Tomato Bath Recipe: ಟೊಮ್ಯಾಟೋ ಬಾತ್ ತಯಾರಿಸಿ.... ಮನೆಯವರ ಮನ್‌ ಕಿ ಬಾತ್ ಕೇಳಿ

ಹಬ್ಬ ಬಂತು... ಹಬ್ಬದ ತಯಾರಿಯಲ್ಲಿ ಎಲ್ಲಾ ಗೃಹಿಣಿಯರು ಫುಲ್ ಬ್ಯೂಸಿ ಆಗಿರುತ್ತೀರಿ. ಸಿಹಿ ತಿನಿಸು, ಖಾರದ ತಿಂಡಿ, ಹಬ್ಬದ ಊಟಕ್ಕೆ ಬೇಕಾದ ತಯಾರಿಯಲ್ಲಿ ನೀವೆಲ್ಲಾ ಫುಲ್ ಬ್ಯೂಸಿ ಅಂತ ನಮಗೆ ಗೊತ್ತು. ಹಾಗಂತ ನೀವು ಊಟ ಮಾಡುವುದನ್ನು ಬಿಡಬೇಡಿ.

ಅಯ್ಯೋ ಹಬ್ಬ ಮುಗಿಯೋವರೆಗೂ ನಮಗೆ ನಿತ್ಯದ ಅಡುಗೆ ಮಾಡಲು ಪುರುಸೊತ್ತಿಲ್ಲ ಅನ್ನೋರಿಗೆ ನಾವೊಂದು ಸುಲಭವಾದ ಹಾಗೂ ರುಚಿಕರ ಆಹಾರ ತಯಾರಿಸುವುದನ್ನು ಹೇಳಿ ಕೊಡುತ್ತೇವೆ. ಅದುವೇ ಟೊಮ್ಯಾಟೋ ಬಾತ್..

Tomato Bath Recipe Know How to Make Mouth-Watering Tasty Tomato Rice in Kannada

ಸಾಮಾನ್ಯವಾಗಿ ನೀವು ಮನೆಯಲ್ಲಿ ಟೊಮ್ಯಾಟೋ ಬಾತ್‌ ಅನ್ನು ತಯಾರಿಸಿರುತ್ತೀರಿ. ಆದರೆ ಇದರ ಚಟ್ನಿಯನ್ನು ಇನ್ನಷ್ಟು ರುಚಿಯೊಂದಿಗೆ ನಿಮಗೆ ಬೇಕಾದಾಗ ನೆಂಚಿಕೊಳ್ಳಲು ಶೇಖರಣೆ ಮಾಡಿಟ್ಟುಕೊಳ್ಳುವಂತೆ ತಯಾರಿಸುವುದು ಹೇಗೆ ಅನ್ನೊದನ್ನು ಈಗ ನೋಡೋಣ. ಇದನ್ನು ನೀವು ಅನ್ನ ಮಾತ್ರವಲ್ಲ, ಪೂರಿ, ರೊಟ್ಟಿ, ಚಪಾತಿ, ದೋಸೆ ಕೂಡ ತಿನ್ನಬಹುದು. ಹಾಗಾದರೆ ಇದನ್ನು ಮನೆಯಲ್ಲಿ ಒಂದು ಬಾರಿ ತಯಾರಿಸಿ ನೋಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ತಯಾರಿಸಲು ಬೇಕಾಗುವ ಪದಾರ್ಥಗಳು:

* ಅಕ್ಕಿ ಕಾಲು ಕೆಜಿ

* ಟೊಮ್ಯಾಟೋ 5-6

* ಈರುಳ್ಳಿ 1

* ಖಾರದಪುಡಿ 2 ಚಮಚ

* ಅರಿಶಿಣ ಚಿಟಿಕೆಯಷ್ಟು

* ಉಪ್ಪು ರುಚಿಗೆ

* ಕಾಳುಮೆಣಸು 4

* ಲವಂಗ 2

* ಕರಿಬೇವು ಸ್ವಲ್ಪ

* ಕೊತ್ತಂಬರಿ ಸ್ವಲ್ಪ

* ಎಣ್ಣೆ 15 ಟೇಬಲ್ ಸ್ಪೂನ್ ಎಣ್ಣೆ

* ಜೀರಿಗೆ ಕಾಲು ಸ್ಪೂನ್

* ಸಾಸಿವೆ ಕಾಲು ಸ್ಪೂನ್

ಮಾಡುವ ವಿಧಾನ:

* ಮೊದಲಿಗೆ ಅನ್ನವನ್ನು ಮಾಡಿಕೊಳ್ಳಿ

* ಒಂದು ಪಾತ್ರೆಯನ್ನು ಗ್ಯಾಸ್‌ ಮೇಲೆ ಇಟ್ಟು ಸಣ್ಣ ಉರಿ ಇಡಿ. ಇದಕ್ಕೆ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿ ಮಾಡಲು ಬಿಡಿ.

* ಎಣ್ಣೆ ಬಿಸಿ ಆದ ನಂತರ ಸಾಸಿವೆ, ಜೀರಿಗೆ ಹಾಕಿ ಚಟಪಟ ಅನ್ನೋವರೆಗೆ ಬಿಡಿ.

* ನಂತರ ಇದಕ್ಕೆ ಇರುಳ್ಳಿ ಹಾಕಿ ಸ್ವಲ್ಪ ಕೆಂಪಾಗುವವರೆಗೆ ಹುರಿಯಿರಿ.

* ಒಂದು ಮಿಕ್ಸಿ ಜಾರ್‌ಗೆ ಟೊಮ್ಯಾಟೋ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ಈ ಪೇಸ್ಟ್ ಅನ್ನು ಒಗ್ಗರಣೆಗೆ ಹಾಕಿ ಹಸಿ ವಾಸನೆ ಹೋಗಿ ಎಣ್ಣೆ ಮೇಲೆ ತೇಲುವವರೆಗೂ ಬಿಡಿ.

* ನಂತರ ಇದಕ್ಕೆ ಅರಿಶಿಣ, ಉಪ್ಪು, ಖಾರದಪುಡಿ ಹಾಕಿ ಚೆನ್ನಾಗಿ ಕದಡಿ

* ಕರಿಬೇವು, ಕೊತ್ತೊಂಬರಿ ಸೊಪ್ಪು, ಲವಂಗ, ಕಾಳುಮೆಣಸು ಹಾಕಿ ಚೆನ್ನಾಗಿ ಕಲಸಿ. (ಬೇಕಿದ್ದಲ್ಲಿ ಹಸಿ ಬಟಾಣಿ ಕೂಡ ಹಾಕಿಕೊಳ್ಳಬಹುದು)

* ಸ್ವಲ್ಪ ಹೊತ್ತು ಬಿಡಿ.. ಇದರಲ್ಲಿ ಸ್ವಲ್ಪ ಚಟ್ನಿಯನ್ನು ತೆಗೆದಿಟ್ಟುಕೊಳ್ಳಿ.

* ಇಳಿದ ಚಟ್ನಿಯಲ್ಲಿ ರೈಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸಣ್ಣ ಉರಿಯಲ್ಲಿ ಬಿಟ್ಟುಬಿಡಿ.

(ಈ ಚಟ್ನಿಯನ್ನು ನೀವು ಕೆಲ ದಿನಗಳವರೆಗೆ ಶೇಖರಿಸಿಟ್ಟುಕೊಳ್ಳಬಹುದು. ಬೇಕಾದಾಗ ಇದನ್ನು ಅನ್ನ, ದೋಸೆ, ಪೂರಿ ಹಾಗೂ ಚಪಾತಿ ಜೊತೆಗೂ ತಿನ್ನಬಹುದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+