ಬೇಯಿಸಿದಾಗ ಮೊಟ್ಟೆ ಒಡೆಯುತ್ತಾ? ಹಾಗಾದರೆ ಈ ಪದಾರ್ಥವನ್ನು ಸೇರಿಸಿ ಕುದಿಸಿ...
ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಯಿಸಿದ ಮೊಟ್ಟೆಗಳು ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರ ಭಕ್ಷ್ಯಗಳಲ್ಲಿ ಒಂದಾಗಿದೆ. ಬಹುತೇಕ ಜನ ಮೊಟ್ಟೆಯನ್ನು ಬೇಯಿಸಿ ಅಥವಾ ಹುರಿದು ತಿನ್ನುತ್ತಾರೆ. ಮೊಟ್ಟೆಯಿಂದ ನಾನಾ ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ ಮಸಾಲೆಯುಕ್ತ ಪದಾರ್ಥಗಳನ್ನು ಬೆರೆಸಿ ಮಾಡುವ ಮೊಟ್ಟೆಯನ್ನು ತಿನ್ನುವುದಕ್ಕಿಂತ ಕುದಿಸಿ ತಿನ್ನುವ ಮೊಟ್ಟೆ ಹೆಚ್ಚು ಆರೋಗ್ಯಕರ.
ಆದರೆ ಮನೆಯಲ್ಲಿ ಮೊಟ್ಟೆ ಕುದಿಸುವಾಗ ಅನೇಕ ಸಮಸ್ಯೆಗಳನ್ನ ನೀವೆಲ್ಲಾ ಎದುರಿಸುತ್ತೀರಿ. ಹೀಗಾಗಿ ಮೊಟ್ಟೆಗಳನ್ನು ಕುದಿಸುವುದು ತುಂಬಾ ಕಷ್ಟದ ಕೆಲಸ. ಮೊಟ್ಟೆಗಳನ್ನು ಕುದಿಸುವಾಗ ಒಡೆದು ಹೋಗುವುದು ಅಥವಾ ಸರಿಯಾಗಿ ಬೇಯದೇ ಇರುವುದು ಸಾಮಾನ್ಯ ಸಮಸ್ಯೆಯಾಗಿದೆ.

ಮೊಟ್ಟೆಗಳ ಬಿರುಕುಗಳಿಂದ ಮೊಟ್ಟೆಯ ಬಿಳಿಭಾಗ ನೀರಿನಲ್ಲಿ ಹರಡಿಕೊಳ್ಳುತ್ತದೆ. ಹೀಗಾಗಿ ಇಂತಹ ಮೊಟ್ಟೆಯನ್ನು ತಿನ್ನಲು ಮನಸ್ಸಾಗುವುದಿಲ್ಲ. ಹೀಗಾಗಿ ಮೊಟ್ಟೆ ಬೇಯಿಸುವಾಗ ತುಂಬಾ ಕಾಳಜಿ ವಹಿಸಬೇಕು. ಹಾಗಾದರೆ ಮೊಟ್ಟೆ ಬೇಯಿಸುವಾಗ ಗಮನದಲ್ಲಿಡಬೇಕಾದ ವಿಷಯಗಳು ಏನು?
ರೆಫ್ರಿಜರೇಟರ್ನಲ್ಲಿ ಇಟ್ಟ ಮೊಟ್ಟೆಗಳು
ಹೆಚ್ಚಿನ ಜನರು ರೆಫ್ರಿಜರೇಟರ್ನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸುತ್ತಾರೆ ಮತ್ತು ಅವುಗಳನ್ನು ನೇರವಾಗಿ ಅಡುಗೆಗೆ ಬಳಸುತ್ತಾರೆ. ಹೀಗೆ ರೆಫ್ರಿಜರೇಟರ್ನಲ್ಲಿ ಇಟ್ಟ ಮೊಟ್ಟೆಗಳನ್ನು ಹೊರಗಿನ ಉಷ್ಣಾಂಶಕ್ಕೆ ಹೊಂದಿಕೊಳ್ಳಲು ಬಿಡಬೇಕು. ನೀವು ತಣ್ಣನೆಯ ಮೊಟ್ಟೆಗಳನ್ನು ನೇರವಾಗಿ ಬಿಸಿ ನೀರಿನಲ್ಲಿ ಕುದಿಸಿದರೆ, ಅವು ಬಿರುಕು ಬಿಡುವ ಸಾಧ್ಯತೆ ಹೆಚ್ಚು.
ಉಪ್ಪು
ಒಂದು ಟೀ ಚಮಚ ಉಪ್ಪು ಮೊಟ್ಟೆಗಳನ್ನು ಕುದಿಸುವಾಗ ಹಾಕಿದರೆ ಮೊಟ್ಟೆ ಬಿರುಕು ಬಿಡುವುದನ್ನು ತಡೆಯುತ್ತದೆ. ಒಂದು ಪಾತ್ರೆಯನ್ನು ನೀರಿನಿಂದ ತುಂಬಿಸಿ, ಅದನ್ನು ಬೆಂಕಿಯಲ್ಲಿ ಹಾಕಿ ಮತ್ತು ಅದರಲ್ಲಿ 1 ಟೀ ಚಮಚ ಉಪ್ಪನ್ನು ಮಿಶ್ರಣ ಮಾಡಿ. ಅದು ಕುದಿಯಲು ಪ್ರಾರಂಭಿಸಲಿದಾಗ ಮೊಟ್ಟೆಗಳನ್ನು ಪಾತ್ರೆಯಲ್ಲಿ ಹಾಕಿ 8 ನಿಮಿಷಗಳ ಕಾಲ ಕುದಿಸಿ.
ಹೆಚ್ಚು ಮೊಟ್ಟೆಗಳನ್ನು ಒಟ್ಟಿಗೆ ಬೇಯಿಸಬೇಡಿ
ಒಂದೇ ಬಾರಿಗೆ ಹೆಚ್ಚು ಮೊಟ್ಟೆಗಳನ್ನು ಕುದಿಸಬೇಡಿ. ನೀರು ಕುದಿಯುತ್ತಿರುವಾಗ ಮೊಟ್ಟೆಗಳನ್ನು ಸ್ಪರ್ಶಿಸಲು ಅಥವಾ ಪರಸ್ಪರ ಬಡಿದುಕೊಳ್ಳಲು ಅನುಮತಿಸಬೇಡಿ. ನೀವು ಸಣ್ಣ ಪ್ಯಾನ್ ಅನ್ನು ಬಳಸುತ್ತಿದ್ದರೆ ಒಂದೇ ಸಮಯದಲ್ಲಿ 3-4 ಮೊಟ್ಟೆಗಳಿಗಿಂತ ಹೆಚ್ಚು ಮೊಟ್ಟೆಗಳನ್ನು ಕುದಿಸಬೇಡಿ. ನೀವು ಹೆಚ್ಚು ಮೊಟ್ಟೆಗಳನ್ನು ಕುದಿಸುತ್ತಿದ್ದರೆ ದೊಡ್ಡ ಪಾತ್ರೆ ಬಳಸಿ.
ವಿನೆಗರ್
ವಿನೆಗರ್ ಟ್ರಿಕ್ ಮೊಟ್ಟೆಗಳು ಬಿರುಕು ಬಿಡುವುದನ್ನು ತಡೆಯಲು ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ಪ್ರತಿ ಮೊಟ್ಟೆಗೆ ಒಂದು ಚಮಚ ವಿನೆಗರ್ ಅನ್ನು ಬಳಸಲು ಮರೆಯದಿರಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ತುಂಬಿಸಿ ಮತ್ತು ನೀವು ಕುದಿಸುತ್ತಿರುವ ಮೊಟ್ಟೆಗಳ ಸಂಖ್ಯೆಗೆ ಅನುಗುಣವಾಗಿ ವಿನೆಗರ್ ಸೇರಿಸಿ. ನೀರಿಗೆ ವಿನೆಗರ್ ಸೇರಿಸುವುದರಿಂದ ಮೊಟ್ಟೆಯ ಬಿಳಿಭಾಗದಲ್ಲಿರುವ ಪ್ರೋಟೀನ್‌ಗಳು ವೇಗವಾಗಿ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ಬಿರುಕುಗಳನ್ನು ತಡೆಯುತ್ತದೆ.
ಐಸ್ ಕ್ರೀಮ್
ಮೊಟ್ಟೆಗಳನ್ನು ಕುದಿಸುವಾಗ ಐಸ್ ಕ್ಯೂಬ್‌ಗಳನ್ನು ಬಳಸುವುದು ಬಿರುಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ದೊಡ್ಡ ಬಟ್ಟಲನ್ನು ತಣ್ಣೀರಿನಿಂದ ತುಂಬಿಸಿ ಮತ್ತು ಒಂದು ಹಿಡಿ ಐಸ್ ತುಂಡುಗಳನ್ನು ಸೇರಿಸಿ. ಮೊಟ್ಟೆಗಳನ್ನು ಬೇಯಿಸಿದ ನಂತರ, ಕನಿಷ್ಠ 3 ನಿಮಿಷಗಳ ಕಾಲ ತಣ್ಣಗಾಗಲು ಮೊಟ್ಟೆಗಳನ್ನು ಐಸ್ ಕ್ಯೂಬ್‌ಗಳ ಬೌಲ್‌ಗೆ ವರ್ಗಾಯಿಸಿ. ಇದು ಮೊಟ್ಟೆಯ ಸಿಪ್ಪೆ ತೆಗೆಯಲು ಸುಲಭವಾದ ವಿಧಾನವಾಗಿದೆ.
ಮೊಟ್ಟೆಯನ್ನು ಕುದಿಸಲು ಸರಿಯಾದ ವಿಧಾನ:-
- ಅರ್ಧದಷ್ಟು ನೀರು ತುಂಬಿದ ಪ್ಯಾನ್ ಅನ್ನು ಬಿಸಿ ಮಾಡಿ.
- ಉಪ್ಪು ಅಥವಾ ವಿನೆಗರ್ನೊಂದಿಗೆ ನೀರನ್ನು ಕುದಿಸಿ.
- ಮೊಟ್ಟೆಗಳು ರೆಫ್ರಿಜರೇಟರ್ನಲ್ಲಿ ಇಡುವುದನ್ನು ತಪ್ಪಿಸಿ. ಇವು ತುಂಬಾ ದಿನ ಬಳಕೆಯಾಗದಂತೆ ಇಡುವುದನ್ನು ತಪ್ಪಿಸಿ.
- ನಿಧಾನವಾಗಿ ಬಾಣಲೆಯಲ್ಲಿ ಮೊಟ್ಟೆಗಳನ್ನು ಹಾಕಿ ಮತ್ತು ಮುಚ್ಚಳದಿಂದ ಮುಚ್ಚಿ. ಉರಿಯನ್ನು ಕಡಿಮೆ ಇಡುವುದು ತುಂಬಾ ಮುಖ್ಯ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications