Rasam Recipe: ರಸಂ ರೆಸಿಪಿ- ಹುಳಿ ಖಾರ ಸಿಹಿ ರಸಂ ತಿಂದರೆ ಫಿದಾ ಆಗುವುದು ಕಸಂ
ರಸಂ ತಯಾರಿಸಲು ಯಾರಿಗೆ ಬರೋದಿಲ್ಲ ಹೇಳಿ. ಪ್ರತಿಯೊಬ್ಬರು ರಸಂ ಅದ್ಭುತವಾಗಿಲ್ಲದೇ ಇದ್ದರೂ ತಕ್ಕಮಟ್ಟಿಗೆ ತಯಾರಿಸುವುದನ್ನ ಕಲಿತಿರುತ್ತಾರೆ. ಯಾಕೆಂದರೆ ರಸಂ ಯಾವುದೇ ಸಾಂಬರ್‌ಗೂ ಕೂಡ ಕಮ್ಮಿ ಇಲ್ಲ. ಬೇಸಿಗೆಯಲ್ಲಿ ತುಂಬಾ ಸುಲಭಾವಾಗಿ ತಯಾರಿಸುವ ಹಾಗೂ ಬಹುಬೇಗ ಜೀರ್ಣವಾಗುವ ಆಹಾರ. ಇವತ್ತು ರಸಂ ಪ್ರೀಯರಿಗೆ ಒಂದಿಷ್ಟು ವಿಭಿನ್ನವಾದ ರಸಂ ತಯಾರಿಸುವ ವಿಧಾನವನ್ನು ತಿಳಿಸಲಿದ್ದೇವೆ.
ಉಪ್ಪು ಹುಳಿ ಖಾರ ಸಿಹಿ ಎಲ್ಲದರ ರುಚಿ ಒಟ್ಟಿಗೆ ನೋಡಲು ಬಯಸುವವರು ಇದನ್ನು ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ. ಅಲ್ಲದೇ ಬೇಸಿಗೆಯಲ್ಲಿ ಈ ರೀತಿ ರಸಂ ತಯಾರಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಮನೆಯಲ್ಲಿ ವಿಶೇಷವಾಗಿ ಆರೋಗ್ಯಕರವಾಗಿ ರಸಂ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಟೊಮ್ಯಾಟೋ 5
* ಈರುಳ್ಳಿ 2
* ಹುಣಸೆಹಣ್ಣು 1 ಹಿಡಿ
* ಬೆಳ್ಳುಳ್ಳಿ 3-4 ಎಸಳು
* ಜೀರಿಗೆ ಕಾಲ್ ಟೇಬಲ್ ಸ್ಪೂನ್
* ಸಾಸಿವೆ ಕಾಲ್ ಟೇಬಲ್ ಸ್ಪೂನ್
* ಕರಿಬೇವು ಸ್ವಲ್ಪ
*ಕೊತ್ತಂಬರಿ ಸ್ವಲ್ಪ
*ಒಣಮೆಣಸಿನಕಾಯಿ 5-6
* ಉಪ್ಪು ರುಚಿಗೆ ತಕ್ಕಷ್ಟು
* ಅಡುಗೆ ಎಣ್ಣೆ
* ಅರಿಶಿಣ ಅರ್ಧ ಟೇಬಲ್ ಸ್ಪೂನ್
*ಒಣಮೆಣಸಿನಕಾಯಿ ಪೌಡರ್ 1 ಟೇಬಲ್ ಸ್ಪೂನ್
ಮಸಾಲ ಪೌಡರ್‌ಗಾಗಿ:-
* ಕಾಳು ಮೆಣಸು ಅರ್ಧ ಟೇಬಲ್ ಸ್ಪೂನ್
* ದನಿಯಾ ಅರ್ಧ ಟೇಬಲ್ ಸ್ಪೂನ್
* ಬಿಳಿ ಎಳ್ಳು ಅರ್ಧ ಟೇಬಲ್ ಸ್ಟೂನ್
* ಲವಂಗ ಅರ್ಧ ಟೇಬಲ್ ಸ್ಟೂನ್
* ಒಣ ಶುಂಠಿ ಒಂದು ಇಂಚು
* ಚಕ್ಕೆ ಒಂದು ಇಂಚು
* ಪಲಾವ್ ಎಲೆ 1
* ಕಸೂರಿ ಮೇಥಿ ಕಾಲ್ ಚಮಚ
* ಕಡಲೆಬೇಳೆ 2 ಟೇಬಲ್ ಸ್ಪೂನ್

ತಯಾರಿಸುವ ವಿಧಾನ
* ಮೊದಲಿಗೆ ಟೊಮೆಟ್ಯೋವನ್ನು ಚೆನ್ನಾಗಿ ತೊಳಿದು ನೀರಿನಲ್ಲಿ ಹಾಕಿ ಕುದಿಸಿ
* ನಂತರ ಅದರ ಸಿಪ್ಪೆಯನ್ನು ತೆಗೆದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ
* ಒಂದು ಬಟ್ಟಲಿಗೆ ಹುಣಸೆ ಹಣ್ಣು ಹಾಕಿ ನೀರು ಹಾಕಿ ಅರ್ಧಗಂಟೆ ಬಿಡಿ, ನೆನೆದ ಮೇಲೆ ಚೆನ್ನಾಗಿ ಕಿವಿಚಿ ನೀರನ್ನು ತೆಗೆದಿಡಿ
* ನಂತರ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾದ ಬಳಿಕ ಜೀರಿಗೆ ಸಾಸಿವೆ ಬೆಳ್ಳಿಳ್ಳಿ ಹಾಕಿ ಹುರಿದುಕೊಳ್ಳಿ.
* ನಂತರ ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ, ಒಣಮೆಣಸಿನಕಾಯಿ ಹಾಕಿ
* ತದನಂತರ ಇದಕ್ಕೆ ಕರಿಬೇವು ಹಾಕಿ ಚಟಪಟ ಅಂದ ಬಳಿಕ ಟೊಮ್ಯಾಟೊ ಪೇಸ್ಟ್ ಹಾಗೂ ಹುಣಸೆಹಣ್ಣಿನ ರಸವನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಕುದಿಸಿ.
* ಬಳಿಕ ಇದಕ್ಕೆ ಅರಿಶಿಣ, ಉಪ್ಪು ಹಾಗೂ ಖಾರದ ಪುಡಿ ಎರಡು ಲೋಟ ನೀರನ್ನು ಬೆರೆಸಿ ಕುದಿಯಲು ಬಿಟ್ಟು ಬಿಡಿ.
* ಒಲೆಯ ಮೇಲೆ ಮತ್ತೊಂದು ಪಾತ್ರೆಯನ್ನು ಇಟ್ಟು ಕಾಳು ಮೆಣಸು, ದನಿಯಾ, ಕಡಲೆಬೇಳೆ, ಚೆಕ್ಕೆ, ಒಣ ಶುಂಠಿ, ಲವಂಗ, ಬಿಳಿ ಎಳ್ಳು, ಕಸೂರಿ ಮೇಥಿ, ಜೀರಿಗೆ, ಪಲಾವ್ ಎಲೆ, ಒಣ ಮೆಣಸಿನಕಾಯಿ, ಸ್ವಲ್ಪ ಕರಿಬೇವು ಎಲ್ಲವನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
* ನಂತರ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಂಡು, ಒಂದು ಟೇಬಲ್ ಸ್ಪೂನ್ ಅಷ್ಟು ಕುದಿಯುತ್ತಿರುವ ರಸಂಗೆ ಹಾಕಿ ಮುಚ್ಚಳ ಮುಚ್ಚಿ ಬಿಟ್ಟುಬಿಡಿ.
* ಐದು ನಿಮಿಷ ಬಿಟ್ಟು ಕೊತ್ತಂಬರಿ ಸೊಪ್ಪು ಉದುರಿಸಿದರೆ ಬಿಸಿ ಬಿಸಿ ರಸಂ ಸವಿಯಲು ಸಿದ್ಧ












Click it and Unblock the Notifications