Weight Loss: ವಾಕಿಂಗ್ ಮಾಡುವಾಗ ದೂರ, ಸಮಯ, ಹೆಜ್ಜೆ ಯಾವುದನ್ನು ಗಮನದಲ್ಲಿಡಬೇಕು? ಯಾವದರಿಂದ ತೂಕ ಕಡಿಮೆಗೆ ಸಹಾಯ
ವಾಕಿಂಗ್ ಮಾಡುವುದರಿಂದ ಆಗುವು ಉಪಯೋಗಗಳ ಬಗ್ಗೆ ಹಲವು ಜನರು ಹೇಳುತ್ತಾರೆ. ವೈದ್ಯರು ಸಹ ನಿಮ್ಮ ಆರೋಗ್ಯದಲ್ಲಿ ಏರು ಪೇರು ಆದರೆ ತಕ್ಷಣ ವಾಕಿಂಗ್ ಮಾಡಲು ಸೂಚನೆ ನೀಡುತ್ತಾರೆ. ಅಲ್ಲದೆ ವಾಕಿಂಗ್ ಮಾಡುವುದರಿಂದ ಮುಂದೆ ಆಗಬಹುದಾದ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.
ಪ್ರತಿ ನಿತ್ಯ ವಾಕಿಂಗ್ ಮಾಡುವುದರಿಂದ ಸ್ಥೂಲ ಕಾಯಕ್ಕೆ ಬ್ರೇಕ್ ಹಾಕಬಹುದು. ಇದನ್ನು ಪ್ರತಿ ನಿತ್ಯವೂ ಮಾಡುವುದರಿಂದ ಕೀಲು ನೋವು, ದೇಹ ನೋವು ಮತ್ತು ಬೆನ್ನುನೋವಿನಿಂದ ಪರಿಹಾರ ಪಡೆಯಬಹುದು. ನಿಯಮಿತವಾಗಿ ನಡೆಯುವುದರಿಂದ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ನೀವು ವೇಟ್ ಲಾಸ್ ಮಾಡಲು ಯೋಚಿಸುತ್ತಿದ್ದರೆ, ನೀವು ನಡೆಯುವಾಗ ಇನ್ನು ಈ ಅಂಶಗಳ ಬಗ್ಗೆ ಗಮನ ಹರಿಸುವುದು ತುಂಬ ಅವಶ್ಯಕ.

ಯಾವ ಅಂಶವನ್ನು ಗಮನದಲ್ಲಿಟ್ಟು ವಾಕ್ ಮಾಡಬೇಕು?
ವಾಕಿಂಗ್ ಮಾಡುವಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಾಕ್ ಮಾಡಿದರೆ, ತೂಕವನ್ನು ಕಡಿತಗೊಳಿಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಅಂದಹಾಗೆ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಮೂರು ಅಂಶಗಳೆಂದರೆ, ವ್ಯಾಯಾಮದಂತೆ ನಡಿಗೆಗು ತನ್ನದೇ ಆದ ಮಾದರಿ ಇದೆ. ನಡೆಯುವಾಗ ಸಮಯ, ದೂರ ಅಥವಾ ಹೆಜ್ಜೆಗಳನ್ನು ಯಾವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಬೇಗವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದ್ದರೆ, ಎಷ್ಟು ಕಿಲೋಮೀಟರ್ ನಡೆದಿದ್ದೀರಿ? ಎಷ್ಟು ಸಮಯದವರೆಗೆ ನಡೆಯುತ್ತೀರಿ? ಎಂಬ ವಿಷಯಗಳ ಬಗ್ಗೆ ಗಮನದಲ್ಲಿಟ್ಟುಕೊಳ್ಳುವುದು ಅತ್ಯವಶ್ಯ. ಇನ್ನು ಮೂರನೇಯದಾಗಿ ಎಷ್ಟು ಹೆಜ್ಜೆಗಳನ್ನು ನಡೆಯುತ್ತೀರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯ.
ತೂಕ ಇಳಿಸಲು ಯಾವ ಅಂಶಗಳನ್ನು ಗಮನಿಸಬೇಕು
ತೂಕ ಇಳಿಸಲು ಎಷ್ಟು ಸಮಯ ವಾಕ್ ಮಾಡಬೇಕು ಹಾಗೂ ಎಷ್ಟು ದೂರ ವಾಕ್ ಮಾಡಿದ್ದೀರಿ ಎಂಬುದೇ ಪ್ರಮುಖ ವಾಗುತ್ತದೆ. ವಾಕಿಂಗ್ ಸಮಯದ ಮೇಲೆ ಗಮನ ಹರಿಸುವುದರಿಂದ ಎರಡು ಪ್ರಮುಖ ಲಾಭಗಳು ಆಗುತ್ತವೆ. ಅವು ಹೆಜ್ಜೆ ಎಣಿಕೆ ಹಾಗೂ ದೂರವನ್ನು ಕ್ರಮಿಸುವುದರಿಂದ ಆಗದು. ಸಮಯದ ಮೇಲೆ ನಿಯಂತ್ರಣ ಇಡುವುದರಿಂದ ನೀವು ದಿನಂ ಪ್ರತಿ ನೀವು ವಾಕ್ ಮಾಡುವ ಸಮಯವನ್ನು ವೃದ್ಧಿಸಿಕೊಳ್ಳಬಹುದು.

ಸಮಯದ ಅನುಸಾರ ವಾಕ್ ಮಾಡಿದರೆ ಏನೆಲ್ಲಾ ಲಾಭ
ನೀವು ವಾಕಿಂಗ್ ಮಾಡಲು ಹೋದಾಗ ಟೈಮ್ ಫಿಕ್ಸ್ ಆಗುತ್ತದೆ. ನೀವು ಪ್ರತಿದಿನವೂ ಬೇಗ ಏಳಲು ಸಹಾಯವಾಗುತ್ತದೆ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸಬಹುದು. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಎರಡನೆಯ ಪ್ರಯೋಜನವೆಂದರೆ ನೀವು ನಿಮ್ಮ ಸಮಯದ ಮಿತಿಯೊಳಗೆ ನಿಮ್ಮ ವ್ಯಾಯಾಮದ ಸಮಯವನ್ನು ಕ್ರಮೇಣ ಹೆಚ್ಚಿಸಬಹುದು. ನಿಮ್ಮ ತ್ರಾಣ ಹೆಚ್ಚಾದಂತೆ ನೀವು ನಡೆಯುವ ಸಮಯವನ್ನು ಕೂಡ ಹೆಚ್ಚಿಸಬಹುದು. ಆದರೆ ಸ್ಟೆಪ್ಸ್ ಕೌಂಟ್ ಅಥವಾ ಕ್ಯಾಲೋರಿ ಕೌಂಟ್‌ನಿಂದಲೂ ನಿಮ್ಮ ಗುರಿಯನ್ನು ಮುಟ್ಟಬಹುದು.
ವಾಕಿಂಗ್ ನಿಯಮಿತವಾಗಿ ಮಾಡುವುದರಿಂದ ಮುಂದೆ ಆಗಬಹುದಾದ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಅಲ್ಲದೆ ವಾಕ್ ಮಾಡುವುದರಿಂದ ತೂಕ ಇಳಿಯಲು ಸಹಾಯ. ತೂಕ ಇಳಿಸಿಕೊಳ್ಳಲು ವಾಕ್ ಮಾಡಿದರೆ ಬೆವರು ಬರುವುದು ಅವಶ್ಯಕ. ತಜ್ಞರು ಹೇಳುವಂತೆ ವಾಕ್ ಮಾಡಿದಾಗ ಹಣೆ ಅಥವಾ ಬೆನ್ನಿನ ಭಾಗದಲ್ಲಿ ಬೆವರು ಬಂದರೆ, ನೀವು ಮಾಡಿದ ವಾಕಿಂಗ್ ಪ್ರಯೋಜನಕಾರಿ ಎಂದು ತಿಳಿಸುತ್ತಾರೆ.
ದಿನ ನಿತ್ಯ ವಾಕ್ ಮಾಡುತ್ತಾ ಇದ್ದಂತೆ ವಾಕ್ ಮಾಡುವ ದೂರವನ್ನು ಕ್ರಮೇಣ ಹೆಚ್ಚಿಸಿಕೊಳ್ಳಬಹುದು. ಇದರಿಂದ ನಿಮ್ಮ ದೇಹದ ತೂಕವನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳಬಹುದು. ಹೀಗಾಗುವುದರಿಂದ ನಿಮ್ಮ ದೇಶದ ಉಲ್ಲಾಸದಿಂದ ಕೂಡಿರುತ್ತದೆ. ದಿನ ನಿತ್ಯ ವಾಕ್ ಮಾಡಿ ಹಲವು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್












Click it and Unblock the Notifications