ಟೆಡ್ಡಿ ಡೇ 2026: ಪ್ರೀತಿಯ ಸಂಕೇತವಾಗಿ ಟೆಡ್ಡಿ ಬೇರ್ ಉಡುಗೊರೆಯಾಗಿ ನೀಡುವದರ ಅರ್ಥವೇನು
ಪೇಮಿಗಳ ವಾರದ ಪ್ರಮುಖ ದಿನಗಳಲ್ಲಿ ಒಂದಾದ ಟೆಡ್ದಿ ಡೇ ಫೆಬ್ರವರಿ 10 ರಂದು ಆಚರಿಸಲಾಗುತ್ತದೆ. ಈ ಸಿಹಿ ದಿನ ಸಿಹಿತಿಂಡಿಗಳು ಮತ್ತು ಹೊಗುಚ್ಚಗಳಿಗಿಂತ ವಿಭಿನ್ನವಾಗಿ, ಹೆಚ್ಚು ನೆನಪಲ್ಲಿ ಉಳಿಯುವ ಹಾಗೂ ಭಾವನಾತ್ಮಕವಾಗಿ ಹತ್ತಿರವಾಗುವಂತಹ ಉಡುಗೊರೆ ನೀಡುವುದನ್ನು ಟೆಡ್ಡಿ ಬೇರ್ ಡೇ ಎಂದು ಕರಿಯಲಾಗುತ್ತದೆ.
ಚಾಕೊಲೇಟ್ ಗಳು ತಿಂದು ಮುಗಿಸುತ್ತೆವೆ.ಹೊವುಗಳು ಒಣಗುತ್ತವೆ. ಆದರೆ ಟೆಡ್ಡಿ ಬೇರ್ ಅನ್ನು ವರ್ಷಗಳಕಾಲ ನಾವು ಉಳುಸಿಕೊಳಬಹುದು, ಇದೇ ಕಾರಣಕ್ಕಾಗಿ ಟೆಡ್ಡಿ ಬೇರ್ ಅನ್ನು ಪ್ರೀತಿ, ಕಾಳಜಿ ಮತ್ತು ಭಾವನಾತ್ಮಕ ಬಂಧವನ್ನು ಪ್ರತಿನಿಧಿಸುವ ಸಂಕೆತದ ಉಡುಗೊರೆ ಆಗಿದೆ.

ಹ್ಯಾಪಿ ಟೆಡ್ಡಿ ಡೇ 2026: ಇತಿಹಾಸ ಮತ್ತು ಮಹತ್ವ
ಟೆಡ್ಡಿ ಡೇ ಟೆಡ್ಡಿ ಬೇರ್ ನ ಹಟ್ಟಿನ ಕಥೆಯೊಂದಿಗೆ ಸಂಬಧಿಸಿದೆ. ಈ ಕಥೆ 20ನೇ ಶತಮಾನದ ಅಮೆರಿಕದ ಮಾಜಿ ಅಧ್ಯಕ್ಷ ಥಿಯೋಡರ್ ರೊಸ್ ವೆಲ್ಟ ಇವರ ಗೌರವಾರ್ಥವಾಗಿ ಜನಪ್ರಿಯ ಆಟಿಕೆ "ಟೆಡ್ಡಿ ಬೇರ್" ಗೆ ಆ ಹೆಸರು ಬಂದಿದೆ.
1902 ರಲ್ಲಿ ಬೇಟೆಯ ವೇಳೆ ಸೆರೆಹಿಡಿದು ಕಟ್ಟಿಹಾಕಲಾಗಿದ್ದ ಕರಡಿಯನ್ನು ಗುಂಡುಹಾರಿಸಿ ಕೊಲ್ಲಲು ನಿರಾಕರಿಸಿದರು. ಅವರು ಇದನ್ನು ಕ್ರೀಡಾಸ್ಪೊರ್ತಿಯಲ್ಲ ಇದೊಂದು ಕ್ರೊರತೆ ಎಂದು ಥಿಯೋಡರ್ ರೊಸ್ ವೆಲ್ಟ ಅಭಿಪ್ರಾಯಪಟ್ಟರು. ಈ ಮಾನವೀಯತೆಯ ನಡೆಯು ಆಗಿನ ಸಮಯದಲ್ಲಿ ದೊಡ್ಡ ಸುದ್ದಿಯಾಗಿ ಹರಡಿತ್ತು.
ಈ ಘಟನೆಯಿಂದ ಆಟಿಕೆ ತಯಾರಕರು ಪ್ರೆರಪಿತರಾಗಿ ಮೃದುವಾದ, ಮೆತ್ತಗಿನ, ಕರಡಿಯ ಆಕಾರದಲ್ಲಿರುವ ಹತ್ತಿಯಿಂದ ತುಂಬಿದ ಗೊಂಬೆ ತಯಾರಸಿ ಅದಕ್ಕೆ ಟೆಡ್ಡಿ ಬೇರ್ ಎಂದು ರೊಸ್ ವೆಲ್ಟ ಇವರ ಗೌರವಾರ್ಥವಾಗಿ ಅದಕ್ಕೆ ಹೆಸರು ಇಡಲಾಯಿತು. ಕಾಲಕ್ರಮೇಣ ಟೆಡ್ಡಿ ಬೇರ್ ಮಕ್ಕಳ ಆಟಿಕೆಯಾಗಿರುವುದರೊಂದಿಗೆ, ಭಾವನಾತ್ಮಕ ಒಡನಾಟ ಮತ್ತು ಕಾಳಜಿಯ ಸಂಕೇತವಾಗಿ ವಿಶ್ವಾದ್ಯಂತ ಹೆಸರುವಾಸಿ ಆಯಿತು.
ಪ್ರೆಮೀಗಳು ಆಚರಿಸುವ ವಿಭಿನ್ನ ರೂಪದ ದಿನವಿದು
ಪ್ರೇಮಿಗಳ ಫೆಬ್ರವರಿ ಎರಡನೇ ವಾರವನ್ನು ಅಂತ್ಯಂತ ಪ್ರೀತಿಯ ಹಾಗು ವಿಭಿನ್ನ ರೂಪಗಳನ್ನಾಗಿ ಆಚರಿಸುವ ಪದ್ಧತಿಯಾಗಿ ಬೆಳೆಯುತ್ತಿದ್ದಂತೆ, ಟೆಡ್ಡಿ ಡೇ ಸಹ ಸ್ವಾಭಾವಿಕವಾಗಿ ಮೃದುತ್ವ, ಭಾವನೆ ಮತ್ತು ಸಂಬಂಧಗಳ ಸೌಕರ್ಯವನ್ನು ವ್ಯಕ್ತಪಡಿಸುವ ದಿನವಾಗಿ ತನ್ನದೇ ಆದ ಸ್ಥಾನ ಪಡೆದುಕೊಂಡಿತು.
ಟೆಡ್ಡಿ ಬೇರ್ ಉಡುಗೊರೆಯ ಅರ್ಥ
ಉಡುಗೊರೆಯಾಗಿ ನೀಡುವ ಟೆಡ್ಡಿ ಬೇರ್ ಕೇವಲ ಆಟಿಕೆಯಲ್ಲ ಅದು ಕೆಳಗೆ ತಿಳಿಸಿರುವ ಭಾವನೆಗಳ ಪ್ರತಬಿಂಬವಾಗಿದೆ.
ಭಾವನಾತ್ಮಕ ಭದ್ರತೆ: ಸಂಗಾತಿ ಹತ್ತಿರವಿಲ್ಲಾದಾಗ ಅವರ ಉಪಸ್ಥಿಯನ್ನು ನೆನಪಿಸುವ ಒಂದು ಸುಮದುರವಾದ ಭಾವನೆ ಆಗಿರುತ್ತದೆ.
ನಿಷ್ಕಲ್ಮಶವಾದ ಪ್ರೀತಿ: ಬಾಲ್ಯದ ನೆನಪುಗಳನ್ನು ಮತ್ತೆ ನೆನಪಿಸುವಂತಹ ಈ ಆಟಿಕೆ, ಪ್ರೀತಿಯಲ್ಲಿರುವ ಮುದ್ಧತೆಯನ್ನು ಎತ್ತಿ ಹಿಡಿಯುತ್ತದೆ.
ಈ ಸಂಪ್ರದಾಯ ಇಂದಿಗೂ ಪ್ರಸ್ತುದಲ್ಲಿದೆ
ಟೆಡ್ಡಿ ಬೇರ್ ಬೆಲೆಬಾಳುವ 'ನೆನಪು', ಇದು ನಮಗೆ ಗೊತ್ತಿಲ್ಲದೆ ಮನೆಯ ಒಂದು ಮೂಲೆಯಲ್ಲಿ ಕುಳಿತು ಪ್ರೀತಿಯ ಸಂಗಾತಿಯನ್ನು ಸದ್ದಿಲ್ಲದೆ ಸದಾ ನೆನಪಿಸುವಂತಹ ವಸ್ತು. ಪ್ರಾಮಿಸ್ ಡೇಗಿಂತ ಮೊದಲೇ ಟೆಡ್ಡಿ ನೀಡಿ ನಾನು ಯಾವಾಗಲೂ ನಿನ್ನ ಜೊತೆ ಇರುತ್ತೆನೆ ಎಂದು ಭರವಸೆ ನೀಡಿ ಮತ್ತಷ್ಟು ಪರಸ್ಪರ ಹತ್ತಿರವಾಗುತ್ತಾರೆ.
ಟೆಡ್ಡಿ ಬೇರ್ ನೀಡುವಾಗ ಬಣ್ಣಗಳ ಬಣ್ಣಗಳ ಆಯ್ಕೆಯೂ ಮುಖ್ಯ
ಕೆಂಪು- ಗಾಡವಾದ ಪ್ರಣಯ ಮತ್ತು ಪ್ರೀತಿ ಸಂಕೇತ
ಗುಲಾಬಿ- ಕಾಳಜಿ ಮತ್ತು ವಾತ್ಸಲ್ಯದ ಸಂಕೇತ
ಬಿಳಿ- ಶಾಂತಿ ಮತ್ತು ಪಾರದರ್ಶಕತೆ ಮತ್ತು ಹೊಸ ಆರಂಭ
ಹಳದಿ- ಸ್ನೇಹ ಮತ್ತು ಸಂತೋಷದ ಸಂಕೇತ.












Click it and Unblock the Notifications