Southekayi malasa Recipe: ದೇಹ ತಂಪಾಗಿಡುವ ರುಚಿಕರ ಸೌತೇಕಾಯಿ ಮಸಾಲಾ ರೆಸಿಪಿ
ಬೇಸಿಗೆ ಬಂತು ಬೇಸಿಗೆ.... ಇದು ಬಹುತೇಕ ಎಲ್ಲರೂ ಸದ್ಯಕ್ಕೆ ಹೇಳುತ್ತಿರುವ ಮಾತು. ಬೇಸಿಗೆ ಬಂತು ಅಂತ ಬರಿ ಬಾಯಿಂದ ಹೇಳಿದರೆ ಸಾಕಾಗುವುದಿಲ್ಲ. ಬೇಸಿಗೆ ಕಾಲಕ್ಕೆ ನಮ್ಮ ಆಹಾರ ಪದ್ಧತಿಯನ್ನೂ ನಾವು ಬದಲಾಯಿಸಿಕೊಳ್ಳಬೇಕು. ದೇಹವನ್ನು ತಂಪಾಗಿಡುವ ಆಹಾರ ಸೇವನೆಯನ್ನು ನಿತ್ಯ ರೂಢಿಸಿಕೊಳ್ಳಬೇಕು. ಅದಕ್ಕಾಗಿ ನಾವು ಇಂದು ಸೌತೇಕಾಯಿ ಮಸಾಲಾ ತಯಾರಿಸುವ ವಿಧಾನವನ್ನು ತಂದಿದ್ದೇವೆ.
ಸೌತೇಕಾಯಿ ಸಾಮಾನ್ಯವಾಗಿ ಹೆಚ್ಚು ನೀರಿನಾಂಶವನ್ನು ಹೊಂದಿರುತ್ತದೆ. ಇದು ದೇಹವನ್ನು ಬೇಸಿಗೆ ಬಿಸಿಲಿನಿಂದ ರಕ್ಷಣೆ ಮಾಡಲು ಸಹಕಾರಿಯಾಗಿದೆ. ಹೀಗಾಗಿ ಹೆಚ್ಚು ಜನ ಸಲಾಡ್‌ನಲ್ಲಿ ಸೌತೇಕಾಯಿ ಬಳಕೆ ಮಾಡುತ್ತಾರೆ. ಸೌತೇಕಾಯಿ ನಮ್ಮ ದೇಹಕ್ಕೆ ಈ ದಿನಮಾನಗಳಲ್ಲಿ ಹೆಚ್ಚು ಉಪಯುಕ್ತವಾಗಿರುವುದರಿಂದ ಅದರಿಂದ ತಯಾರಿಸಲಾಗುವ ಖಾದ್ಯಗಳ ಬಗ್ಗೆ ತಿಳಿದಿರುವುದು ಮುಖ್ಯ.

ಈ ಸೌತೇಕಾಯಿ ಮಸಾಲಾವನ್ನು ನೀವು ಬೆಳಿಗ್ಗೆ ತಿಂಡಿಯಂತೆ, ಮಧ್ಯಾಹ್ನದ ಊಟದ ಬಳಿಕ ಹಾಗೂ ಸಂಜೆ ತಿಂಡಿಗೂ ಸೇವಿಸಬಹುದು. ಒಮ್ಮೆ ತಯಾರಿಸಿ ಇದರ ರುಚಿ ನೋಡಿದರೆ ಮತ್ತೆ ಮತ್ತೆ ತಯಾರಿಸಿ ತಿನ್ನುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ತಡ ಮಾಡುವುದು ಬೇಡ ಸೌತೇಕಾಯಿ ಮಸಾಲಾ ಮಾಡುವ ವಿಧಾನವನ್ನು ತಿಳಿಯೋಣ.
ಸೌತೇಕಾಯಿ ಮಸಾಲಾ ತಯಾರಿಸಲು ಬೇಕಾಗುವ ಪದಾರ್ಥಗಳು:
* ಸೌತೇಕಾಯಿ ಎರಡು (ಫ್ರೆಶ್ ಆಗಿರಬೇಕು)
* ಹಸಿ ದ್ರಾಕ್ಷಿ ಒಂದು ಹಿಡಿ
* ಹಸಿ ಮೆಣಸಿನಕಾಯಿ ಎರಡು
* ಈರುಳ್ಳಿ ಒಂದು
*ಕರಿಬೇವು ಸ್ವಲ್ಪ
*ಕೊತ್ತೊಂಬ್ಬರಿ ಸ್ವಲ್ಪ
*ಶುಂಠಿ ಕಾಲ್ ಚಮಚ
*ಬೆಳ್ಳುಳ್ಳಿ ಒಂದು ಎಸಳು
* ಜೀರಿಗೆ ಅರ್ಧ ಚಮಚ
* ಎಣ್ಣೆ ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಚಿಟಿಕೆ

ಸೌತೇಕಾಯಿ ಮಸಾಲಾ ತಯಾರಿಸುವ ವಿಧಾನ:
* ಮೊದಲಿಗೆ ಸೌತೇಕಾಯಿ ಸಿಪ್ಪೆ ತೆಗೆದು ಅದರೊಳಗಿರುವ ಬೀಜವನ್ನು ತೆಗೆದಯ ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
* ಒಂದು ಹಿಡಿ ದ್ರಾಕ್ಷಿ ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದರಲ್ಲಿ ನಾಲ್ಕು ಅಥವಾ ಆರು ಭಾಗಗಳನ್ನಾಗಿ ಮಾಡಿ ಕತ್ತರಿಸಿಕೊಳ್ಳಿ.
* ಒಲೆಯ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿದ ತಕ್ಷಣ ಜೀರಿಗೆ ಹಾಕಿ ಚಟಪಟ ಅನ್ನೋವರೆಗೂ ಹುರಿದುಕೊಳ್ಳಿ
* ಬಳಿಕ ಇದಕ್ಕೆ ಸಣ್ಣಕೆ ಹೆಚ್ಚಿದ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಬೇಕು, ನಂತರ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಕತ್ತರಿಸಿದ ಕರಿಬೇವು ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ.

* ಒಂದು ಮಿಕ್ಸಿ ಜಾರ್‌ಗೆ ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಗ್ಗರಣೆಗೆ ಹಾಕಿ ಚೆನ್ನಾಗಿ ಹುರಿಯಿರಿ
* ಬಳಿಕ ಇದಕ್ಕೆ ಉಪ್ಪು, ಅರಿಶಿನ ಹಾಕಿ ಚೆನ್ನಾಗಿ ಕಲಸಿ ಗ್ಯಾಸ್ ಆಫ್ ಮಾಡಿ ಆರಲು ಬಿಡಿ.
* ಒಗ್ಗರಣೆ ಆರಿದ ಬಳಿಕ ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಸೌತೇಕಾಯಿ ಹಾಗೂ ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದರೆ ರುಚಿ ರುಚಿಯಾದ ಸೌತೇಕಾಯಿ ಮಸಾಲಾ ಸವಿಯಲು ಸಿದ್ಧ. (ಇದಕ್ಕೆ ನೀವು ದಾಳಿಂಬೆ ಕೂಡ ಹಾಕಿಕೊಳ್ಳಬಹುದು.)












Click it and Unblock the Notifications