ಇರಿಸಿಕೊಳ್ಳಿ. ಪ್ರತಿಯೊಬ್ಬರೂ ನೋಡಬಹುದಾದ ಸ್ಥಳದಲ್ಲಿ ಇದನ್ನು ಇಡಿ. ನೀವು ನವಿಲು ಗರಿಯನ್ನು ಪೂಜಾ ಸ್ಥಳದಂತಹ ಮಂಗಳಕರ ಸ್ಥಳದಲ್ಲಿ ಇಡುವುದು ಉತ್ತಮ. ಈ ಪರಿಹಾರದಿಂದ ನಿಮ್ಮ ಸಮಸ್ಯೆ ಕೆಲವೇ ದಿನಗಳಲ್ಲಿ ದೂರವಾಗುತ್ತದೆ.

ರಾಹು ದೋಷದಿಂದ ಪರಿಹಾರ

ರಾಹುವಿನ ದೋಷದಿಂದ ನಿಮಗೆ ತೊಂದರೆಯಾಗಿದ್ದರೆ ನವಿಲು ಗರಿಗಳು ಇದಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ನವಿಲು ಗರಿಯನ್ನು ಮನೆಯ ಪೂರ್ವ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಿಸಿ, ಈ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಡುವುದರಿಂದ ನವಿಲು ರಾಹು ಮನೆಗೆ ಪ್ರವೇಶಿಸುವುದಿಲ್ಲ.

ಕಾಲಸರ್ಪ್ ದೋಷದಿಂದ ಮುಕ್ತಿ

ಕಾಲಸರ್ಪ್ ದೋಷವನ್ನು ಹೊಂದಿರುವ ವ್ಯಕ್ತಿಯ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿರುತ್ತದೆ. ಅಂತವರು ದಿಂಬಿನ ಕೆಳಗೆ ನವಿಲು ಗರಿಯನ್ನು ಇಟ್ಟುಕೊಳ್ಳುವುದರಿಂದ ಕಾಲಸರ್ಪ್ ದೋಷದಿಂದ ಶೀಘ್ರ ಪರಿಹಾರ ಸಿಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+