Rose Day Wishes: ರೋಸ್ ಡೇಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಇಲ್ಲಿವೆ ವಿಶೇಷ ಶುಭಾಶಯಗಳು
ಫೆಬ್ರವರಿ ಬಂದೊಡದೆ ಪ್ರೇಮಿಗಳ ದಿನಕ್ಕಾಗಿ ಈಗಿನ ಯುವಜನರು ಕಾದಿರುತ್ತಾರೆ. ಪ್ರೇಮಿಗಳ ದಿನವು ಇಂದಿನಿಂದಲೇ ಆರಂಭವಾಗಿದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನಕ್ಕೆ ಮುಂಚಿತವಾಗಿ ಇದು ವಾರಪೂರ್ತಿ ನಡೆಯುವ ಆಚರಣೆಯಾಗಿದೆ. ಸಾಮಾನ್ಯವಾಗಿ ಜನರಿಗೆ ಮಾತನಾಡದೆ ಉಳಿದಿರುವ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಈಗ ಅವಕಾಶವನ್ನು ನೀಡುತ್ತದೆ. ಹೀಗಾಗಿ ಪ್ರತಿ ದಿನವೂ ತನ್ನದೆ ಆದ ಅರ್ಥವನ್ನು ಹೊಂದಿದೆ ಮತ್ತು ಇದು ಪ್ರತಿ ವರ್ಷ ಫೆಬ್ರವರಿ 7ರಂದು ಆಚರಿಸಲಾಗುವ ಗುಲಾಬಿ ದಿನದೊಂದಿಗೆ (ರೋಸ್ ಡೇ) ಆರಂಭವಾಗುತ್ತದೆ. ವಾರಪೂರ್ತಿ ನಡೆಯುವ ಪ್ರೇಮಿಗಳ ದಿನದ ಸಂಭ್ರಮಾಚರಣೆಯಲ್ಲಿ ಇದು ಮೊದಲ ದಿನವಾಗಿದೆ.
ರೋಸ್ ಡೇ ಸರಳವಾದರೂ ಇದೊಂದು ಪ್ರೇಮಿಗಳಿಗೆ ಮಹತ್ವದ ದಿನ. ಈ ದಿನದಂದು ಜನರು ತಮ್ಮ ಪ್ರೀತಿ ಪಾತ್ರರಿಗೆ ಗುಲಾಬಿ ಹೂವಿನ ಉಡುಗೊರೆ ಕೊಟ್ಟು ಬಹಿರಂಗವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ಈ ಗುಲಾಬಿ ಹೂವು ತನ್ನ ಮೃದುವಾದ ದಳಗಳನ್ನು ಮತ್ತು ಅದರದೇ ಆದ ಸೌಂದರ್ಯವನ್ನು ಹೊಂದಿದೆ. ಹಿಂದಿನ ಕಾಲದಿಂದಲೂ ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿದೆ. ಇದು ಪದಗಳಲ್ಲಿ ವ್ಯಕ್ತಪಡಿಸಲಾಗಿದ ಇರುವ ಭಾಷೆಯನ್ನು ತಿಳಿಸುತ್ತದೆ. ಪ್ರೀತಿಗಾಗಿ ಕೆಂಪು ಗುಲಾಬಿ, ಸ್ನೇಹಕ್ಕಾಗಿ ಹಳದಿ ಗುಲಾಬಿ, ಇದೇ ರೀತಿ ಪ್ರತಿಯೊಂದು ಬಣ್ಣದ ಗುಲಾಬಿಯು ತನ್ನದೇ ಆದ ಭಾವನೆ ಹೊಂದಿದೆ.

2026ರ ಗುಲಾಬಿ ದಿನ ನಿಜವಾಗಿಯೂ ಮನಸ್ಸಲ್ಲಿರುವ ಭಾವನೆಯನ್ನು ವ್ಯಕ್ತಪಡಿಸಲು ಒಂದು ಅವಕಾಶವಾಗಿದೆ, ಈ ವಿಶೇಷ ದಿನದಂದು ನೀವು ನಿಮ್ಮ ಪ್ರೀತಿಪಾತ್ರರಿಗೆ ಕಳಿಸಬಹುದಾದ ಆತ್ಮೀಯ ಸಂದೇಶಗಳು ಹಾಗೂ ಶುಭಾಶಯಗಳು ಇಲ್ಲಿವೆ ನೋಡಿ.
ಗುಲಾಬಿ ದಿನದ ಹೃದಯಪೂರ್ವಕ ಶುಭಾಶಯಗಳು
* ಗುಲಾಬಿಯು ಉದ್ಯಾನವನ್ನು ಬೆಳಗಿಸುವಂತೆ, ನಿಮ್ಮ ಪ್ರೀತಿಯು ನನ್ನ ಜೀವನವನ್ನು ಸುಂದರ ಮತ್ತು ಸಂತೋಷದಿಂದ ತುಂಬಿದೆ. ಪ್ರೀತಿಯ ಗುಲಾಬಿ ದಿನದ ಶುಭಾಶಯಗಳು.
* "ನಾನು ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲ ನನ್ನ ಹೃದಯದಲ್ಲಿ ಅರಳುವ ಗುಲಾಬಿ ನೀನು. ಹ್ಯಾಪಿ ರೋಸ್ ಡೇ"
* "ಒ ನನ್ನ ಪ್ರೀತಿಯೇ, ಗುಲಾಬಿ ದಿನದ ಹಾರ್ದಿಕ ಶುಭಾಶಯಗಳು!"
* "ನನ್ನ ಜೀವನವನ್ನು ಸುಂದರ ಮತ್ತು ಪರಿಮಳಯುಕ್ತವಾಗಿಸುವ ಗುಲಾಬಿ ನೀನು. ಹ್ಯಾಪಿ ರೋಸ್ ಡೇ"
* "ಗುಲಾಬಿಗಳು ಪ್ರೀತಿಯನ್ನು ಸಂಕೇತಿಸಿದರೆ, ನಾನು ಅವುಗಳನ್ನು ನಿಮಗೆ ನಿರಂತರವಾಗಿ ನೀಡುತ್ತೇನೆ."
* "ನನ್ನ ಪ್ರೀತಿ ಮತ್ತು ಮೆಚ್ಚುಗೆಯ ಸಂಕೇತವಾಗಿ ನಿಮಗೆ ಗುಲಾಬಿಗಳ ಪುಷ್ಪಗುಚ್ಛವನ್ನು ಕಳುಹಿಸುತ್ತಿದ್ದೇನೆ. ಅದ್ಭುತವಾದ ಗುಲಾಬಿ ದಿನವನ್ನು ಆಚರಿಸಿ!"
* "ನಿಮ್ಮ ಹೃದಯದಲ್ಲಿ ಪ್ರೀತಿಯ ದಳಗಳು ಶಾಶ್ವತವಾಗಿ ಅರಳಲಿ. ಗುಲಾಬಿ ದಿನದ ಶುಭಾಶಯಗಳು!"
* "ಗಾಳಿಯ ವಿರುದ್ಧ ಗುಲಾಬಿ ಬಲವಾಗಿ ನಿಂತಂತೆ, ನಮ್ಮ ಪ್ರೀತಿ ಎಲ್ಲಾ ಸವಾಲುಗಳನ್ನು ತಡೆದುಕೊಳ್ಳಲಿ. ಗುಲಾಬಿ ದಿನದ ಹಾರ್ದಿಕ ಶುಭಾಶಯಗಳು!""
* "ಈ ಗುಲಾಬಿ ದಿನದಂದು, ನಾನು ನಿಮಗೆ ಪ್ರೀತಿ ಮತ್ತು ಸಂತೋಷದಿಂದ ತುಂಬಿದ ಗುಲಾಬಿಯ ಉದ್ಯಾನವನ್ನು ಕಳುಹಿಸುತ್ತೇನೆ."
* "ಈ ಗುಲಾಬಿಯೊಂದಿಗೆ, ನನ್ನ ಹೃತ್ಪೂರ್ವಕ ಪ್ರೀತಿ ಮತ್ತು ಶುಭಾಶಯಗಳನ್ನು ಕಳುಹಿಸುತ್ತೇನೆ. ಗುಲಾಬಿ ದಿನದ ಶುಭಾಶಯಗಳು!"
* ಗುಲಾಬಿ ಮಸುಕಾಗಬಹುದು, ಆದರೆ ನಿಮ್ಮ ಮೇಲಿನ ನನ್ನ ಪ್ರೀತಿ ಯಾವಾಗಲೂ ನಿಜವಾಗಿರುತ್ತದೆ ಹ್ಯಾಪಿ ರೋಸ್ ಡೇ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications