Heerekayi Chips Recipe: ಹೀರೆಕಾಯಿ ಸಿಪ್ಪೆಯಿಂದ ಚಿಪ್ಸ್ ಮಾಡಿದಿರಾ? ಸಖತ್ ಟೇಸ್ಟಿಯಾಗಿರುತ್ತೆ ಒಮ್ಮೆ ಟ್ರೈ ಮಾಡಿ

ಸಂಜೆ ಆದರೆ ಅದೇ ಆಲುಗಡ್ಡೆ ಚಿಪ್ಸ್ ತಿಂದು ತಿಂದು ಬೇಜಾರಾಗಿದಿಯಾ? ಬಾಳೆಕಾಯಿ ಚಿಪ್ಸ್, ಹಲಸಿನಕಾಯಿ ಚಿಪ್ಸ್ ತಿಂದು ನಾಲಿಗೆ ಬೇರೆ ರುಚಿ ಬಯಸುತ್ತಿದಿಯಾ? ಹಾಗಾದರೆ ಹೀರೆಕಾಯಿ ಸಿಪ್ಪೆಯಿಂದ ಮಾಡಿದ ಚಿಪ್ಸ್‌ ಒಮ್ಮೆ ಟ್ರೈ ಮಾಡಿ. ಇದು ತಿನ್ನಲು ವಿಭಿನ್ನ ರುಚಿ ನೀಡುವುದು ಮಾತ್ರವಲ್ಲದೆ ಗರಿಗರಿಯಾಗಿರುತ್ತದೆ.

ಹೀರೆಕಾಯಿ ಎಲ್ಲಾ ಕಾಲಕ್ಕೂ ಸಿಗುವ ಬಹುತೇಕರ ನೆಚ್ಚಿನ ತರಕಾರಿ. ಸಾಮಾನ್ಯವಾಗಿ ಗೃಹಿಣಿಯರು ಹೀರೆಕಾಯಿಯಿಂದ ಪಲ್ಯ, ಚಟ್ನಿಯನ್ನು ತಯಾರಿಸುತ್ತಾರೆ. ಕೆಲವರು ಸಾಂಬರ್‌ಗೂ ಇದನ್ನು ಬಳಸುತ್ತಾರೆ. ಆದರೆ ಬಹುತೇಕ ಜನ ಗೃಹಿಣಿಯರು ಹೀರೆಕಾಯಿಯಿಂದ ತೆಗೆದ ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಅದರ ಸಿಪ್ಪೆಯಿಂದ ರುಚಿಕರವಾದ ಚಿಪ್ಸ್‌ ಅನ್ನೂ ತಯಾರಿಸಬಹುದು. ನೀವು ಇನ್ನುಮುಂದೆ ಹೀರೆಕಾಯಿ ತಂದರೆ ಅದರ ಸಿಪ್ಪೆಯಿಂದ ಚಿಪ್ಸ್ ತಯಾರಿಸಿ ತಿನ್ನಿ ಇದರ ರುಚಿ ಸಖತ್ತಾಗಿರುತ್ತೆ. ಹಾಗಾದರೆ ಇದನ್ನು ತಯಾರಿಸುವ ವಿಧಾನವನ್ನು ಈಗ ತಿಳಿಯೋಣ.

Ridge gourd peels chips recipe how to make heerekayi sippe chips at home in kannada

ಬೇಕಾಗುವ ಪದಾರ್ಥಗಳು:-

* ಎಳೆಯದಾದ ಹೀರೆಕಾಯಿ 3

* ಅಡುಗೆ ಎಣ್ಣೆ (ಕರಿಯಲು ಬೇಕಾಗುವಷ್ಟು)

* ಗರಂ ಮಸಾಲಾ ಪೌಡರ್ ಸ್ವಲ್ಪ

* ಉಪ್ಪು ರುಚಿಗೆ ತಕ್ಕಷ್ಟು

* ಖಾರದ ಪುಡಿ ಕಾಲ್ ಟೇಬಲ್ ಸ್ಪೂನ್

ತಯಾರಿಸುವ ವಿಧಾನ:-

* ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಸೆಪ್ಪೆಯನ್ನು ತೆಗೆದುಕೊಳ್ಳಿ. ಸಿಪ್ಪೆ ತೆಗೆದ ಬಳಿಕ ಅದನ್ನು ಮತ್ತೊಮ್ಮೆ ತೊಳೆದುಕೊಳ್ಳಿ.

* ನಂತರ ಇದನ್ನು ಬಿಸ್ಕೇಟ್ ಆಕಾರದಲ್ಲಿ ಕಟ್ ಮಾಡಿಕೊಂಡು ಸ್ವಲ್ಪ ಒಣಗಲು ಬಿಡಿ.

* ನೀರು ಇಲ್ಲದಂತೆ ಒಣಗಿದ ಬಳಿಕ, ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಕತ್ತರಿಸಿದ ಹೀರೆಕಾಯಿ ತಂಡುಗಳನ್ನು ಹಾಕಿ

* ಕಡಿಮೆ ಉರಿಯಲ್ಲಿ ಗರಿಗರಿಯಾಗುವವರೆಗೂ ಕೈ ಆಡಿಸಿ. ಇದು ಗರಿಗರಿಯಾಗುತ್ತಿದ್ದಂತೆ ಇದರ ಘಮ ಹೆಚ್ಚಾಗುತ್ತದೆ

* ಬಳಿಕ ಇದಕ್ಕೆ ಸ್ವಲ್ಪ ಗರಂ ಮಸಾಲಾ ಪೌಡರ್, ಉಪ್ಪು, ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಇದು ಸಂಜೆಗೆ ಟೀ ಅಥವಾ ಕಾಫಿ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಜೊತೆಗೆ ಊಟದ ಜೊತೆಗೂ ಇದನ್ನು ತಿನ್ನಬಹುದು. ನೀವು ಇದನ್ನು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ನಿಮ್ಮ ಆತ್ಮೀಯರೊಂದಿಗೆ ಸವಿಯಿರಿ. ಮತ್ತೊಂದು ವಿಧಾನದಿಂದಲೂ ಹೀರೆಕಾಯಿ ಚಿಪ್ಸ್ ತಯಾರಿಸಬಹುದು.

* ಹೀರೆಕಾಯಿ ಸಿಪ್ಪೆ ತೆಗೆಯದೆ ಅದನ್ನು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿ ಸ್ವಲ್ಪ ಒಣಗಲು ಬಿಡಿ.

* ನೀರಿನಾಂಶ ಹೆಚ್ಚಾಗಿ ಇರಬಾರದು. ಆಗ ಇದನ್ನು ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ. ಇದರ ಮೇಲೆ ಉಪ್ಪು, ಖಾರದ ಪುಡಿ ಹಾಗೂ ಸ್ವಲ್ಪ ಪೆಪ್ಪರ್ ಪೌಡರ್ ಉದುರಿಸಿದರೆ ರುಚಿಯಾದ ಹೀರೆಕಾಯಿ ಚಿಪ್ಸ್ ಸವಿಯಲು ಸಿದ್ಧ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+