Mango Paratha Recipe: ಮಾವಿನ ಹಣ್ಣಿನ ಪರೋಟಾ ತಿಂದಿದಿರಾ? ಒಮ್ಮೆ ಮಾಡಿ ತಿನ್ನಿ ಮತ್ತೆ ಮತ್ತೆ ಮಾಡ್ತೀರಾ...
ಹಣ್ಣುಗಳ ರಾಜ ಮಾವಿನ ಹಣ್ಣು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈಗ ಮಾವಿನ ಹಣ್ಣಿನ ಸೀಸನ್ ಮುಗಿತಾ ಬಂತು. ಆದರೆ ಇನ್ನೂ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮಗೆ ಮಾವಿನ ಹಣ್ಣನ್ನು ತಿನ್ನುವ ಆಸೆ ಇನ್ನೂ ಇದ್ದರೆ ಅದನ್ನು ಅಡುಗೆಗೂ ಬಳಸಿ ತಿನ್ಬಹುದು.
ಹೌದು... ಮಾವಿನ ಹಣ್ಣಿನಿಂದ ಪರೋಟ ಮಾಡಬಹುದು. ಅದರ ರುಚಿ ಹೇಗಿರುತ್ತದೆ ಎಂದು ತಿಳಿಯಲು ನೀವು ಒಮ್ಮೆ ಅದನ್ನು ಮನೆಯಲ್ಲಿ ಟ್ರೈ ಮಾಡಲೇ ಬೇಕು. ಹಾಗಾದರೆ ತಡ ಮಾಡುವುದು ಬೇಡ ಮಾವಿನ ಹಣ್ಣಿನ ಪರೋಟ ತಯಾರಿಸುವ ವಿಧಾನವನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಮಾವಿನ ಹಣ್ಣಿನ ಪರೋಟ ತಯಾರಿಸಲು ಬೇಕಾಗುವ ಪದಾರ್ಥಗಳು:-
*ಗೋಧಿ ಹಿಟ್ಟು 1 ಕಪ್
*ಸಣ್ಣ ಮಾವು 1
*ಜೀರಿಗೆ ಪುಡಿ 1/4 ಟೀಚಮಚ
*ಕೆಂಪು ಮೆಣಸಿನ ಪುಡಿ 1/4 ಟೀಚಮಚ
*ಉಪ್ಪು ರುಚಿಗೆ ತಕ್ಕಷ್ಟು
* ತುಪ್ಪ / ಎಣ್ಣೆ ಟೋಸ್ಟ್ ಮಾಡಲು
*ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾವಿನ ಹಣ್ಣಿನ ಪರೋಟ ತಯಾರಿಸುವ ವಿಧಾನ:-
* ಮೊದಲ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಗಟ್ಟಿಯಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಒಂದು ಪ್ರತ್ಯೇಕ ಪಾತ್ರೆಯಲ್ಲಿ ಮಾವಿನ ಹಣ್ಣಿನ ರಸವನ್ನು ತೆಗೆದುಕೊಳ್ಳಿ.
* ಈ ಮಾವಿನ ರಸವನ್ನು ಕಲಸಿದ ಗೋಧಿ ಹಿಟ್ಟಿನೊಂದಿಗೆ ಚೆನ್ನಾಗಿ ಕಲಸಿ.
* ಮಾವಿನ ಹಣ್ಣಿನ ರಸ ಒಂದು ಕಡೆಗೆ ಉಳಿಯಬಾರದು ಚೆನ್ನಾಗಿ ಚಪಾತಿ ಹಿಟ್ಟಿನೊಂದಿಗೆ ಮಿಕ್ಸ್ ಆಗಬೇಕು ಎನ್ನುವುದನ್ನು ಗಮನದಲ್ಲಿ ಇಡಿ.

* ನಂತರ ಇದಕ್ಕೆ ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ, ಕೊಂಚ ಹೊತ್ತು ಪಾತ್ರೆ ಮುಚ್ಚಿಡಿ.
* ಬಳಿಕ ಸ್ವಲ್ಪ ಎಣ್ಣೆ ಹಾಕಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು, ನಿಮಗೆ ಬೇಕಾದ ಆಕಾರದಲ್ಲಿ ಲಟ್ಟಿಸಿಕೊಳ್ಳಿ.
* ಒಂದು ಹೆಂಚು ಒಲೆಯ ಮೇಲೆ ಇಟ್ಟು ಅದು ಬಿಸಿ ಆದ ಬಳಿಕ ತುಪ್ಪ ಸವರಿ ಪರೋಟವನ್ನು ಎರಡು ಬದಿ ಚೆನ್ನಾಗಿ ಬೇಯಿಸಿದರೆ ರುಚಿಯಾದ ಮಾವಿನ ಹಣ್ಣಿನ ಪರೋಟ ಸವಿಯಲು ಸಿದ್ಧ.












Click it and Unblock the Notifications