ಮುಟ್ಟಿನ ಸಮಯದಲ್ಲಿ ಕಾಡುವ ಕೆಟ್ಟ ಹೊಟ್ಟೆ ನೋವು ನಿವಾರಣೆಗೆ ಸರಳ ಮಾರ್ಗಗಳು..!

ಋತುಚಕ್ರದ ಸಮಯ ತಿಂಗಳಿಗೊಮ್ಮೆ ಹೆಣ್ಣು ಮಕ್ಕಳಿಗೆ ಸವಾಲಿನ ದಿನಗಳು. ಈ ಸಮಯಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಣ್ಣು ಮಕ್ಕಳು ಕುಗ್ಗುತ್ತಾರೆ ಹಾಗೂ ಹಲವು ಸಮಸ್ಯೆಗಳಿಂದ ಬಳಲುತ್ತಾರೆ. ಮುಟ್ಟಾಗುವ ಮೂರನಾಲ್ಕು ದಿನಗಳ ಮೊದಲು ಆರಂಭವಾಗುವ ದೇಹದಲ್ಲಿನ ಬದಲಾವಣೆಗಳು ಮುಟ್ಟಾದ ಒಂದು ವಾರದ ವರೆಗೂ ಆಕೆಯು ಬಳಲುವಂತೆ ಮಾಡುತ್ತದೆ.

ಕೆಲವು ಹೆಣ್ಣು ಮಕ್ಕಳಿಗೆ ಮುಟ್ಟು ಸಾಮಾನ್ಯ ದಿನದಂತೆ ಕಳೆದು ಹೋದರೆ ಇನ್ನೂ ಕೆಲವರು ನರಕ ಅನುಭವಿಸಿ ಹೊರ ಬರುತ್ತಾರೆ. ರಕ್ತಸ್ರಾವ, ಹೊಟ್ಟೆನೋವು, ಸೊಂಟ ನೋವು, ಕಿಬ್ಬೊಟ್ಟೆ ನೋವು, ಕೈ ಕಾಲು ಸೆಳೆತ, ತಲೆ ಸುತ್ತುವಿಕೆ, ವಾಕರಿಕೆ, ಊಟ ಸೇರದೇ ಇರುವುದು, ಪದೇ ಪದೇ ಕೋಪಗೊಳ್ಳುವುದು, ಹೀಗೆ ಅನೇಕ ರೀತಿಯ ಸಮಸ್ಯೆಗಳು ಕಾಡುತ್ತಿರುತ್ತದೆ.

Menstrual Cramps: Tips For Getting Period Pain Relief

ತಿಂಗಳ ಮುಟ್ಟಿನ ದಿನಗಳಲ್ಲಿ ಮಹಿಳೆಯರನ್ನು ಕಾಡುವ ಅತಿ ದೊಡ್ಡ ಸಮಸ್ಯೆಯೆಂದರೆ ಹೊಟ್ಟೆ ನೋವು. ಬಹುತೇಕ ಹೆಣ್ಣು ಮಕ್ಕಳಿಗೆ ಇದು ಸಾಮಾನ್ಯವಾಗಿದ್ದು, ಕೆಲವರು ಅತೀವಾಗಿ ನೋವು ಅನುಭವಿಸುತ್ತಾರೆ. ವೈದ್ಯರ ಚಿಕಿತ್ಸೆ ಬಳಿಕವೂ ಕೆಲವರಿಗೆ ಇದು ಕಡಿಮೆಯಾಗುವುದಿಲ್ಲ. ಇಂತವರು ಈ ಕೆಳಗೆ ನೀಡಲಾದ ಸುಲಭ ವಿಧಾನಗಳನ್ನು ಅನುಸರಿಸಿದರೆ ಹೊಟ್ಟೆ ನೋವು ಕಡಿಮೆಯಾಗುವ ಸಾಧ್ಯತೆ ಇದೆ.

ಖನಿಜಯುಕ್ತ ಆಹಾರವನ್ನು ಸೇವಿಸುವುದು

ಸಾಮಾನ್ಯವಾಗಿ ಮುಟ್ಟಿನ ಹೊಟ್ಟೆ ನೋವು ಇರುವ ಸಮಯದಲ್ಲಿ ಊಟ ಸೇರುವುದಿಲ್ಲ. ಯಾವುದೇ ವಸ್ತುವನ್ನು ಕಂಡರೆ ವಾಕರಿಕೆ ಬರುತ್ತಿದೆ. ಈ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇರದೇ ಆದಷ್ಟು ಖನಿಜಯುಕ್ತ ಆಹಾರವನ್ನು ಸೇವಿಸಬೇಕು. ವಿಟಮಿನ್ ಬಿ ಜೀವಸತ್ವ ಇರುವ ಆಹಾರಗಳು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದೇಹದ ಸೆಳೆತವನ್ನು ಕಡಿಮೆ ಮಾಡುತ್ತದೆ. ಧಾನ್ಯಗಳು, ಕಡಲೆಗಳು, ಸಿರಿ ಧಾನ್ಯದ ಆಹಾರಗಳು, ಸೊಪ್ಪು ತರಕಾರಿಗಳು, ಹೂ ಕೋಸಿನಿಂದ ತಯಾರಿಸಿದ ಖಾದ್ಯಗಳು, ಕಿತ್ತಾಳೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.

ಒತ್ತಡ ಕಡಿಮೆ ಮಾಡಿಕೊಳ್ಳಿ

ಮುಟ್ಟಿನ ಸಮಯದಲ್ಲಿ ಒತ್ತಡವು ನಿಮ್ಮ ದೇಹದ ಮೇಲೆ ಹಲವು ವಿಧಗಳಲ್ಲಿ ಪರಿಣಾಮಗಳನ್ನು ಬೀರುತ್ತದೆ. ಒತ್ತಡ ಹೆಚ್ಚಾದರೆ ಹೊಟ್ಟೆ ನೋವು ಕೂಡ ಹೆಚ್ಚಾಗುತ್ತದೆ. ಹೀಗಾಗಿ ಒತ್ತಡ ನಿವಾರಣೆಯತ್ತ ಗಮನ ಹರಿಸಿ. ಹೆಚ್ಚು ನಿದ್ರೆ, ಯೋಗಭ್ಯಾಸ, ಪ್ರಾಣಾಯಾಮ, ವಾಕಿಂಗ್‌, ನೆಚ್ಚಿನ ಹಾಡು ಕೇಳುವುದು, ಟಿವಿ ನೋಡುವುದು ಹೀಗೆ ಒತ್ತಡ ಕಡಿಮೆ ಮಾಡುವ ಕೆಲಸಗಳನ್ನು ಮಾಡಿ.

Menstrual Cramps: Tips For Getting Period Pain Relief

ಇನ್ನು ಮುಟ್ಟಿನ ಹೊಟ್ಟೆ ನೋವು ನಿವಾರಣೆಗೆ ಈ ಕೆಳಗಿನ ಮನೆ ಮದ್ದುಗಳನ್ನು ಪ್ರಯತ್ನಿಸಿ ನೋಡಿ.

1. ಮೊದಲನೆಯದಾಗಿ ನೀರು, ನೀರಿಗಿಂತ ಉತ್ತಮವಾದ ಔಷಧಿ ಮತ್ತೊಂದಿಲ್ಲ. ದೇಹಕ್ಕೆ ಬೇಕಾಗುಷ್ಟು ನೀರು ಕುಡಿದರೆ ಕಾಯಿಲೆಗಳಿಂದ ದೂರ ಇರಲು ಸಾಧ್ಯ. ಮುಟ್ಟಿನ ಸಮಯದಲ್ಲಿ ಮಾತ್ರವಲ್ಲ, ಮುಟ್ಟಾಗುವ ಮೊದಲು ಹಾಗೂ ಕೊನೆಯಾಗುವ ದಿನಗಳಲ್ಲಿ ಹೆಚ್ಚಾಗಿ ನೀರು ಕುಡಿಯಬೇಕು. ಇನ್ನು ಮುಟ್ಟಿನ ಸಮಯದಲ್ಲಿ ಬಿಸಿ ನೀರು ಸೇವನೆ ತುಂಬಾ ಮುಖ್ಯ. ಆಗಾಗ ಬೆಚ್ಚಗಿನ ನೀರು ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

2. ಮನೆಯಲ್ಲಿ ಅಡುಗೆಗೆ ಬಳಸುವ ಅರಶಿನ ಪುಡಿಯನ್ನು ಬಿಸಿ ನೀರಿನೊಂದಿಗೆ ಬೆರೆಸಿ ಚೆನ್ನಾಗಿ ಕಲಿಸಿ ಕುಡಿಯುವುದರಿಂದ ಮುಟ್ಟಿನ ಹೊಟ್ಟೆ ನೋವು ಕಡಿಮೆಯಾಗುತ್ತದೆ.

3. ಜೀರಿಗೆ ಕಷಾಯ ಕುಡಿಯುವುದರಿಂದ ಕೂಡ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಕುದಿಯುತ್ತಿರುವ ನೀರು ಅಥವಾ ಹಾಲಿಗೆ ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಆರಿಸಿ ಕುಡಿಯಬೇಕು.

Menstrual Cramps: Tips For Getting Period Pain Relief

4. ಮೆಂತ್ಯಾವನ್ನು ಕುದಿಯುತ್ತಿರುವ ನೀರಿಗೆ ಹಾಕಿ ಕುದಿಸಿ ಆರಿಸಿ ಕುಡಿಯುವುದರಿಂದ ಮುಟ್ಟಿನ ಹೊಟ್ಟೆ ನೋವು ಕಡಿಮೆಯಾಗುತ್ತದೆ.

5. ಎಳನೀರು ದೇಹವನ್ನು ತಂಪು ಮಾಡುತ್ತದೆ. ಹೀಗಾಗಿ ಮುಟ್ಟಿನ ಸಮಯದಲ್ಲಿ ಎಳನೀರು ಹಾಗೂ ನಿಂಬೆ ಹಣ್ಣಿನ ಜ್ಯೂಸ್‌ಗಳನ್ನು ಆಗಾಗಾ ಕುಡಿಯಬೇಕು.

6. ಮುಟ್ಟಿನ ಸಮಯದಲ್ಲಿ ದೇಹದ ಉಷ್ಣಾಂಷ ಹೆಚ್ಚಿಸುವ ಆಹಾರಗಳನ್ನು ಸೇವಿಸಬಾರದು. ಸೊಪ್ಪು, ತರಕಾರಿ ಹಾಗೂ ಚಾಕಲೇಟ್‌ಗಳನ್ನು ಸೇವಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮುಟ್ಟಿನ ರಕ್ತಸ್ರಾವ ಮುಗಿದ ಬಳಿಕ ದಾಳಿಂಬೆ ಹಣ್ಣು ತಿನ್ನುವುದು ಹಾಗೂ ಜ್ಯೂಸ್‌ಗಳನ್ನು ಕುಡಿಯುವುದು ದೇಹಕ್ಕೆ ಉತ್ತಮ.

Here is the Five simple Home remedies Tips For Period Pain Relief. Know more.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+