Turmeric Milk Benefits: ಮಳೆಗಾಲದಲ್ಲಿ ಮನೆ ಮದ್ದು: ಅರಿಶಿನ ಹಾಲಿನ ಆರೋಗ್ಯಕರ ಪ್ರಯೋಜನಗಳನ್ನು ಬಲ್ಲಿರಾ?
ಮಳೆಗಾಲ ಶುರುವಾಗುತ್ತಿದೆ. ಈ ಸಮಯದಲ್ಲಿ ಶೀತ, ಕೆಮ್ಮು, ಗಂಟಲು ನೋವಿನಂತಹ ಸಾಂಕ್ರಾಮಿಕ ರೋಗಗಳು ಬರುವುದು ಸಾಮಾನ್ಯ. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯವಾಗಿರಲು ಉತ್ತಮ ಆಹಾರ ಅಗತ್ಯ. ಸಣ್ಣಪುಟ್ಟ ವಿಷಯಗಳತ್ತ ಗಮನ ಹರಿಸುವುದರಿಂದ ನೆಗಡಿ, ಕೆಮ್ಮು, ಜ್ವರದಂತಹ ಅನೇಕ ಸಮಸ್ಯೆಗಳನ್ನು ತಡೆಯಬಹುದು. ಹಾಗಾದರೆ ಮಳೆಗಾಲದಲ್ಲಿ ಅರಿಶಿನ ಹಾಲು ಕುಡಿಯುವುದರ ಹಿಂದಿನ ಆರೋಗ್ಯಕರ ಪ್ರಯೋಜನಗಳು ಏನು ಎಂದು ತಿಳಿಯೋಣ.
ಮಳೆಗಾಲದಲ್ಲಿ ಜನರು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅನೇಕ ಮನೆ ಮದ್ದುಗಳನ್ನು ತಯಾರಿಸಿ ಸೇವಿಸುತ್ತಾರೆ. ಈ ಪೈಕಿ ಅರಿಶಿಣ ಹಾಲು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಅರಿಶಿನದ ಹಾಲು ಶೀತವನ್ನು ಗುಣಪಡಿಸಿ ದೇಹದ ಗಾಯಗಳನ್ನು ವಾಸಿಮಾಡುತ್ತದೆ. ಹಾಗಾದರೆ ಮಳೆಗಾಲದಲ್ಲಿ ಅರಿಶಿನದ ಹಾಲನ್ನು ಕುಡಿಯುವುದು ಎಷ್ಟು ಒಳ್ಳೆಯದು? ಇದು ನಿಜವಾಗಿಯೂ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆಯೇ? ಹಾಗಿದ್ದಲ್ಲಿ ಅರಿಶಿನದ ಹಾಲನ್ನು ಯಾವಾಗ ಕುಡಿಯುವುದು ಒಳ್ಳೆಯದು? ಎಂದು ತಿಳಿಯೋಣ.
ಅರಿಶಿನ ಹಾಲಿನ ಆರೋಗ್ಯ ಪ್ರಯೋಜನಗಳು:
1. ಅರಿಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರಿಶಿನವು ಕರ್ಕ್ಯುಮಿನ್ ಮತ್ತು ಫ್ಲೇವನಾಯ್ಡ್‌ಗಳಲ್ಲಿ ಸಮೃದ್ಧವಾಗಿದೆ. ಇದು ಶೀತ ಮತ್ತು ಜ್ವರವನ್ನು ತಡೆಯುವುದು ಮಾತ್ರವಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅರಿಶಿನದಲ್ಲಿ ಪ್ರತಿಜೀವಕ, ನಂಜುನಿರೋಧಕ ಮತ್ತು ಗುಣಪಡಿಸುವ ಗುಣಗಳು ಇರುವುದರಿಂದ ಇದರ ಸೇವನೆ ದೇಹಕ್ಕೆ ಉಪಯುಕ್ತವಾಗಿದೆ.
2. ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾವುದೇ ಗಾಯವನ್ನು ಅರಿಶಿನ ಹಾಲಿನಿಂದ ಗುಣಪಡಿಸಬಹುದು. ಅರಿಶಿನ ಹಾಲಿನ ಪ್ರಮುಖ ಅಂಶವೆಂದರೆ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
3. ಅರಿಶಿನ ದೇಹವನ್ನು ಬೆಚ್ಚಗಿಡುತ್ತದೆ. ಅರಿಶಿನದ ಹಾಲನ್ನು ಯಾವುದೇ ಋತುವಿನಲ್ಲಿ ಸೇವಿಸಬಹುದು. ಆದರೆ ಬೇಸಿಗೆಯಲ್ಲಿ ಮಿತವಾಗಿ ಸೇವಿಸಬೇಕು.
4. ಅರಿಶಿನ ಹಾಲು ತೆಗೆದುಕೊಳ್ಳುವುದು ಹೇಗೆ? ಒಂದು ಲೋಟ ಹಾಲಿಗೆ ಚಿಟಿಕೆ ಅರಿಶಿನ ಮತ್ತು ಕರಿಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದು ಉತ್ತಮ. ಮಲಗುವಾಗ ಅರಿಶಿನದ ಹಾಲನ್ನು ಕುಡಿಯಿರಿ. ದಿನಕ್ಕೆ ಒಮ್ಮೆ ಕುಡಿದರೆ ಸಾಕು.. ನೆನಪಿಡಬೇಕಾದ ಅಂಶವೆಂದರೆ ಅರಿಶಿನವನ್ನು ಎಂದಿಗೂ ನೀರಿನೊಂದಿಗೆ ತೆಗೆದುಕೊಳ್ಳಬಾರದು.

ಹಾಗೆ ಮಾಡುವುದರಿಂದ ಒಳ್ಳೆಯದಕ್ಕೆ ಬದಲಾಗಿ ಹಾನಿಯಾಗುತ್ತದೆ. ಅರಿಶಿನವನ್ನು ಅತಿಯಾಗಿ ಸೇವಿಸುವುದರಿಂದ ಕೆಲವು ತೊಂದರೆಗಳು ಉಂಟಾಗಬಹುದು. ನಿರ್ದಿಷ್ಟ ಪ್ರಮಾಣದ ಸೇವನೆಯು ದೇಹಕ್ಕೆ ಪ್ರಯೋಜನಕಾರಿಯಾಗಿದೆ.
5. ರಾತ್ರಿ ಮಲಗುವ ಮುನ್ನ ಒಂದು ಲೋಟ ಅರಿಶಿನ ಹಾಲನ್ನು ಕುಡಿಯುವುದರಿಂದ ಖಿನ್ನತೆ, ಆತಂಕ, ಒತ್ತಡ ಇತ್ಯಾದಿಗಳು ಕಡಿಮೆಯಾಗುತ್ತವೆ. ಅರಿಶಿನದ ಹಾಲು ನಮ್ಮ ನರಮಂಡಲವನ್ನು ಸಡಿಲಗೊಳಿಸಿ ಶಕ್ತಿಯುತವಾಗಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.
6. ಗೋಲ್ಡನ್ ಮಿಲ್ಕ್ ಎಂದೂ ಕರೆಯಲ್ಪಡುವ ಅರಿಶಿನ ಹಾಲು ಸ್ನಾಯು ಮತ್ತು ಕೀಲು ನೋವಿಗೆ ನೈಸರ್ಗಿಕ ನೋವು ನಿವಾರಕವಾಗಿದೆ. ಅರಿಶಿನ ಹಾಲಿನ ದೈನಂದಿನ ಸೇವನೆಯು ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್, ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಹೃದಯ ಕಾಯಿಲೆಗಳಂತಹ ಅಪಾಯಕಾರಿ ಸಮಸ್ಯೆಗಳನ್ನು ತಡೆಯುತ್ತದೆ.
7. ಅಲ್ಲದೆ ಹಾಲಿನಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದರಿಂದ ಚರ್ಮದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಇದು ಚರ್ಮಕ್ಕೆ ಕಾಂತಿಯುತ ಬಣ್ಣವನ್ನು ನೀಡುತ್ತದೆ. ಅಲ್ಲದೆ, ಈ ಅರಿಶಿನದ ಹಾಲನ್ನು ಕುಡಿಯುವುದರಿಂದ ಯೌವನದ ನೋಟವನ್ನು ಪಡೆಯುವುದಲ್ಲದೆ ಚರ್ಮದ ಮೇಲಿನ ತುರಿಕೆ ಮತ್ತು ಗಡ್ಡೆಗಳನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ಜೊತೆಗೆ ಮೃದುವಾದ ನೋಟವನ್ನು ನೀಡುತ್ತದೆ.
8. ಪೌಷ್ಟಿಕತಜ್ಞರ ಪ್ರಕಾರ, ಅರಿಶಿನ ಹಾಲು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಅರಿಶಿನ ಹಾಲನ್ನು ಕುಡಿಯಬಾರದು. ಯಾವುದೇ ಅಡ್ಡ ಪರಿಣಾಮಗಳಿಲ್ಲದಿದ್ದರೂ, ಕೆಲವರಿಗೆ ಹಾಲಿನಿಂದ ಅಲರ್ಜಿ ಉಂಟಾಗಬಹುದು.
ಕೆಲವೊಮ್ಮೆ ಅರಿಶಿನ ಹಾಲಿನಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಯ ಸಮಸ್ಯೆಯೂ ಕಂಡುಬರುತ್ತದೆ. ಅರಿಶಿನ ಹಾಲನ್ನು ಸೇವಿಸಿದ ನಂತರ ನಿಮಗೆ ಸಮಸ್ಯೆಗಳಿದ್ದರೆ, ತಕ್ಷಣವೇ ಅದನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ.
-
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral












Click it and Unblock the Notifications