Pundi Palya Chutney Recipe: ರಾತ್ರಿ ಊಟಕ್ಕೆ ಏನ್ ಮಾಡ್ತೀರಿ? ಜೋಳದ ರೊಟ್ಟಿ ಪುಂಡಿಪಲ್ಯ ಚಟ್ನಿ ಮಾಡಿ ಸಖತ್ತಾಗಿರುತ್ತೆ

ಉತ್ತರ ಕರ್ನಾಟಕದ ಕನ್ನಡ ಭಾಷೆ ಕೊಂಚ ವಿಭಿನ್ನ ಹೇಗೋ ಹಾಗೇ ಅಲ್ಲಿನ ಅಡುಗೆ ಕೂಡ ವಿಭಿನ್ನ. ಉತ್ತರ ಕರ್ನಾಟಕದ ಕೆಲ ಮಾತುಗಳು ದಕ್ಷಿಣ ಕರ್ನಾಟಕ ಜನರಿಗೆ ಅರ್ಥ ಆಗೋದಿಲ್ಲ. ಹಾಗೇ ಅಲ್ಲಿ ತಯಾರಿಸುವ ಕೆಲವೊಂದು ಆಹಾರ ಕೂಡ ದಕ್ಷಿಣ ಕರ್ನಾಟಕ ಮಂದಿಗೆ ತಿಳಿಯುವುದಿಲ್ಲ. ಕೆಲ ಸೊಪ್ಪು ಸ್ಥಳೀಯವಾಗಿ ಮಾತ್ರ ಸಿಗುತ್ತವೆ. ಆದರೆ ಅದನ್ನು ನಾವು ಬೇರೆಡೆ ಕಾಣಲು ಸಾಧ್ಯವಿಲ್ಲ. ಹೀಗೆ ಉತ್ತರ ಕರ್ನಾಟಕದಲ್ಲಿ ಪುಂಡೆಪಲ್ಯ ಅನ್ನೋದು ಒಂದು ಜನಪ್ರಿಯ ಸೊಪ್ಪು. ಇದರಿಂದ ರುಚಿ ರುಚಿಯಾಗಿ ಅಡುಗೆಗಳನ್ನು ತಯಾರಿಸಲಾಗುತ್ತದೆ.

ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಪುಂಡಿ ಸೊಪ್ಪು ಕಾಣುವುದು ಕೊಂಚ ಕಷ್ಟ. ಆದರೂ ಕೆಲವರಿಗೆ ಈ ಸೊಪ್ಪಿನ ಬಗ್ಗೆ ಮಾಹಿತಿ ಇದೆ. ಕೆಲವೆಡೆ ಇದು ದೊರೆಯುತ್ತದೆ ಕೂಡ ಹೌದು. ಆದರೆ ಹೆಚ್ಚಾಗಿ ಜನರಿಗೆ ಈ ಸೊಪ್ಪು ತಿಳಿದಿಲ್ಲ. ಇನ್ನೂ ಈ ಸೊಪ್ಪಿನಿಂದ ಮಾಡುವ ಅಡುಗೆ ತಿಳಿದಿರುವುದು ಕಷ್ಟವೇ ಸರಿ.

Pundi Palya Chutney Recipe: How to make North Karnataka Pundi Palya Chutney in kannada

ಹಾಗಂತ ನೀವು ಸುಮ್ನಾಗಬೇಡಿ. ಈ ಸೊಪ್ಪನ್ನು ಹುಡುಕಿಕೊಂಡಾದ್ರು ಸರಿ ತಂದು ಅಡುಗೆ ಮಾಡಿ ರುಚಿ ನೋಡಿ. ಬಿಸಿ ಬಿಸಿ ಜೋಳದ ರೊಟ್ಟಿ ಜೊತೆ ಪುಂಡಿಪಲ್ಯ ಹಚ್ಚಿಕೊಂಡು ತಿಂದರೆ ಅದೇನ್ ರುಚಿ ಅಂತೀರಾ? ಅದಕ್ಕಿಂತಲೂ ರುಚಿಯಾದ ಊಟ ಬೇರೊಂದು ಇಲ್ಲ ಅನಿಸೋದ್ರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ತಡ ಮಾಡೋದು ಬೇಡ ಪುಂಡಿಪಲ್ಯ ಚಟ್ನಿ ಹೇಗ್ ಮಾಡೋದು ಅಂತ ರೆಸಿಪಿ ನಾವು ಹೇಳ್ತೀವಿ. ನೀವು ಅದನ್ನು ಮನೆಯಲ್ಲಿ ಮಾಡಿ ಸವಿದು, ಅದರ ರುಚಿ ಹೇಗಿತ್ತು ಅಂತ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಮಾಡಲು ಬೇಕಾದ ಪದಾರ್ಥಗಳು:-

* ಪುಂಡಿಪಲ್ಯ/ಸೊಪ್ಪು ಒಂದು ಕಟ್
* ಹಸಿ ಮೆಣಸಿನಕಾಯಿ 4-5
* ಬೆಳ್ಳುಳ್ಳಿ 2-3 ಎಸಳು
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ ಸ್ವಲ್ಪ
* ಈರುಳ್ಳಿ 1
* ಅರಿಶಿಣ ಚಿಟಿಕೆಯಷ್ಟು

Pundi Palya Chutney Recipe: How to make North Karnataka Pundi Palya Chutney in kannada

ತಯಾರಿಸುವ ವಿಧಾನ:-

* ಮೊದಲಿಗೆ ಪುಂಡಿ ಸೊಪ್ಪನ್ನು ಬಿಡಿಸಿಕೊಳ್ಳಿ. ಅದರ ಎಲೆಯನ್ನು ಬಿಡಿಸಿಕೊಂಡು ಚೆನ್ನಾಗಿ ತೊಳಿಯಿರಿ.

* ಒಂದು ಕುಕ್ಕರ್‌ ಅಥವಾ ಒಂದು ಪಾತ್ರೆಯಲ್ಲಿ ಪುಂಡೆ ಸೊಪ್ಪನ್ನು ಹಾಕಿ ಅದರ ಮೇಲೆ ಕಾಣಿಸುವಂತೆ ನೀರು ಹಾಕಿ ಒಲೆಯ ಮೇಲಿಡಿ.

* ಇದು ಕುದಿಯುವಾಗ ಹಸಿ ಮೇಣಸಿನಕಾಯಿ ಸಣ್ಣಕೆ ಕಟ್ ಮಾಡಿ ಹಾಕಿ

* ಬಳಿಕ ಬೆಳ್ಳುಳ್ಳಿ ಹಾಕಿ ಉಪ್ಪು ಹಾಕಿ ಮುಚ್ಚಳ ಮುಚ್ಚಿ.

* ಕುಕ್ಕರ್‌ನಲ್ಲಿ ಇಟ್ಟಿದ್ದರೆ ಒಂದೇ ಒಂದು ವಿಸಿಲ್ ಸಾಕು ಇದು ಬೆಮದಿರುತ್ತದೆ, ಸಾಮಾನ್ಯ ಪಾತ್ರೆಯಲ್ಲಿ 15-20 ನಿಮಿಷ ಬಿಡಿ.

* ಇದು ಬೆಂದಿದೆ ಎಂದು ತಿಳಿಯಲು ಇದರ ಬಣ್ಣ ಬದಲಾಗಿರುತ್ತದೆ. ಜೊತೆಗೆ ಸೊಪ್ಪು ಕೈಯಲ್ಲಿ ಹಿಡಿದರೆ ಜಾರುತ್ತದೆ.

* ಇದನ್ನು ನೀರಿನಿಂದ ಬೇರ್ಪಡಿಸಿ, ಅದನ್ನು ಮಸೆದುಕೊಳ್ಳಿ ಅಥವಾ ಒಂದು ರೌಂಡ್ ಗ್ರೈಂಡ್ ಮಾಡಿ.

* ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಇದಕ್ಕೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ

* ಚಿಟಿಕೆ ಅರಿಶಿಣ ಸ್ವಲ್ಪ ಉಪ್ಪು ಹಾಕಿ ಈ ಒಗ್ಗರಣೆಯನ್ನು ರುಬ್ಬಿಕೊಂಡ ಚೆಟ್ನಿಗೆ ಬೆರೆಸಿದರೆ ಪುಂಡೆಪಲ್ಯದ ಚೆಟ್ನಿ ರೆಡಿ

Pundi Palya Chutney Recipe: How to make North Karnataka Pundi Palya Chutney in kannada

ಇದು ಅನ್ನ, ಚಪಾತಿ, ಜೋಳದ ರೊಟ್ಟಿ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಇದಕ್ಕೆ ಬೇಕಾದರೆ ತೊಗರಿ ಬೇಳೆ ಕೂಡ ಹಾಕಿ ತಯಾರಿಸಬಹುದು. ಈ ಸೊಪ್ಪು ಹುಳಿಯಾಗಿರವುದರಿಂದ ಖಾರ ಉಪ್ಪು ಹುಳಿ ಎಲ್ಲದರ ರುಚಿಯೂ ಬಾಯಿಗೆ ಒಟ್ಟಿಗೆ ಸವಿಯಲು ಸಿಗುತ್ತದೆ. ಮತ್ಯಾಕ್ ತಡ ಮನೆಯಲ್ಲಿ ಒಂದು ಬಾರಿ ನೀವು ಕೂಡ ಟ್ರೈ ಮಾಡಿ ಬಾಯಿ ಚಪ್ಪರಿಸಿ ತಿನ್ನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+