Review: ವಿನ್ಯಾಸ, ಗುಣಮಟ್ಟ, ಡಿಸ್‌ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್
ಪ್ರೀಮಿಯಂ ಮಧ್ಯಮ ಶ್ರೇಣಿಯ ನಾರ್ಡ್ 6 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಒನ್‌ಪ್ಲಸ್ ಭಾರತದಲ್ಲಿ ಬಿಡುಗಡೆ ಮಾಡಿದೆ.ಈ ಫೋನ್ 8GB RAM + 246GB ಮತ್ತು 12GB RAM + 256GB ಸ್ಟೋರೇಜ್ ನ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ.ಈ ಫೋನ್ ಬೆಲೆಯನ್ನು ಕ್ರಮವಾಗಿ 38,999 ಮತ್ತು 41,999 ರೂ. ಎಂದು ನಿಗದಿಪಡಿಸಲಾಗಿದೆ.
ವಿನ್ಯಾಸ, ಗುಣಮಟ್ಟ ಮತ್ತು ಡಿಸ್‌ಪ್ಲೆ:
ಹಿಂದಿನ ಫೋನ್‌ಗಳಿಗೆ ಹೋಲಿಸಿದರೆ ನಾರ್ಡ್ 6ಗೆ ಹೊಸ ವಿನ್ಯಾಸ ನೀಡಲಾಗಿದೆ.ಒನ್‌ಪ್ಲಸ್ ಫೋನ್ ಡ್ಯುಯಲ್-ಕ್ಯಾಮೆರಾ ಸಿಸ್ಟಮ್ ಮತ್ತು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಕರ್ವ್ಡ್ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ.ಫೋನಿನ ಉಳಿದ ಭಾಗವು ಸರಳ ವಿನ್ಯಾಸವನ್ನು ಹೊಂದಿದೆ.
ಈ ಫೋನಿನ ಎಡಭಾಗದಲ್ಲಿ, ಪ್ಲಸ್ ಕೀಯನ್ನು ನೀಡಲಾಗಿದೆ.ಇದನ್ನು ಸೈಲೆಂಟ್/ನೈಟ್ ಮೋಡ್ ಅನ್ನು ಆನ್ ಮಾಡುವ ಸಲುವಾಗಿ,ಡು ನಾಟ್ ಡಿಸ್ಟರ್ಬ್, ಕ್ಯಾಮೆರಾ, ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು, ವಾಯ್ಸ್ ಮೆಮೊಗಾಗಿ, ಟಾರ್ಚ್ ಮತ್ತು ಮೈಂಡ್ ಸ್ಪೇಸ್, AIಫೀಚರ್ ನಿರ್ವಹಿಸಲು ಬಳಸಬಹುದಾಗಿದೆ. ಅಲ್ಲದೆ ಇದು ಆನ್-ಸ್ಕ್ರೀನ್ ಮಾಹಿತಿಯನ್ನು ರೆಕಾರ್ಡ್ ಮಾಡಲು ಕೂಡಾ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಪ್ರಾಜೆಕ್ಟ್ ವರ್ಕ್‌ಗೆ ನೆರವಾಗುತ್ತದೆ. ಇದರಿಂದ ಫೋನ್‌ನ ಸ್ಕ್ರೀನ್ ಸ್ಕ್ಯಾನ್ ಮಾಡಲೂಬಹುದು.

ಉಳಿದಂತೆ ಈ ಡಿವೈಸ್ ಕೂಡಾ ಇತರ ಫೋನ್‌ಗಳಂತೆ ಪ್ರಮಾಣಿತ ಬಟನ್‌ಗಳು ಮತ್ತು ಪೋರ್ಟ್‌ಗಳನ್ನು ಹೊಂದಿವೆ. ಬಲಭಾಗದಲ್ಲಿ ಪವರ್ ಮತ್ತು ವಾಲ್ಯೂಮ್ ರಾಕರ್‌ಗಳಿವೆ.ಫೋನಿನ ತಳಭಾಗದಲ್ಲಿ ಸ್ಪೀಕರ್, ಮೈಕ್ರೊಫೋನ್ ಮತ್ತು ಟೈಪ್-ಸಿ ಯುಎಸ್‌ಬಿ ಪೋರ್ಟ್‌ಗಳಿವೆ.ಮೇಲ್ಭಾಗದಲ್ಲಿ ಮೈಕ್ರೊಫೋನ್, ಪ್ರಾಕ್ಸಿಮಿಟಿ ಸೆನ್ಸರ್ ಮತ್ತು ಐಆರ್ ಬ್ಲಾಸ್ಟರ್‌ಗಳಿವೆ. ಈ ಫೋನ್ ಕ್ವಿಕ್ ಸಿಲ್ವರ್, ಫ್ರೆಶ್ ಮಿಂಟ್ ಮತ್ತು ಪಿಚ್ ಬ್ಲ್ಯಾಕ್ ಎನ್ನುವ ಮೂರು ಬಣ್ಣಗಳಲ್ಲಿ ಲಭ್ಯವಿದೆ.
ಇದರ ಡಿಸ್‌ಪ್ಲೆಗೆ ಕ್ರಿಸ್ಟಲ್ ಗಾರ್ಡ್ ಗ್ಲಾಸ್ ಶೀಲ್ಡ್ ರಕ್ಷಣೆಯಿದೆ. IP66/68/69/69K ರೇಟಿಂಗ್ ಮತ್ತು ಮಿಲಿಟರಿ ದರ್ಜೆಯ MIL-STD-810H ಡ್ಯುರೆಬಿಲಿಟಿ ಸರ್ಟಿಫಿಕೇಟ್ ಇದಕ್ಕೆ ಲಭ್ಯವಿದೆ.
ಇದು 6.78-ಇಂಚಿನ (2772 x 1272 ಪಿಕ್ಸೆಲ್‌ಗಳು) 1.5K AMOLED ಡಿಸ್‌ಪ್ಲೆ ಹೊಂದಿದೆ. ಇದರಿಂದ 165Hz ವರೆಗಿನ ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 3600 nits ವರೆಗಿನ ಗರಿಷ್ಠ ಹೊಳಪನ್ನು ಸ್ಕ್ರೀನ್ ಪಡೆಯುತ್ತದೆ. ಮಲ್ಟಿಮೀಡಿಯಾ ಬಳಕೆ ಮತ್ತು ಗ್ರಾಫಿಕ್ಸ್-ಭರಿತ ಗೇಮ್‌ಗಳಿಗೆ ಇದರ ಸ್ಕ್ರೀನ್ ಹೇಳಿ ಮಾಡಿಸಿದಂತಿದೆ.
ಇನ್ನು ಇನ್-ಡಿಸ್‌ಪ್ಲೆ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್, ಲೋ ಫಾಲ್ಸ್ ರಿಜೆಕ್ಷನ್‌ನೊಂದಿಗೆ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ.
ಕಾರ್ಯಕ್ಷಮತೆ:
3.21 GHz ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s Gen 4 ಆಕ್ಟಾ-ಕೋರ್ ಪ್ರೊಸೆಸರ್ ಇದರಲ್ಲಿದೆ. ಜೊತೆಗೆ ಇದನ್ನು ಅಡ್ರಿನೊ 825 GPU, 8GB / 12GB LPDDR5X RAM ಮತ್ತು 256GB UFS 4.1 ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ.
ಈ ಡಿವೈಸ್ ಜನಪ್ರಿಯ ಹಾಗೂ ಭಾರೀ ಗ್ರಾಫಿಕ್ಸ್ ಹೊಂದಿರುವ AAA ಗೇಮಿಂಗ್ ಟೈಟಲ್‌ಗಳನ್ನು ಸುಲಭವಾಗಿ ನಿರ್ವಹಿಸಬಲ್ಲದು. ಜೊತೆಗೆ ಕೃತಕ ಬುದ್ಧಿಮತ್ತೆ ಅಪ್ಲಿಕೇಶನ್‌ಗಳನ್ನು ಸರಾಗವಾಗಿ ಚಲಾಯಿಸಬಲ್ಲದು. OTT ಅಪ್ಲಿಕೇಶನ್‌ಗಳಲ್ಲಿ ವೀಡಿಯೊ ಕರೆಗಳು ಮತ್ತು ಕಟೆಂಟ್ ಸ್ಟ್ರೀಮಿಂಗ್‌ಗಾಗಿ ಸ್ಥಿರ, ಫಾಸ್ಟ್ ಡೇಟಾ ನೀಡಲು G2 ವೈ-ಫೈ ಚಿಪ್ ಇದರಲ್ಲಿ ಅಳವಡಿಸಲಾಗಿದೆ.
ಇದರಲ್ಲಿ Android 16-ಆಧಾರಿತ OxygenOS 16 ಇದೆ. ನಾಲ್ಕು ವರ್ಷಗಳ ಕಾಲ Android OS ಅಪ್‌ಡೇಟ್ ಸಿಗಲಿದೆ. ಆರು ವರ್ಷಗಳ ಕಾಲ ಸೈಬರ್ ಸುರಕ್ಷಾ ಕವಚ, ಅಂದರೆ 2032ರ ತನಕ ಸೈಬರ್ ಸುರಕ್ಷೆ ಲಭ್ಯವಿದೆ.
ಇನ್ನು ಬ್ಯಾಟರಿ ವಿಷಯಕ್ಕೆ ಬಂದರೆ, ಇದರಲ್ಲಿ 9,000mAh ಸಾಮರ್ಥ್ಯದ ಬ್ಯಾಟರಿ ಇದೆ. ಸಾಮಾನ್ಯವಾಗಿ ಬಳಸಿದರೆ, ಸುಲಭವಾಗಿ ಒಂದು ದಿನ ಬ್ಯಾಟರಿಯಲ್ಲಿ ಚಾರ್ಜ್ ಉಳಿಯುತ್ತದೆ. ಇದು 80W ಫಾಸ್ಟ್ ಚಾರ್ಜಿಂಗ್ ಫೀಚರ್ ಕೂಡಾ ಇದೆ. ಇದು 75 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ 100ಶೇಕಡಾ ತನಕ ಚಾರ್ಜಿಂಗ್ ಮಾಡುತ್ತದೆ. ಇದು 27W ರಿವರ್ಸ್ ವೈರ್ಡ್ ಚಾರ್ಜಿಂಗ್‌ಗೂ ಸಪೋರ್ಟ್ ಮಾಡುತ್ತದೆ.
ಫೋಟೋಗ್ರಫಿ:
OnePlus Nord 6 ಡ್ಯುಯಲ್-ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ - ಮುಖ್ಯ 50MP ಕ್ಯಾಮೆರಾ (1/1.95-ಇಂಚಿನ Sony LYTIA-600 SMOS ಸೆನ್ಸಾರ್, f/1.8 ಅಪರ್ಚರ್, OIS: ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ) ಮತ್ತು 8MP 112-ಡಿಗ್ರಿ ಅಲ್ಟ್ರಾ-ವೈಡ್ ಕ್ಯಾಮೆರಾ (OmniVision OV08F ಸೆನ್ಸಾರ್, f/2.2 ಅಪರ್ಚರ್ ಜೊತೆಗೆ).
ಕಡಿಮೆ ಬೆಳಕಿನ ಹೊತ್ತಲ್ಲಿ, ಅಂದರೆ, ಹಗಲು, ಒಳಾಂಗಣ ಸನ್ನಿವೇಶ, ಸಂಜೆಯ ಬೆಳಕಿನಲ್ಲಿ ಅತ್ಯುತ್ತಮ ಫೋಟೋ ಕ್ಲಿಕ್ ಮಾಡುತ್ತದೆ.
ಪೋರ್ಟ್ರೇಟ್ ಮೋಡ್ ಫೋಟೋಗಳಿಗೂ ಇದು ಹೇಳಿಮಾಡಿಸಿದಂತಿದೆ. ಇದು ವಿಷಯದ ಮೇಲೆ ಮುಖ್ಯವಾಗಿ ಫೋಕಸ್ ಮಾಡುತ್ತದೆ. ಹಿನ್ನೆಲೆಯನ್ನು ಎಷ್ಟು ಬೇಕೋ ಅಷ್ಟೇ ಇಡುತ್ತದೆ. ಹಿನ್ನೆಲೆಯ ಉಳಿದ ಭಾಗಗಳು ಮಸುಕಾಗುತ್ತವೆ. ಇದು ಬೊಕೇಹ್ ಎಫೆಕ್ಟ್ ನೀಡುತ್ತದೆ.
ಎಐ ಫೋಟೋಗ್ರಫಿ ಟೂಲ್‌ನ್ನು ಇದು ಸಪೋರ್ಟ್ ಮಾಡುತ್ತದೆ. ಎಐ ಪೊಟ್ರೇಟ್ ಗ್ಲೋ, ಎಐ ಫರ್ಪೆಕ್ಟ್ ಶಾಟ್, ಎಐ ಅನ್‌ಬ್ಲರ್ ಇತ್ಯಾದಿ ಟೂಲ್‌ಗಳನ್ನು ಈ ಫೋನ್‌ನಲ್ಲಿ ಬಳಸಬಹುದಾಗಿದೆ.
ರಾತ್ರಿಯಲ್ಲಿ, ಇದು ಕಡಿಮೆ ಶಬ್ದದೊಂದಿಗೆ ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯುತ್ತದೆ. ಇದು ಪ್ರತಿ ಸೆಕೆಂಡಿಗೆ 60 ಫ್ರೇಮ್‌ಗಳಲ್ಲಿ 4K ವೀಡಿಯೊ ರೆಕಾರ್ಡಿಂಗ್ ಇದರಲ್ಲಿ ಸಾಧ್ಯವಿದೆ.
OnePlus ಫೋನ್‌ನಲ್ಲಿ 32MP (f/2.0) ಮುಂಭಾಗದ ಕ್ಯಾಮೆರಾ ಇದೆ. ಇದರಿಂದಾಗಿ ಸೂರ್ಯನ ಬೆಳಕಿನಲ್ಲಿ ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ತೆಗೆಯಬಹುದಾಗಿದೆ. ಇದರಲ್ಲಿ 4K ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಬಹುದು, ಆದರೆ 30fps ನಲ್ಲಿ.
ಕೊನೆಯಲ್ಲಿ ಹೇಳುವುದಾದರೆ:
OnePlus Nord 6 ಫೀಚರ್‌ಗಳ ದೃಷ್ಟಿಯಿಂದ ಹೇಳಬೇಕಾದರೆ, ಇದಕ್ಕೆ ಹಾಕಿದ ಹಣ ವ್ಯರ್ಥವಾಗಲ್ಲ. ಅಷ್ಟೊಂದು ಫೀಚರ್‌ಗಳು ಈ ಫೋನ್‌ನಲ್ಲಿವೆ. ಇದರ ನಿರ್ಮಾಣ ಗುಣಮಟ್ಟ ತುಂಬಾ ಚೆನ್ನಾಗಿದೆ. ಸುಗಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ದೀರ್ಘ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ ಮತ್ತು ಅತ್ಯುತ್ತಮ ಡ್ಯುಯಲ್-ಕ್ಯಾಮೆರಾ ಹಾರ್ಡ್‌ವೇರ್ ಅನ್ನು ಹೊಂದಿದೆ.
(ಬರಹ: ರಂಜಿತಾ ಆರ್.ಕೆ.)
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?














Click it and Unblock the Notifications