Onion Kebab Recipe: ಬೆಳ್ಳುಳ್ಳಿ ಅಲ್ಲ ಈರುಳ್ಳಿ ಕಬಾಬ್: ಇದು ಸಸ್ಯಾಹಾರಿ ಜನರಿಗೆ ಮಾತ್ರ!
ನೀವು ಸಸ್ಯಹಾರಿನಾ? ಕಬಾಬ್ ತಿನ್ಬೇಕು ಅಂತ ಅನ್ಸಿದಿಯಾ? ಮಾಂಸಾಹಾರ ಬಿಟ್ಟರೆ ಸಸ್ಯಾಹಾರದಲ್ಲಿ ಕಬಾಬ್ ಮಾಡಲು ಆಗುವುದಿಲ್ಲವೇ ಅಂತ ಯೋಚನೆ ಮಾಡ್ತಾಯಿದಿರಾ? ಹಾಗಾದರೆ ಮನೆಯಲ್ಲಿ ಮಾಡಿ ಈರುಳ್ಳಿ ಕಬಾಬ್. ನಾವೆಲ್ಲಾ ಚಿಕನ್ ಕಬಾಬ್, ಮಟನ್ ಕಬಾಬ್, ಫಿಶ್ ಕಬಾಬ್ ಕೇಳಿದ್ದೇವೆ. ಆದರೆ ಇದ್ಯಾವುದಪ್ಪಾ ಇದು ಈರುಳ್ಳಿ ಕಬಾಬ್ ಅಂದ್ರಾ? ಅದರ ರೆಸಿಪಿ ಅನ್ನು ನಾವು ನಿಮಗೆ ಹೇಳಿಕೊಡುತ್ತೇವೆ.
ಅದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ. ರುಚಿಯಾಗಿ ತಯಾರಿಸುವುದು ಮಾತ್ರವಲ್ಲದೆ ಹೊಟ್ಟೆ ತುಂಬಾ ತಿನ್ಬಹುದು. ಹಾಗಾದರೆ ತಡ ಮಾಡುವುದು ಬೇಡ ಈರುಳ್ಳಿ ಕಬಾಬ್ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ಮೊದಲಿಗೆ ಈರುಳ್ಳಿ ಕಬಾಬ್ ತಯಾರಿಸಲು ಬೇಕಾಗುವ ಪದಾರ್ಥಗಳು ತಿಳಿಯೋಣ.

ಈರುಳ್ಳಿ ಕಬಾಬ್ ತಯಾರಿಸಲು ಬೇಕಾಗುವ ಪದಾರ್ಥಗಳು:
* ಪುದೀನಾ ಒಂದು ಹಿಡಿ
* ಹಸಿ ಮೆಣಸಿನಕಾಯಿ ಮೂರು
* ಬೆಳ್ಳುಳ್ಳಿ 8-10 ಎಸಳು
* ಕಾರ್ನ್‌ಫ್ಲೋರ್ 4 ಸ್ಪೂನ್
* ಮೈದಾ ಹಿಟ್ಟು ಒಂದು ಸ್ಪೂನ್
*ಕಾಳು ಮೆಣಸು ಒಂದು ಸ್ಪೂನ್
* ಖಾರದ ಪುಡಿ ಒಂದು ಸ್ಪೂನ್
* ಉಪ್ಪು ರುಚಿಗೆ ತಕ್ಕಷ್ಟು
* ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಸ್ಪೂನ್
* ಮೊಟ್ಟೆ ಒಂದು
* ನಿಂಬೆ ಹಣ್ಣಿನ ರಸ
* ಈರುಳ್ಳಿ 4
*ಕರಿಬೇವು ಸ್ವಲ್ಪ
* ಎಣ್ಣೆ

ತಯಾರಿಸುವ ವಿಧಾನ:
* ಮೊದಲಿಗೆ ಪುದೀನಾ, ಹಸಿ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯನ್ನು ಒಂದು ಹೊರಳಲ್ಲಿ ಹಾಕಿ ಕುಟ್ಟಿ ಪೇಸ್ಟ್ ಮಾಡಿಕೊಳ್ಳಿ.
* ಒಂದು ಬೌಲ್‌ಗೆ ಕಾರ್ನ್‌ಫ್ಲೋರ್ ಹಾಕಿಕೊಳ್ಳಿ, ಒಂದು ಸ್ಪೂನ್ ಮೈದಾ ಹಿಟ್ಟು, ಕಾಳು ಮೆಣಸು ಪೌಡರ್ ಒಂದು ಸ್ಪೂನ್, ಖಾರದ ಪುಡಿ ಒಂದು ಸ್ಪೂನ್, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
* ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದು ಮೊಟ್ಟೆ, ರುಬ್ಬಿದ ಮಸಾಲಾ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಗಟ್ಟೆ ಎನಿಸಿದಲ್ಲಿ ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ.
* ಇದನ್ನು ಚೆನ್ನಾಗಿ ಕಲಿಸಿದ ತಕ್ಷಣ ಇದಕ್ಕೆ ಉದ್ದಕೆ ಹೆಚ್ಚಿದ ಈರುಳ್ಳಿ, ಕರಿಬೇವು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಯಾವುದೇ ಕಾರಣಕ್ಕೂ ನೀರು ಹಾಬೇಡಿ.
* ಒಂದು ಬಾಣಲೆಗೆ ಎಣ್ಣೆ ಹಾಕಿ ಇದು ಬಿಸಿಯಾದ ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನು ಉಂಡೆಯಾಕಾರದಲ್ಲಿ ಅಲ್ಲದೇ ಇದ್ದರೂ ಹಾಗೇ ಸ್ವಲ್ಪ ಸ್ವಲ್ಪ ಹಿಟ್ಟಿನಲ್ಲಿನ ಈರುಳ್ಳಿ ತೆಗೆದುಕೊಂಡು ಹಾಕಿ.
ಇದನ್ನು ಗರಿಗರಿಯಾಗಿ ರುಚಿಯಾಗಿರುತ್ತದೆ. ಸಂಜೆ ತಿಂಡಿಗೆ ಇದನ್ನು ನೀವು ಮಾಡಿ ತಿನ್ನಬಹುದು. ಇದು ಕಬಾಬ್ ಟೇಸ್ಟ್ ಇರುತ್ತದೆ. ಆದರೆ ಇದಕ್ಕೆ ಚಿಕನ್ ಬಳಸಲಾಗಿರುವುದಿಲ್ಲ. ಅದರ ಬದಲಿಗೆ ಈರುಳ್ಳಿಯಲ್ಲಿ ತಯಾರಿಸಲಾಗುತ್ತದೆ. ಮನೆಯಲ್ಲಿ ಒಮ್ಮೆ ಮಾಡಿ ತಿನ್ನಿ.
ಬೆಳ್ಳುಳ್ಳಿ ಕಬಾಬ್ ಫುಲ್ ಫೇಮಸ್!
ಇನ್ನು ಕೆಲವು ದಿನಗಳಿಂದ ಕರ್ನಾಟಕದಲ್ಲಿ ಬೆಳ್ಳುಳ್ಳಿ ಕಬಾಬ್ ಫುಲ್ ಫೇಮಸ್ ಆಗಿದೆ. ಈ ಸಮಯದಲ್ಲೇ ಇದೀಗ ಈರುಳ್ಳಿ ಕಬಾಬ್ ಕೂಡ ವೈರಲ್ ಆಗುತ್ತಿದೆ. ಯಾಕಂದ್ರೆ ಬೆಳ್ಳುಳ್ಳಿಯ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಬೆಳ್ಳುಳ್ಳಿ ಕಬಾಬ್ ಬದಲು ಈರುಳ್ಳಿನ ಟ್ರೈ ಮಾಡಬಹುದಾ? ಅಂತಾ ಪ್ರಶ್ನೆಗಳು ಎದ್ದಿವೆ. ಇದೇ ಸಮಯದಲ್ಲಿ ಈರುಳ್ಳಿ ಕಬಾಬ್ ಕೂಡ ವೈರಲ್ ಆಗುತ್ತಿದೆ. ಹಾಗೇ ಬೆಳ್ಳುಳ್ಳಿ ಕಬಾಬ್ ನಾನ್ ವೆಜ್ ತಿನ್ನೋರಿಗೆ ಆಗಿದ್ರೆ, ಈರುಳ್ಳಿಯ ಕಬಾಬ್ ವೆಜಿಟೇರಿಯನ್ ಮಂದಿಗೆ ತುಂಬಾ ಇಷ್ಟವಾಗಲಿದೆ.












Click it and Unblock the Notifications