Spinach Buttermilk Recipe: ಪಾಲಕ್ ಸೊಪ್ಪಿನ ಮಜ್ಜಿಗೆ ರುಚಿಗೆ ಸೈ ಆರೋಗ್ಯಕ್ಕೆ ಜೈ.. ಒಮ್ಮೆ ಹೀಗೆ ತಿನ್ನಿ.. ರುಚಿಯಾಗಿರುತ್ತೆ
ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಕಾಪಾಡುವುದು ನೀರು ಬಿಟ್ಟರೆ ಆಹಾರ ಮಾತ್ರ. ಕಾಲ ಕಾಲಕ್ಕೆ ನಾವು ನಮ್ಮ ಆಹಾರ ಪದ್ಧತಿಯನ್ನೂ ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಬೇಸಿಗೆಯಲ್ಲಿ ಹಣ್ಣು, ತರಕಾರಿ ಹಾಗೂ ಸೊಪ್ಪು ಹೆಚ್ಚಾಗಿ ಸೇವಿಸಬೇಕು. ಮಸಾಲೆಯುಕ್ತ ಆಹಾರವನ್ನು ಬೇಸಿಗೆಯಲ್ಲಿ ತಪ್ಪಿಸುವುದು ಉತ್ತಮ. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿ ಮತ್ತು ಹೈಡ್ರೇಟ್ ಆಗಿರಿಸಲು ಪಾಲಕ್ ಸೊಪ್ಪನ್ನು ನಿಮ್ಮ ಆಹಾರದಲ್ಲಿ ಆಗಾಗ್ಗೆ ಸೇರಿಸಿ.

ನೀವು ಸಾಮಾನ್ಯವಾಗಿ ಮಾಡುವ ಹಾಗೆ ಪಾಲಕ್ ಅನ್ನು ಹುರಿದು ತಿನ್ನುವ ಬದಲು ಪಾಲಕ್ ಸೊಪ್ಪಿನಿಂದ ಮಜ್ಜಿಗೆ ಮಾಡಿ. ಇದು ಅನ್ನದೊಂದಿಗೆ ತಿನ್ನಲು ಅದ್ಭುತವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದನ್ನು ಮಾಡುವುದು ತುಂಬಾ ಸುಲಭ. ಹಾಗಾದರೆ ತಡ ಮಾಡುವುದು ಬೇಡ ಪಾಲಕ್ ಮಜ್ಜಿಗೆ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಕೂಡ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಪಾಲಕ್ ಮಜ್ಜಿಗೆ ಅಗತ್ಯವಿರುವ ವಸ್ತುಗಳು:
* ಪಾಲಕ್ - 1 ಕಟ್ಟು
* ಉಪ್ಪು - ರುಚಿಗೆ ತಕ್ಕಂತೆ
* ನೀರು - 1 ಟಂಬ್ಲರ್
* ತೆಂಗಿನಕಾಯಿ - 1/4 ಕಪ್
* ಜೀರಿಗೆ - 1 tbsp
* ಹಸಿರು ಮೆಣಸಿನಕಾಯಿ - 3
* ಮೊಸರು - 1/4 ಕಪ್
* ಅಕ್ಕಿ ಹಿಟ್ಟು - 1/2 ಟೇಬಲ್ ಚಮಚ
* ಅರಿಶಿನ ಪುಡಿ - 1/4 ಟೀಸ್ಪೂನ್
ಮಸಾಲೆಗಾಗಿ...
* ಎಣ್ಣೆ - 4 ಟೇಬಲ್ಸ್ಪೂನ್
* ಪಲಾವ್ ಹೂವು - 1
*ಲವಂಗ- 1
* ಸಾಸಿವೆ - 1/2 ಟೀಸ್ಪೂನ್
* ಉದ್ದಿನ ಬೇಳೆ - 1/2 ಟೀಸ್ಪೂನ್
* ಇಂಗು ಪುಡಿ - 1 tbsp
* ಬೆಳ್ಳುಳ್ಳಿ - 10 (ಕತ್ತರಿಸಿದ)

ಪಾಕವಿಧಾನ:
* ಮೊದಲು ಪಾಲಕ್ ಸೊಪ್ಪನ್ನು ಶುಚಿಗೊಳಿಸಿ, ಸಣ್ಣಕೆ ಕತ್ತರಿಸಿ ನೀರಿನಲ್ಲಿ ತೊಳೆಯಿರಿ.
* ನಂತರ ಮಿಕ್ಸರ್ ಜಾರ್ ನಲ್ಲಿ ತೆಂಗಿನಕಾಯಿ, ಜೀರಿಗೆ, ಹಸಿಮೆಣಸಿನಕಾಯಿ, ಮೊಸರು, ಅಕ್ಕಿಹಿಟ್ಟು ಮತ್ತು ಅರಿಶಿನ ಪುಡಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ತೊಳೆದ ಪಾಲಕ್ ಸೊಪ್ಪನ್ನು ಹಾಕಿ ಸ್ವಲ್ಪ ಉಪ್ಪು ಮತ್ತು 1 ಟಂಬ್ಲರ್ ನೀರು ಹಾಕಿ 10 ನಿಮಿಷ ಕುದಿಸಿ.
* ಪಾಲಕ್ ಸೊಪ್ಪು ಚೆನ್ನಾಗಿ ಬೆಂದಾಗ ರುಬ್ಬಿದ ಕೊಬ್ಬರಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಬೆರೆಸಿ ಅದನ್ನು ಚೆನ್ನಾಗಿ ಕುದಿಯಲು ಬಿಡಿ. ಉಂಡೆಗಳಿಲ್ಲದಂತೆ ಚೆನ್ನಾಗಿ ಎಲ್ಲಾ ಬೆಂದ ನಂತರ ಸ್ಟವ್ ಆಫ್ ಮಾಡಿ.
* ಕೊನೆಗೆ ಒಂದು ಬಾಣಲೆಯನ್ನು ಒಲೆಯಲ್ಲಿ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಪಲಾವ್ ಹೂವು, ಲವಂಗ, ಉದ್ದಿನಬೇಳೆ, ಒಣಮೆಣಸಿನಕಾಯಿ ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ.
* ನಂತರ ಬೆಳ್ಳುಳ್ಳಿ ಮತ್ತು ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ. ಅದು ಕಂದು ಬಣ್ಣ ಬರುವವರೆಗೆ ಹುರಿದು ಪಾಲಕದೊಂದಿಗೆ ಬೆರೆಸಿದರೆ ರುಚಿಯಾದ ಪಾಲಕ್ ಮಜ್ಜಿಗೆ ಸಿದ್ಧ.












Click it and Unblock the Notifications