Get Updates
Get notified of breaking news, exclusive insights, and must-see stories!

Holi 2024: ನವವಿವಾಹಿತೆ ಅತ್ತೆಯೊಂದಿಗೆ ಹೋಳಿ ಆಚರಿಸಿದರೆ ತಾಯಿ ಮನೆಯಲ್ಲಿ ಆರ್ಥಿಕ ಸಂಕಷ್ಟ...

ಹೋಳಿ ವಿಶೇಷವಾದ ಹಬ್ಬ. ಯಾಕೆಂದರೆ ಹೋಳಿಯು ಕೇವಲ ಹಬ್ಬವಾಗಿರದೆ ಸಂಭ್ರಮ ಮತ್ತು ಬದಲಾವಣೆಗೆ ಹೆಸರಾಗಿದೆ. ಹೋಳಿ ಹಬ್ಬ ಹೊಸದಾಗಿ ಮದುವೆಯಾದ ಜೋಡಿಗಳಿಗೆ ಮಹತ್ವದ್ದಾಗಿದೆ. ಈ ಹೋಳಿ ಹಬ್ಬದಂದು ನವ ವಧು ಕೆಲ ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ.

ಹೌದು... ನವವಿವಾಹಿತೆ ಮೊದಲ ಹೋಳಿಯನ್ನು ಅತ್ತೆಯ ಮನೆಯಲ್ಲಿ ಆಚರಿಸದೆ ತನ್ನ ತಾಯಿಯ ಮನೆಗೆ ಹೋಗುವ ಸಂಪ್ರದಾಯ ಇದೆ. ನವವಿವಾಹಿತೆ ಮದುವೆಯ ನಂತರ ಬರುವ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲೇ ಆಚರಿಸಬೇಕು. ಇದರ ಹಿಂದಿ ಕಾರಣವೇನು ಎಂದು ಈಗ ತಿಳಿಯೋಣ.

newly wed daughter in law should play her first holi at her parents home

ಅತ್ತೆ ಮತ್ತು ಸೊಸೆ ಒಟ್ಟಿಗೆ ಹೋಳಿ ಆಡಬಾರದು

ಅತ್ತೆ ಮತ್ತು ಸೊಸೆ ಒಟ್ಟಿಗೆ ಹೋಲಿಕಾ ದಹನವನ್ನು ವೀಕ್ಷಿಸಿದರೆ, ಅವರ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ನವವಿವಾಹಿತೆ ಮೊದಲ ಹೋಳಿಯಂದು ಅತ್ತೆಯ ಮನೆಯಲ್ಲಿ ಉಳಿಯಬಾರದು ಎಂದು ಹೇಳಲಾಗುತ್ತದೆ. ಈ ಸಂಪ್ರದಾಯದ ಒಂದು ಅಂಶವೆಂದರೆ ಹೊಸ ಸೊಸೆಯು ಹೊಸ ಕುಟುಂಬ ಮತ್ತು ಜನರಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ವಿಶೇಷವಾಗಿ ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧವನ್ನು ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸೊಸೆ ತನ್ನ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲಿ ಆಚರಿಸಬೇಕು.

ಮನೆಯಲ್ಲಿ ಹೋಳಿ ಆಚರಿಸುವುದರಿಂದ ಸಂಬಂಧಗಳು ಗಟ್ಟಿ

ಮೊದಲ ಹೋಳಿಯಂದು ಸೊಸೆ ತನ್ನ ತಾಯಿಯ ಮನೆಗೆ ಬಂದಾಗ, ಅವಳು ಮತ್ತೊಮ್ಮೆ ಕುಟುಂಬದೊಂದಿಗೆ ಬೆರೆಯುವ ಅವಕಾಶವನ್ನು ಪಡೆಯುತ್ತಾಳೆ ಎಂದು ನಂಬಲಾಗುತ್ತದೆ. ಅದೇ ಸಮಯಕ್ಕೆ ಅಳಿಯ ಕೂಡ ಹುಡುಗಿಯ ಮನೆಗೆ ಹೋಳಿ ಹಬ್ಬದ ಶುಭಾಶಯ ಕೋರಲು ಬರುತ್ತಾನೆ. ಹಿಂದೂ ಸಂಪ್ರದಾಯದಲ್ಲಿ ಅಳಿಯನಿಗೆ ಹೆಚ್ಚಿನ ಗೌರವವನ್ನು ನೀಡಲಾಗುತ್ತದೆ. ಅವರನ್ನು ವಿಶೇಷ ಅತಿಥಿಯಂತೆ ಪರಿಗಣಿಸಲಾಗುತ್ತದೆ. ಆದ್ದರಿಂದ ಹುಡುಗಿಯ ತಾಯಿಯ ಕುಟುಂಬವು ತಮ್ಮ ಅಳಿಯನನ್ನು ವಿಶೇಷವಾಗಿ ಸ್ವಾಗತಿಸುತ್ತದೆ. ಇದರಿಂದಾಗಿ ಕುಟುಂಬದಲ್ಲಿನ ವಾತಾವರಣವು ತುಂಬಾ ಆಹ್ಲಾದಕರವಾಗಿರುತ್ತದೆ. ಇದು ಪತಿ-ಪತ್ನಿಯರ ನಡುವೆ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಮತ್ತು ಸಂಬಂಧವನ್ನು ಬಲಪಡಿಸುತ್ತದೆ.

ಭಕ್ತ ಪ್ರಹ್ಲಾದ ಮತ್ತು ಹೋಲಿಕಾಗೆ ಸಂಬಂಧಿಸಿದ ಕಥೆ

ಹೋಲಿಕಾ ದಹನ ಕಥೆಯ ಪ್ರಕಾರ, ಹೋಲಿಕಾ ತನ್ನ ಮಡಿಲಲ್ಲಿ ಭಕ್ತ ಪ್ರಹ್ಲಾದನೊಂದಿಗೆ ಬೆಂಕಿಯಲ್ಲಿ ಕುಳಿತಾಗ, ಭಕ್ತ ಪ್ರಹ್ಲಾದನನ್ನು ರಕ್ಷಿಸಲಾಯಿತು. ಆಗ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಭಸ್ಮವಾದಳು. ಆದರೆ ಕೆಲವೇ ದಿನಗಳಲ್ಲಿ ಹೋಲಿಕಾ ಮದುವೆ ನಿಶ್ಚಯವಾಗಿರುತ್ತದೆ. ಈ ಕಾರಣಕ್ಕಾಗಿ, ಆಕೆಯ ಭಾವಿ ಅತ್ತೆ ಮತ್ತು ಪತಿ ಹೋಲಿಕಾಳನ್ನು ಭೇಟಿಯಾಗಲು ಆಕೆಯ ರಾಜ್ಯಕ್ಕೆ ಬರುತ್ತಾರೆ. ಆದರೆ ಹೋಲಿಕಾ ಸುಟ್ಟು ಬೂದಿಯಾಗಿದ್ದಾಳೆಂದು ತಿಳಿದಾಗ, ಅವರಿಗೆ ನಂಬಲಾಗಲಿಲ್ಲ. ಆಗ ಹೋಲಿಕಾಳ ಅತ್ತೆ ಈ ಸತ್ಯವನ್ನು ತಿಳಿದುಕೊಳ್ಳಲು ಹೋಳಿಕ ಸುಟ್ಟು ಬೂದಿಯಾದ ಸ್ಥಳಕ್ಕೆ ತಲುಪಿದಳು. ಅಲ್ಲಿಗೆ ಹೋದಾಗ ಹೋಲಿಕಾಳ ಅತ್ತೆಯು ಬೂದಿಯಲ್ಲಿದ್ದ ಹೋಲಿಕಾಳ ಆಭರಣವನ್ನು ಕಂಡು ಗಾಬರಿಗೊಂಡು ಪ್ರಜ್ಞಾಹೀನಳಾದಳು. ಈ ಆಘಾತಕ್ಕೆ ಹೋಲಿಕಾ ಅತ್ತೆ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತದೆ.

ಗರ್ಭಿಣಿ ಮಹಿಳೆ ತಾಯಿ ಮನೆಯಲ್ಲೇ ಹೋಳಿ ಆಚರಿಸಬೇಕು

ಹೊಸ ಸೊಸೆಯು ತನ್ನ ತಾಯಿಯ ಮನೆಯಲ್ಲಿ ಹೋಳಿ ಆಚರಿಸಬೇಕು. ಇದರಿಂದ ಮುಂದೆ ದಂಪತಿಗೆ ಹುಟ್ಟುವ ಮಕ್ಕಳು ತುಂಬಾ ಸುಂದರ, ಆರೋಗ್ಯ ಮತ್ತು ಅದೃಷ್ಟವಂತರಾಗಿರುತ್ತಾರೆಂದು ನಂಬಲಾಗುತ್ತದೆ. ಈ ಕಾರಣಕ್ಕಾಗಿ ಹೊಸ ಸೊಸೆ ತನ್ನ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲಿ ಆಚರಿಸುತ್ತಾಳೆ.

ಈ ಸಮಯದಲ್ಲಿ ಹೊಸ ಸೊಸೆ ಗರ್ಭಿಣಿಯಾಗಿದ್ದರೆ, ಅವಳು ತನ್ನ ಮೊದಲ ಹೋಳಿಯನ್ನು ತನ್ನ ತಾಯಿಯ ಮನೆಯಲ್ಲಿ ಆಚರಿಸಬೇಕು. ಯಾಕೆಮದರೆ ಹೋಳಿ ಸಮಯದಲ್ಲಿ ಮನೆಯಲ್ಲಿ ಹೆಚ್ಚು ಚಟುವಟಿಕೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಿಣಿ ಮಹಿಳೆ ವಿಶ್ರಾಂತಿ ಪಡೆಯಲು ಅವಕಾಶವನ್ನು ಪಡೆಯುವುದಿಲ್ಲ. ಈ ಕಾರಣಕ್ಕಾಗಿ ಗರ್ಭಿಣಿ ಮಹಿಳೆ ತನ್ನ ತಾಯಿಯ ಮನೆಯಲ್ಲಿ ಹೋಳಿ ಆಚರಿಸಿದರೆ, ಅವಳು ಚೆನ್ನಾಗಿ ವಿಶ್ರಾಂತಿ ಪಡೆಯಬಹುದು.

ತಾಯಿಯ ಮನೆಯ ಆರ್ಥಿಕ ಸ್ಥಿತಿಯಲ್ಲಿ ಬಲ

ಹೊಸ ಸೊಸೆಯ ಪಾದಗಳು ತುಂಬಾ ಮಂಗಳಕರವೆಂದು ನಂಬಲಾಗಿದೆ. ಅವರು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದಿರುತ್ತಾರೆ ಎನ್ನಲಾಗುತ್ತದೆ. ವಿಶೇಷವಾಗಿ ಸೊಸೆ ತನ್ನ ತಾಯಿಯ ಮನೆಗೆ ಹಿಂದಿರುಗಿದಾಗ, ಅವಳು ತನ್ನೊಂದಿಗೆ ಹೊಸ ಜೀವನದ ಅನೇಕ ಸಂತೋಷ ಮತ್ತು ಅದೃಷ್ಟವನ್ನು ತರುತ್ತಾಳೆ. ಈ ಕಾರಣದಿಂದಾಗಿ ನವವಿವಾಹಿತೆ ತನ್ನ ತಾಯಿಯ ಮನೆಗೆ ಅದೃಷ್ಟವನ್ನು ತರುತ್ತಾಳೆ. ಇದು ಅವರ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಇದರಿಂದ ತಾಯಿಯ ಮನೆಯಲ್ಲಿ ಆಕೆಗೆ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+